ಇಂದಿನ ಎರಡನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗುತ್ತಿವೆ. ಐದನೇ ಸ್ಥಾನದಲ್ಲಿರೋ ಆರ್ಬಿಸಿ, ಚೆನ್ನೈ ಮಣಿಸಿ ಮೂರನೇ ಸ್ಥಾನಕ್ಕೆ ಎಂಟ್ರಿಕೊಡೋ ವಿಶ್ವಾಸದಲ್ಲಿದೆ.
ಚೆನ್ನೈ ಕಳೆದ ಪಂದ್ಯದಲ್ಲಿ ಕೊಲ್ಕತ್ತಾ ವಿರುದ್ಧ ಮುಗ್ಗರಿಸಿದ್ರೆ, ಆರ್ಸಿಬಿ ಡೆಲ್ಲಿ ವಿರುದ್ಧ ಮುಗ್ಗರಿಸಿದೆ. ಹೀಗಾಗಿ ಗೆಲುವಿನ ರಿದಮ್ ಕಂಡುಕೊಳ್ಳೋದಕ್ಕೆ ಉಭಯ ತಂಡಗಳಿಗೆ ಮಹತ್ವದ ಪಂದ್ಯವಾಗಿದೆ. ಅದ್ರಲ್ಲೂ ಡೆಲ್ಲಿ ವಿರುದ್ಧದ ಸೋಲು, ಆರ್ಸಿಬಿ ಆಟಗಾರರನ್ನ ರೊಚ್ಚಿಗೇಳುವಂತೆ ಮಾಡಿದೆ.
ಸದ್ಯ ಆರ್ಸಿಬಿ ತಂಡ ಅದ್ಭುತ ಫಾರ್ಮ್ನಲ್ಲಿದ್ರೂ, ಅಂಕಿ ಸಂಖ್ಯೆಗಳ ಪ್ರಕಾರ, ಚೆನ್ನೈ ತಂಡ ಸ್ಟ್ರಾಂಗ್ ಅಗಿದೆ. ಚೆನ್ನೈ-ಬೆಂಗಳೂರು 24 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, 15 ರಲ್ಲಿ ಚೆನ್ನೈ ಗೆದ್ದಿದ್ರೆ, ಆರ್ಸಿಬಿ ಕೇವಲ 8 ರಲ್ಲಿ ಗೆಲುವು ಸಾಧಿಸಿದೆ.
Laxmi News 24×7