ಸ್ಯಾಂಡಲ್ ವುಡ್ ನ ಹಿರಿಯ ನಟಿ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಇಲಾಖೆ ಅಧ್ಯಕ್ಷೆ ಆಗಿರುವ ಶ್ರುತಿ ಇತ್ತೀಚಿಗೆ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಸ್ತ್ರೀ ಶೌಚಾಲಯವನ್ನು ಪರಿಶೀಲನೆ ನಡೆಸಿದರು.
ಕೆ ಎಸ್ ಆರ್ ಟಿ ಸಿ ನಿಗಮ ಬಸ್ ಅನ್ನು ಬಳಸಿ ನಿರ್ಮಿಸಿರುವ ವಿಶೇಷ ಸ್ತ್ರೀ ಶೌಚಾಲಯದ ಬಳಕೆ ಹಾಗೂ ಮಹಿಳೆಯರಿಗೆ ಆಗುವ ಅನುಕೂಲದ ಬಗ್ಗೆ ಮಾಹಿತಿ ಪಡೆದರು. ಇದೇ ಸಮಯದಲ್ಲಿ ಮಾತನಾಡಿ ಸ್ತ್ರೀ ಶೌಚಾಲಯಗಳ ಅವಶ್ಯಕತೆ ಬಹಳಷ್ಟು ಇದೆ. ರಾಜ್ಯದ ಪ್ರಮುಖ ಸ್ಥಳಗಳಲ್ಲಿ ಇದನ್ನು ಅನುಷ್ಠಾನಕ್ಕೆ ತರಬೇಕು ಎಂದು ಹೇಳಿದರು.
ಮೆಜೆಸ್ಟಿಕ್ ನ ಕೆ ಎಸ್ ಆರ್ ಟಿ ಸಿಯ ಕೆಂಪೇಗೌಡ ಬಸ್ ನಿಲ್ದಾಣದ ಒಂದನೇ ಟರ್ಮಿನಲ್ ಪ್ರವೇಶ ದ್ವಾರದ ಸಮೀಪ ಸ್ತ್ರೀಯರ ವಿಶೇಷ ಶೌಚಾಲಯವಿದೆ. ಕೆ ಎಸ್ಆರ್ ಟಿ ಸಿಯ ಹಳೆಯ ಬಸ್ಸನ್ನು ಹೈಟೆಕ್ ಶೌಚಾಲಯವಾಗಿ ಪರಿವರ್ತಿಸಲಾಗಿದೆ. ಸುಮಾರು 12ಮೀಟರ್ ಉದ್ದದ ಬಸ್ಸಿನಲ್ಲಿ ಇಂಡಿಯನ್ ಮತ್ತು ವೆಸ್ಟರ್ನ್ ಶೌಚಾಲಯಗಳಿವೆ.
Laxmi News 24×7