ಮಡಿಕೇರಿ : ಕಾರು ಅಪಘಾತದಲ್ಲಿ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ರವೀಂದ್ರನ್ ಮೃತಪಟ್ಟಿರುವ ಘಟನೆ ಹುಣಸೂರು ಸಮೀಪದ ಚಿಲ್ಕುಂದ ಗ್ರಾಮದ ಸಮೀಪ ನಡೆದಿದೆ.
ಕರ್ತವ್ಯಕ್ಕಾಗಿ ತಮ್ಮ ಕಾರಿನಲ್ಲಿ ಮೈಸೂರಿನಿಂದ ಸೋಮವಾರಪೇಟೆಗೆ ತೆರಳುತ್ತಿದ್ದ ಸಂದರ್ಭ ಚಿಲ್ಕುಂದ ಗ್ರಾಮದ ಸಮೀಪ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿ ಹೊಡೆದಪರಿಣಾಮ ತೀವ್ರಗಾಯ ಗೊಂಡಿದ್ದರು. ತಕ್ಷಣವೇ ಮೈಸೂರಿನ ಅಪಲೋ ಆಸ್ಪತ್ರೆಗೆ ಸಾಗಿಸಲಾಯಿತಾದರು ದಾರಿ ಮಧ್ಯೆ ಮೃತಪಟ್ಟಿದ್ದರು.
ಜೊತೆಯಲ್ಲಿ ಪ್ರಯಾಣಿಸುತ್ತಿದ್ದ ತಂಗಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಪತ್ನಿ ಹಾಗೂ ಮಗ ಅಪಾಯದಿಂದ ಪಾರಾಗಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆಯಷ್ಟೇ ಕೊರೋನದಿಂದ ತಮ್ಮ ತಾಯಿಯನ್ನು ಕಳೆದು ಕೊಂಡಿದ್ದ ಇವರು ಕರ್ತವ್ಯಕ್ಕೆ ಮರಳುತಿರುವಾಗ ಈ ದುರ್ಘಟನೆ ನಡೆದಿರುವುದು ವಿಪರ್ಯಾಸ.
ಇಲವಾಲ ಪೊಲೀಸರು ಮೊಕದಮ್ಮೆ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
Laxmi News 24×7