Breaking News

ರಾಷ್ಟ್ರೀಯ ಹೆದ್ದಾರಿಯ ದುಸ್ಥಿತಿ ಪ್ರತಿಭಟಿಸಿ ಕೆಸರು ನೀರಲ್ಲೇ ಸ್ನಾನ ಮಾಡಿದ ಶಾಸಕಿ

Spread the love

ರಾಂಚಿ: ರಾಷ್ಟ್ರೀಯ ಹೆದ್ದಾರಿಯೊಂದರಲ್ಲಿ (National Highway) ತುಂಬಿದ ಕೆಸರಲ್ಲಿ (Mud) ಕುಳಿತು ಶಾಸಕಿಯೊಬ್ಬರು (MLA) ಸ್ನಾನ (Bath) ಮಾಡಿ ಪ್ರತಿಭಟಿಸಿರುವ ಘಟನೆ ಜಾರ್ಖಂಡ್‌ನ (Jharkhand) ಗೊಡ್ಡಾ ಜಿಲ್ಲೆಯಲ್ಲಿ ನಡೆದಿದೆ. ಶಾಸಕಿ ಕೊಳಚೆ ನೀರಿನಲ್ಲಿ ಮಿಂದು ತಕ್ಷಣವೇ ರಸ್ತೆಯ ದುರಸ್ತಿ ಮಾಡುವಂತೆ ಒತ್ತಾಯಿಸಿದ್ದಾರೆ.

ಮಹಾಗಾಮಾದ ಕಾಂಗ್ರೆಸ್ ಶಾಸಕಿ ದೀಪಿಕಾ ಪಾಂಡೆ ಸಿಂಗ್ ಅವರು ತಮ್ಮ ಮೇಲೆ ಕೆಸರು ನೀರನ್ನು ಸುರಿದುಕೊಂಡು, ಈ ರಸ್ತೆಯ ದುರಸ್ತಿಯನ್ನು ಕೈಗೊಂಡು ದೊಡ್ಡ ಗುಂಡಿಗಳನ್ನು ಮುಚ್ಚಲು ಈಗಿಂದೀಗಲೇ ಮುಂದಾಗದಿದ್ದರೆ, ನಾನು ಇಲ್ಲಿಂದ ಕದಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ. 

ರಾಜ್ಯ ಸರ್ಕಾರ ಮತ್ತು ಕೇಂದ್ರದ ನಡುವಿನ ಹೋರಾಟದಲ್ಲಿ ನಾನು ಭಾಗಿಯಾಗಲು ಬಯಸಲ್ಲ. ಇದು ಎನ್‌ಹೆಚ್-133 ಆಗಿದ್ದು, ಈ ವರ್ಷ ಮೇ ತಿಂಗಳಿನಲ್ಲಿ ಇದರ ವಿಸ್ತರಣೆಯ ಜವಾಬ್ದಾರಿಯನ್ನು ಅಧಿಕಾರಿಗಳು ವಹಿಸಿಕೊಂಡಿದ್ದರು. ಆದರೆ ದುರಸ್ತಿಗೆ ಕೇಂದ್ರ ಹಣವನ್ನು ನೀಡಿಲ್ಲ. ಈ ಹೆದ್ದಾರಿಯಿಂದ ಸಾರ್ವಜನಿಕರು ಕಷ್ಟಪಡುತ್ತಿದ್ದು, ಇದನ್ನು ಸರಿಪಡಿಸುವಂತೆ ನಾನು ಮುಖ್ಯಮಂತ್ರಿಗಳಿಗೆ ವಿನಂತಿಸುತ್ತೇನೆ ಎಂದು ತಿಳಿಸಿದ್ದಾರೆ. 


Spread the love

About Laxminews 24x7

Check Also

ಅಧಿಕಾರಿಯ ಪ್ರತಿ ವರ್ಗಾವಣೆಗೂ ಗೆಜೆಟ್ ಅಧಿಸೂಚನೆ ಹೊರಡಿಸುವ ಅಗತ್ಯ ಇಲ್ಲ: ಹೈಕೋರ್ಟ್

Spread the loveಬೆಂಗಳೂರು: ರಾಜ್ಯದ ಒಂದು ವೃತ್ತದಲ್ಲಿ ಸೇವೆ ಸಲ್ಲಿಸುವ ಅಧಿಕಾರಿಗೆ ಡ್ರಗ್ಸ್ ಇನ್ಸ್​ಪೆಕ್ಟರ್ ಎಂಬುದಾಗಿ ಗೆಜೆಟ್‌ ಅಧಿಸೂಚನೆ ಹೊರಡಿಸಿದ ಬಳಿಕ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ