Breaking News

ಜಾರಕಿಹೊಳಿಗೆ ಗಾಳಿಯಲ್ಲಿ ಮಾತಾಡುವ ಚಾಳಿ ಇದೆ: ಈಶ್ವರ್ ಖಂಡ್ರೆ……..

Spread the love

ಕೊಪ್ಪಳ: ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಗಾಳಿಯಲ್ಲಿ ಮಾತಾಡುವ ಚಾಳಿ ಇದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ತಿರುಗೇಟು ನೀಡಿದ್ದಾರೆ.

ಇಂದು ಕೊಪ್ಪಳದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಈಶ್ವರ್ ಖಂಡ್ರೆ, ಕಾಂಗ್ರೆಸ್ ಶಾಸಕರು ಬಿಜೆಪಿಗೆ ಬರುತ್ತಾರೆ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆಗೆ ತಿರುಗೇಟು ನೀಡಿದ್ರು. ಬಿಜೆಪಿಗೆ ಹೋಗಿ ರಮೇಶ್ ಜಾರಕಿಹೊಳಿ ಸುಖವಾಗಿದ್ದಾರೆ ಅಂತ ಆತ್ಮಸಾಕ್ಷಿಯಾಗಿ ಹೇಳಲಿ ಎಂದು ಸವಾಲ್ ಹಾಕಿದರು.

 

ಬಿಜೆಪಿಯ ಹಿರಿಯ ನಾಯಕ, ಶಾಸಕ ಉಮೇಶ್ ಕತ್ತಿ ಜನಪರ ಕಾಳಜಿ ಹೊಂದಿದ್ದಾರೆ. ಬಿಜೆಪಿ ಅಕ್ರಮದ ಬಗ್ಗೆ ಸಾರ್ವಜನಿಕ ಲೆಕ್ಕಪತ್ರ ಸಮಿತಿಯಲ್ಲಿ ಪ್ರಶ್ನೆ ಮಾಡಿದಂತವರು. ಯಾರಿಗೆ ಜನಪರ ಕಾಳಜಿ ಇರುತ್ತೋ ಅವರು ಪ್ರಶ್ನೆ ಮಾಡುತ್ತಾರೆ ಎಂದು ಹೇಳುವ ಮೂಲಕ ಉಮೇಶ್ ಕತ್ತಿ ಪರ ಬ್ಯಾಟ್ ಬೀಸಿದರು. ನಾವೆಲ್ಲ ಕೊರೊನಾ ಸಂಕಷ್ಟದಲ್ಲಿದ್ದೇವೆ. ಈಗಾಗಲೇ ಕಾಂಗ್ರೆಸ್ ನೊಂದವರಿಗೆ ಸಹಾಯ ಹಸ್ತ ಚಾಚುತ್ತಿದೆ. ಆದ್ರೆ ಬಿಜೆಪಿಯ ಕೆಲ ಶಾಸಕರು ತಮ್ಮ ಕ್ಷೇತ್ರಗಳಿಗೆ ಹೋಗಿಲ್ಲ. ಸರ್ಕಾರ ವಿತರಣೆ ಮಾಡುವ ಅಹಾರ ಕಿಟ್ಟನಲ್ಲಿ ಬಿಜೆಪಿ ಸಿಂಬಲ್ ಮತ್ತು ಫೋಟೋ ಹಾಕಿಕೊಂಡು ಪೋಸ್ ಕೊಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು.ಕಾಂಗ್ರೆಸ್ ನೀಡಿದ ಚೆಕ್ ಬೌನ್ಸ್ ಆಗಿದೆ ಎಂದು ಬಿಜೆಪಿಯವರು ಹೇಳುತ್ತಿರುವುದು ಸುಳ್ಳು, ಬಿಜೆಪಿಯವರಿಗೆ ಸುಳ್ಳನ್ನೆ ಸತ್ಯ ಎಂದು ಬಿಂಬಿಸುವುದು ರೂಡಿಯಾದಂತಾಗಿದೆ. ಹಿಂದೆ ದಿನೇಶ್ ಗುಂಡುರಾವ್ ರವರೆ ಅಧ್ಯರಾಗಿದ್ದರು, ಇನ್ನೂ ಡಿಕೆ ಶಿವಕುಮಾರ್ ಅಧಿಕಾರ ಹಸ್ತಾಂತರ ಆಗದಿರುವ ಕಾರಣ ಬ್ಯಾಂಕ್ ಖಾತೆ ಬದಲಾವಣೆಯಾಗಿಲ್ಲ. ಅದರಿಂದ ಹಣ ಖಾತೆಗೆ ಜಮಾ ಆಗಿಲ್ಲ, ಇದೇ ಜೂನ್ 7 ರಂದು ಅಧಿಕಾರ ಪದಗ್ರಹಣ ಸಮಾರಂಭ ನಡೆಯಲಿದೆ ಎಂದು ಹೇಳಿದರು.


Spread the love

About Laxminews 24x7

Check Also

ಮಿರಜ್‌ನಲ್ಲಿ 1 ಕೋಟಿ ರೂಪಾಯಿ ಮೌಲ್ಯದ ನಕಲಿ ನೋಟುಗಳ ಜಪ್ತಿ

Spread the love ಚಿಕ್ಕೋಡಿ:ಮಹಾರಾಷ್ಟ್ರ- ಕರ್ನಾಟಕ ಗಡಿ ಭಾಗದಲ್ಲಿ ಇತ್ತಿಚಿಗೆ ವಿಶೇಷ ಕಾರ್ಯಾಚರಣೆ ನಡೆಸಿದ ಮಹಾರಾಷ್ಟ್ರ ಪೊಲೀಸರು, ಬರೋಬ್ಬರಿ 1 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ