ದೇವನಹಳ್ಳಿ: ಬೆಂಗಳೂರು- ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 07 ರಲ್ಲಿ ಆಗಮಿಸಿದ ಲಾರಿ ಚಾಲಕನೋರ್ವ ಕುಡಿದ ಅಮಲಿನಲ್ಲಿ ಲಾರಿ ನಿಲ್ಲಿಸದೆ ಟೋಲ್ಗೆ ಗುದ್ದಿಕೊಂಡು ಹೋಗುವ ಮೂಲಕ ಅಟ್ಟಹಾಸ ಮೆರೆದಿದ್ದಾನೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಯ ಏರ್ ಪೋರ್ಟ್ ರಸ್ತೆಯ ಟೋಲ್ನಲ್ಲಿ ಬೆಂಗಳೂರಿನಿಂದ ದೇವನಹಳ್ಳಿ ಕಡೆ ಖಾಲಿ ಲಾರಿಯೊಂದು ಮದ್ಯಾಹ್ನ 12 ಗಂಟೆ ಸುಮಾರಿಗೆ ಆಗಮಿಸಿದೆ. ಶುಲ್ಕ ವಸೂಲಿಗೆ ಅಡ್ಡ ಹಾಕಿದಾಗ, ಚಾಲಕ ಗಾಡಿಯನ್ನು ನಿಲ್ಲಿಸದೆ ಟೋಲ್ಗೆ ಗುದ್ದಿಕೊಂಡು ಹೋಗಿದ್ದಾನೆ.
ಎಲ್ಲಾ ವಾಹನಗಳಿಂದ ಶುಲ್ಕ ವಸೂಲಿ ಮಾಡುವ ರೀತಿಯೆ ವೇಗವಾಗಿ ಬರುತ್ತಿದ್ದ ಲಾರಿ ಚಾಲಕನಿಂದಲೂ ಶುಲ್ಕ ಕೇಳಲು ಟೋಲ್ ಸಿಬ್ಬಂದಿ ನಿಲ್ಲಿಸುವಂತೆ ಸೂಚಿಸಿದ್ದಾರೆ. ಆದರೆ ಈ ವೇಳೆ ಟೋಲ್ ಪ್ಲಾಜಾನಲ್ಲಿ ನಿಲ್ಲಿಸಿ ಶುಲ್ಕ ನೀಡಿ ತೆರಳಬೇಕಿದ್ದ ಲಾರಿ ಚಾಲಕ ಟೋಲ್ ಪೋಲ್ ಅನ್ನು ಗುದ್ದಿಕೊಂಡು ರಭಸವಾಗಿ ಹೋಗಿದ್ದಾನೆ. ಟೋಲ್ ಪ್ಲಾಜಾ ಲೈನಿನಲ್ಲಿ ನಿಂತಿದ್ದ ಸಿಬ್ಬಂದಿ ಕೂದಲಳತೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾನೆ.
ಟೋಲ್ ಪ್ಲಾಜಾ ಗುದ್ದಿಕೊಂಡು ಹೋಗುತ್ತಿದ್ದ ಚಾಲಕನನ್ನ ಟೋಲ್ ಸಿಬ್ಬಂದಿ ದೇವನಹಳ್ಳಿ ಪಟ್ಟಣದವರೆಗೂ ಚೇಸ್ ಮಾಡಿಕೊಂಡು ಹೋಗಿ ಹಿಡಿದಿದ್ದಾರೆ. ನಂತರ ಏರ್ ಪೋರ್ಟ್ ಸಂಚಾರಿ ಪೊಲೀಸರ ವಶಕ್ಕೆ ನೀಡಿದ್ದಾರೆ. ವಾಹನಗಳ ಸಂಖ್ಯೆ ಕಡಿಮೆಯಿದ್ದ ಕಾರಣ ಹೆಚ್ಚಿನ ಅನಾಹುತವೊಂದು ತಪ್ಪಿದಂತಾಗಿದೆ. ಲಾರಿ ಚಾಲಕ ಟೋಲ್ ಪ್ಲಾಜಾ ಗುದ್ದಿಕೊಂಡು ಹೋಗಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ