ಚಿಕ್ಕೋಡಿ: ಕಾಲೇಜು ಕಾಂಪೌಂಡ್ ಗೋಡೆಗೆ ಅಳವಡಿಸಿದ್ದ ಗೇಟ್ ಆಕಸ್ಮಿಕವಾಗಿ ಬಿದ್ದ ಕಾರಣ 10 ವರ್ಷದ ಬಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದ ಘಟನೆ ಚಿಕ್ಕೋಡಿಯ ಆರ್.ಡಿ ಕಾಲೇಜಿನಲ್ಲಿ ನಡೆದಿದೆ.

ಚಿಕ್ಕೋಡಿ ನಗರದ ಇಂದಿರಾನಗರ ನಿವಾಸಿಯಾಗಿದ್ದ ಸೂಫಿಯಾನ್ ರಾಜು ಮುಲ್ಲಾ (10) ಮೃತ ದುರ್ದೈವಿ. ಬಾಲಕ ಗೇಟ್ ದಾಟಿ ಮನೆಗೆ ಹೊರಟಿದ್ದ ಸಂದರ್ಭದಲ್ಲಿ ದುರ್ಘಟನೆ ಸಂಭವಿಸಿದೆ. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Laxmi News 24×7