Breaking News

ಅಸಭ್ಯ ವರ್ತನೆ ತೋರಿದ್ದಕ್ಕೆ ಸ್ಕೂಟರ್ ಎತ್ತಿ ಚರಂಡಿಗೆ ಎಸೆದ ಮಹಿಳೆ; ನೆಟ್ಟಿಗರಿಂದ ಶ್ಲಾಘನೆ

Spread the love

ಮಹಿಳೆಯರು ಅವಮಾನ, ಲೈಂಗಿಕ ದೌರ್ಜನ್ಯ ಈ ರೀತಿಯ ಕೃತ್ಯಗಳಿಗೆ ಬಲಿಯಾಗುತ್ತಲೇ ಇದ್ದಾರೆ. ಅವಮಾನಿಸಿದ ವ್ಯಕ್ತಿಗೆ ಇರ್ಲೋರ್ವ ಮಹಿಳೆ ತಕ್ಕ ಪಾಠ ಕಲಿಸಿದ್ದಾಳೆ. ಘಟನೆ ಅಸ್ಸಾಂನಲ್ಲಿ(Assam) ನಡೆದಿದೆ. ಫೊಟೋದ ಜತೆಗೆ, ನಡೆದ ಘಟನೆಯನ್ನು ಸಾಮಾಜಿಕ ಜಾಲತಾಣದಲ್ಲಿ(Social Media) ಹೇಳುತ್ತಿದ್ದಂತೆ ನೆಟ್ಟಿಗರಿಂದ ಶ್ಲಾಘನೆ ವ್ಯಕ್ತವಾಗಿದೆ.

ಗುಹಾವಟಿಯಲ್ಲಿ ಭಾವನಾ ಕಶ್ಯಪ್ ನಿಂತಿದ್ದರು. ಅಡ್ರೆಸ್ ಕೇಳುವ ನೆಪದಲ್ಲಿ ಬಂದ ಅಪರಿಚಿತ ವ್ಯಕ್ತಿ ಅಸಭ್ಯವರ್ತನೆ ತೋರಿದ್ದಾನೆ. ನನಗೆ ಅಡ್ರೆಸ್ ಕುರಿತಾದ ಮಾಹಿತಿ ಇಲ್ಲ ಎಂದು ಹೇಳುತ್ತಿದ್ದಂತೆಯೇ ಮಹಿಳೆಯ ಸ್ತನ ಭಾಗವನ್ನು ಹಿಡಿದ್ದಾನೆ. ಮಹಿಳೆಯೊಂದಿಗೆ ಅಸಭ್ಯದಿಂದ ವರ್ತಿಸಿದ ವ್ಯಕ್ತಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ.

ವ್ಯಕ್ತಿಯು ತಪ್ಪಿಸಿಕೊಳ್ಳಲು ನೋಡುತ್ತಿದ್ದಂತೆ, ಮಹಿಳೆ ಆತನನ್ನು ತಡೆ ಹಿಡಿದು ಸ್ಕೂಟರ್​ನ ಹಿಂಭಾಗವನ್ನು ಗಟ್ಟಿಯಾಗಿ ಎಳೆದು ಹಿಡಿದು ನಿಂತಿದ್ದಾಳೆ. ಇಬ್ಬರ ನಡುವೆ ಜಗಳ ಪ್ರಾರಂಭವಾಗಿದೆ. ಆತನ ಸ್ಕೂಟರ್​ಅನ್ನು ಎಳೆದು ತಂದು ಹತ್ತಿರದ ಚರಂಡಿಗೆ ಎಸೆದಿದ್ದಾಳೆ. ನಡೆದ ಎಲ್ಲಾ ಘಟನೆಯನ್ನು ಮಹಿಳೆ ಫೇಸ್ಬುಕ್​ನಲ್ಲಿ ವಿವರಿಸಿದ್ದಾಳೆ.

ಪೊಲೀಸರಿಗೆ ವಿಷಯ ತಿಳಿಯುತ್ತಿದ್ದಂತೆಯೇ, ಕೂಡಲೇ ಅಸ್ಸಾಂ ಪೊಲೀಸರು ಸ್ಥಳಕ್ಕೆ ಆಗಮಿಸಿ ಆತನನ್ನು ಬಂಧಿಸಿದ್ದಾರೆ. ಆತನ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ವ್ಯಕ್ತಿಯ ಹೆಸರು ಮಧುಸನ ರಾಜಕುಮಾರ್. ಫೊಟೋದ ಜತೆಗೆ ಕೆಲವು ವಿಡಿಯೋಗಳನ್ನು ಮಹಿಳೆ ಫೇಸ್​ಬುಕ್​ನಲ್ಲಿ ಹಂಚಿಕೊಂಡಿದ್ದಾಳೆ.

ಭಾವನಾ ಕಶ್ಯಪ್ ಅವರ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವ್ಯಕ್ತಿಯ ಅಸಭ್ಯ ವರ್ತನೆಗೆ ನೆಟ್ಟಿಗರು ಕೋಪಗೊಂಡಿದ್ದಾರೆ. ಏತನ್ಮಧ್ಯೆ, ಮಹಿಳೆಯ ಧೈರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ. ನಿಮ್ಮನ್ನು ನೋಡಿ ತುಂಬಾ ಹೆಮ್ಮೆ ಅನಿಸುತ್ತಿದೆ ಎಂದು ಓರ್ವರು ಹೇಳಿದ್ದಾರೆ.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ