Breaking News

ವೈನ್‌ಶಾಪ್ ಮುಚ್ಚಿಸಿ – ಜನಜಾಗೃತಿ ವೇದಿಕೆ ಆಗ್ರಹ

Spread the love

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ, ಕಣಿಯೂರು ಗ್ರಾಮದ, ಪದ್ಮುಂಜ ವೃತ್ತದ ಬಳಿ ಕೊಲ್ಲಾಜೆ ಕಾಂಪ್ಲೆಕ್ಸ್ನಲ್ಲಿ ತೆರೆಯಲಾದ ವೈನ್‌ಶಾಪ್/ಬಾರ್‌ಎಂಡ್ ರೆಸ್ಟೋರೆಂಟ್‌ನ್ನು ಕೂಡಲೇ ಮುಚ್ಚಿಸುವಂತೆ ಜನಜಾಗೃತಿ ವೇದಿಕೆಯು ತಹಶೀಲ್ದಾರ ಮಹೇಜ್‌ಜೆ. ರವರಿಗೆ ಮನವಿ ಮಾಡಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯ ಮೂಲಕ ಜನಜಾಗೃತಿ ವೇದಿಕೆಯ ಪ್ರಾಯೋಜಕತ್ವದಲ್ಲಿ ಸಾವಿರಾರು ಮದ್ಯವರ್ಜನ ಶಿಬಿರಗಳನ್ನು ಬೆಳ್ತಂಗಡಿ ತಾಲೂಕಿನಲ್ಲಿಯೇ ನಡೆಸುತ್ತಿದ್ದು, ಇದರಲ್ಲಿ ಪಾನಮುಕ್ತರಾದವರು ಮರು ವ್ಯಸನಕ್ಕೆ ಬಲಿ ಬೀಳಲು ವೈನ್‌ಶಾಪ್ ಕಾರಣವಾಗುತ್ತದೆ. ಹಳ್ಳಿಯ ಅಭಿವೃದ್ಧಿಯ ದೃಷ್ಟಿಯಿಂದ ಮಹಿಳೆಯರು ಮತ್ತು ಮಕ್ಕಳ ಕಲ್ಯಾಣದ ದೃಷ್ಟಿಯಿಂದ ಈ ವೈನ್‌ಶಾಪ್ ಮುಚ್ಚಿಸಲು ಜನಾಭಿಪ್ರಾಯವನ್ನು ಸಂಗ್ರಹಿಸಲಾಗಿದೆ. ಸುಮಾರು 1425 ಮಂದಿ ಇದರ ವಿರುದ್ಧವಾಗಿ ಸಹಿಯನ್ನು ನೀಡಿರುತ್ತಾರೆ. ಶೀಘ್ರವೇ ಈ ಕುರಿತಂತೆ ಯಾವುದೇ ಕ್ರಮ ಜರುಗದೇ ಹೋದರೆ ತೀವ್ರ ಹೋರಾಟ ನಡೆಸುವುದಾಗಿಯೂ ವೇದಿಕೆ ಆಗ್ರಹಿಸಿದೆ. ಮನವಿ ಪರಿಶೀಲಿಸಿ ಪ್ರತಿಕ್ರಿಯಿಸಿದ ತಹಶೀಲ್ದಾರರು ಸ್ಥಳೀಯ ಮದ್ಯದಂಗಡಿ ಸ್ಥಾಪನೆಯ ಬಗ್ಗೆ ಸ್ಥಳ ಮಹಜರು ಮಾಡಿ ಸರಿಯಾದ ವರದಿಯನ್ನೇ ನೀಡಿರುತ್ತೇವೆ ಎಂದಿದ್ದಾರೆ.

ಅದೇ ರೀತಿ ತಾಲೂಕು ಪಂಚಾಯತ್‌ಕಾರ್ಯ ನಿರ್ವಹಣಾಧಿಕಾರಿ ಕುಸುಮಾಧರ.ಬಿ. ರವರನ್ನು ಭೇಟಿ ಮಾಡಿದ ಜನಜಾಗೃತಿ ವೇದಿಕೆಯತಂಡ ಸದ್ರಿ ವೈನ್‌ಶಾಪ್‌ನ್ನು ಮುಚ್ಚಿಸುವಂತೆ ಸಾರ್ವಜನಿಕರ ಪರವಾಗಿ ಮನವಿ ಸಲ್ಲಿಸಿತು.ಹಾಗೂ ತಾಲೂಕಿನಲ್ಲಿ ಯಾವುದೇ ಹೊಸ ಮದ್ಯದಂಗಡಿ ಸ್ಥಳಾಂತರ ಮಾಡಬಾರದು ಎನ್ನುವ ವಿಶೇಷ ಬೇಡಿಕೆಯನ್ನು ಮುಂದಿಟ್ಟು ಹೋರಾಟ ಮಾಡುತ್ತಿರುವ ಜನಜಾಗೃತಿ ವೇದಿಕೆಯು ಈ ಪ್ರಕ್ರಿಯೆಯನ್ನು ಬಲವಾಗಿ ಖಂಡಿಸುತ್ತಿದೆ ಎ0ದು ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ. , ನಿಕಟಪೂರ್ವ ಅಧ್ಯಕ್ಷ ತಿಮ್ಮಪ್ಪಗೌಡ, ಯೋಜನಾಧಿಕಾರಿಗಳಾದ ಜಯಕರ್ ಶೆಟ್ಟಿ, ಯಶವಂತ್, ಮೋಹನ್.ಕೆ ಉಪಸ್ಥಿತರಿದ್ದರು.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ