Breaking News

ಬೆಂಗಳೂರು ಹಿಂದಿಕ್ಕಿದ ದಕ್ಷಿಣ ಕನ್ನಡದಲ್ಲಿ ಕೊರೋನಾ ಭಾರಿ ಏರಿಕೆ, ಇಲ್ಲಿದೆ ಎಲ್ಲ ಜಿಲ್ಲೆಗಳ ವಿವರ

Spread the love

ಬೆಂಗಳೂರು: ರಾಜ್ಯದಲ್ಲಿ ಇಂದು 1875 ಜನರಿಗೆ ಸೋಂಕು ತಗುಲಿದ್ದು, 25 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. 1502 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 24,144 ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿವಿಟಿ ದರ ಶೇಕಡ 1.20 ರಷ್ಟು ಇದೆ. ಒಟ್ಟು ಸೋಂಕಿತರ ಸಂಖ್ಯೆ 29,06,999 ಕ್ಕೆ ಏರಿಕೆಯಾಗಿದೆ. ಇದುವರೆಗೆ 28,46,244 ಜನ ಗುಣಮುಖರಾಗಿದ್ದು, 36,587 ಸೋಂಕಿತರು ಸಾವನ್ನಪ್ಪಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ಇಂದು 409 ಜನರಿಗೆ ಸೋಂಕು ತಗುಲಿದೆ. 377 ಮಂದಿ ಬಿಡುಗಡೆಯಾಗಿದ್ದು, 8553 ಸಕ್ರಿಯ ಪ್ರಕರಣಗಳಿದ್ದು, 8 ಜನರು ಸಾವನ್ನಪ್ಪಿದ್ದಾರೆ.

ಜಿಲ್ಲೆಗಳ ವಿವರ:

ಬಾಗಲಕೋಟೆ 0, ಬಳ್ಳಾರಿ 13, ಬೆಳಗಾವಿ 39, ಬೆಂಗಳೂರು ಗ್ರಾಮಾಂತರ 37, ಬೆಂಗಳೂರು ನಗರ 409, ಬೀದರ್ 1, ಚಾಮರಾಜನಗರ 33, ಚಿಕ್ಕಬಳ್ಳಾಪುರ 23, ಚಿಕ್ಕಮಗಳೂರು 65, ಚಿತ್ರದುರ್ಗ 32, ದಕ್ಷಿಣಕನ್ನಡ 410, ದಾವಣಗೆರೆ 17, ಧಾರವಾಡ 23, ಗದಗ 12, ಹಾಸನ 108, ಹಾವೇರಿ 2, ಕಲಬುರ್ಗಿ 9, ಕೊಡಗು 83, ಕೋಲಾರ 35, ಕೊಪ್ಪಳ 1, ಮಂಡ್ಯ 42, ಮೈಸೂರು 146, ರಾಯಚೂರು 1, ರಾಮನಗರ 7, ಶಿವಮೊಗ್ಗ 65, ತುಮಕೂರು 52, ಉಡುಪಿ 162, ಉತ್ತರಕನ್ನಡ 46, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ತಲಾ ಒಂದು ಪ್ರಕರಣ ವರದಿಯಾಗಿದೆ.

ಮೃತಪಟ್ಟವರ ಸಂಖ್ಯೆ:

ಬೆಂಗಳೂರು ನಗರ 8, ಚಾಮರಾಜನಗರ 1, ಚಿಕ್ಕಬಳ್ಳಾಪುರ 1, ದಕ್ಷಿಣಕನ್ನಡ 6, ಹಾಸನ 3, ಕೋಲಾರ 2, ಶಿವಮೊಗ್ಗ 1, ಉಡುಪಿ 1, ಉತ್ತರಕನ್ನಡ 2 ಸೇರಿದಂತೆ ಇವತ್ತು 25 ಸೋಂಕಿತರು ಸಾವನ್ನಪ್ಪಿದ್ದಾರೆ. ಉಳಿದ ಜಿಲ್ಲೆಗಳಲ್ಲಿ ಸಾವಿನ ಪ್ರಕರಣ ವರದಿಯಾಗಿಲ್ಲ.


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ