Breaking News

ಮಂಕಡಿಂಗ್​ಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ!

Spread the love

 ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ನಡುವಿನ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ , ಆರ್​ಸಿಬಿಯ ಓಪನರ್ ಆರನ್ ಫಿಂಚ್ ಅವರನ್ನು ‘ಮಂಕಡಿಂಗ್’ ಮಾಡದೆ ಕೇವಲ ಎಚ್ಚರಿಸಿದ್ದು ಕ್ರಿಕೆಟ್ ವಲಯಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ .

ಭಾರತದ ಮಾಜಿ ಕ್ಯಾಪ್ಟನ್​ಗಳಾದ ಸುನಿಲ್ ಗವಾಸ್ಕರ್ ಮತ್ತು ಕಪಿಲೆ ದೇವ್ , ನಾನ್​ಸ್ಟ್ರೈಕರ್ ಬ್ಯಾಟ್ಸ್​ಮನ್​ನನ್ನು ಮಂಕಡಿಂಗ್ ( ನಾನ್​ಸ್ಟ್ರೈಕರ್ ಬ್ಯಾಟ್ಸ್​ಮನ್ , ಬೌಲರ್ ಚೆಂಡೆಸೆಯುವ ಮೊದಲೇ ಕ್ರೀಸ್ ಬಿಟ್ಟು ಮುಂದೆ ಸಾಗಿದಾಗ ಬೌಲರ್ ಅವನನ್ನು ರನೌಟ್ ಮಾಡುವುದು ) ತಪ್ಪಲ್ಲ , ಕ್ರಿಕೆಟ್ ರೂಲ್ ಬುಕ್​ನಲ್ಲಿ ಅದಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ವಾದಿಸಿದ್ದಾರೆ .

1983 ರಲ್ಲಿ ಬಾರತಕ್ಕೆ ವಿಶ್ವಕಪ್ ಗೆದ್ದು ಕೊಟ್ಟ ಕಪಿಲ್ ಅವರಂತೂ ಕ್ರೀಡಾ ಸ್ಫೂರ್ತಿಯ ಅಂಶವನ್ನೇ ಜಾಲಾಡಿದ್ದಾರೆ . ಹಾಗೆ ಔಟ್ ಮಾಡಬಹುದೆಂದು ಕ್ರಿಕೆಟ್ ನಿಯಮವೇ ಹೇಳುವಾಗ ಕ್ರೀಡಾ ಸ್ಫೂರ್ತಿಯ ಮಾತು ಹೇಗೆ ಉದ್ಭವಿಸುತ್ತದೆ ಅಂತ ಅವರು ಕಿಡಿ ಕಾರಿದ್ದಾರೆ . ಅವತ್ತು ಅಶ್ವಿನ್ , ಫಿಂಚ್​ರನ್ನು ಔಟ್ ಮಾಡಿದ್ದರೆ ಅದು ಖಂಡಿತವಾಗಿಯೂ ಪ್ರಮಾದವೆನಿಸಿಕೊಳ್ಳುತ್ತಿರಲಿಲ್ಲ ಮತ್ತು ಸ್ಪಿರಿಟ್ ಆಫ್ ದಿ ಗೇಮ್​ಗೆ ಧಕ್ಕೆಯೂ ಆಗುತ್ತಿರಲಿಲ್ಲ ಎಂದು ಕಪಿಲ್ ಹೇಳಿದ್ದಾರೆ . ಕಳೆದ ವರ್ಷದ ಐಪಿಎಲ್ ಸೀಸನ್​ನಲ್ಲಿ ಅಶ್ವಿನ್ ರಾಜಸ್ತಾನ ರಾಯಲ್ಸ್ ತಂಡದ ಜೊಸ್ ಬಟ್ಲರ್ ಅವರನ್ನು ಮಂಕಡಿಂಗ್ ಮಾಡಿದ್ದರು . ಆದರೆ , ಅವರ ಕ್ರಮವನ್ನು ವ್ಯಾಪಕವಾಗಿ ಖಂಡಿಸಲಾಗಿತ್ತು .

”ಕ್ರಿಕೆಟ್ ಈಗಾಗಲೇ ಸಂಪೂರ್ಣವಾಗಿ ಬ್ಯಾಟ್ಸ್​ಮನ್ ಪರವಾಗಿದೆ , ಇನ್ನೆಷ್ಟು ದಿನ ಬೌಲರ್​ಗಲು ಸುಖಾಸುಮ್ಮನೆ ದಂಡನೆಗೊಳಗಾಗಬೇಕು ? ಅವರು ಬೌಲ್ ಮಾಡುವಾಗ ಓವರ್​ಸ್ಟೆಪ್ ಮಾಡಿದರೆ ಅಂಪೈರ್ ನೋ ಬಾಲ್   ಅಂತ ಕೂಗುತ್ತಾನೆ , ಒಂದು ಸೆಂಟಿಮೀಟರ್​ನಷ್ಟೇ ಲೆಗ್​ಸ್ಟಂಪ್​ನಿಂದ ಎಸೆತ ಆಚೆಯಿದ್ದರೆ ವೈಡ್ ಬಾಲ್ ಅಂತಾನೆ . ಪರಿಸ್ಥಿತಿ ಹೀಗಿರುವಾಗ ಬ್ಯಾಟ್ಸ್​ಮನ್​ಗೆ ಯಾಕೆ ಅನುಚಿತ ಲಾಭ ಸಿಗಬೇಕು ? ಬೌಲರ್ ಚೆಂಡನ್ನು ಎಸೆಯುವ ಮೋದಲೇ ನಾನ್​ಸ್ಟ್ರೈಕರ್ ಕ್ರೀಸ್ ಬಿಟ್ಟು ಮುಂದೆ ಹೋದರೆ ಅದು ಕಳ್ಳತನವೆನಿಸಿಕೊಳ್ಳುತ್ತದೆ , ಅದು ಕ್ರೀಡಾ ಸ್ಫೂರ್ತಿಯೇ ?” ಎಂದು ಕಪಿಲ್ ದೇವ್ ಹೇಳಿದ್ದಾರೆ .

ಕ್ರೀಡೆಯನ್ನು ಬಹಳ ವರ್ಷಗಳಿಂದ ಅನುಸರಿಸಿಕೊಂಡು ಬಂದವರಿಗೆ , ಕಪಿಲ್ ಸಹ ಒಮ್ಮೆ ಮಂಕಡಿಂಗ್ ಮಾಡಿದ್ದು ನೆನೆಪಿರಬಹುದು . ಆದು ನಡೆದಿದ್ದು ಭಾರತದ 1991-92 ರ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ . ಪೋರ್ಟ್ ಎಲಿಜಬೆತ್​ನಲ್ಲಿ ನಡೆದ ಒಂದು ದಿನದ ಅಂತರರಾಷ್ಟ್ರೀಯ ಪಂದ್ಯದಲ್ಲಿ , ನಾನ್​ಸ್ಟ್ರೈಕರ್ ತುದಿಯಲ್ಲಿದ್ದ ಪೀಟರ್ ಕರ್ಸ್ಟೆನ್ ತಾನು ಬೌಲ್ ಮಾಡುವ ಮೊದಲೇ ಕ್ರೀಸ್​ನಿಂದ ಆಚೆ ಹೋಗುತ್ತಿರುವುದನ್ನು ಗಮನಿಸಿದ ಕಪಿಲ್ ಹಾಗೆ ಮಾಡಬೇಡವೆಂದು ಒಂದೆರಡು ಬಾರಿ ಎಚ್ಚರಿಕೆ ನೀಡಿದ್ದರು . ಆದರೆ ಕರ್ಸ್ಟೆನ್ ಕ್ರೀಸ್ ಬಿಡುವುದನ್ನು ಮುಂದುವರಿಸಿದಾಗ ಕಪಿಲ್ , ಮಂಕಡಿಂಗ್ ಮಾಡಿದರು .

ಬ್ಯಾಟ್ಸ್​ಮನ್​ಗಳು ಹಾಗೆ ಅನುಚಿತ ಲಾಭ ಪಡೆಯಬಾರದೆಂದು , ಸನ್ನಿ ಮತ್ತು ಕಪಿಲ್ ಪ್ರತಿಪಾದಿಸುತ್ತಾರೆ . ಅಂಪೈರ್​ಗಳು ಅದನ್ನು ಗಮನಿಸುತ್ತಿರಬೇಕೆಂದು ಹೇಳುವ ಅವರು , ನಾನ್​ಸ್ಟ್ರೈಕರ್ ಕ್ರೀಸ್ ಬಿಟ್ಟರೆ , ಬ್ಯಾಟಿಂಗ್ ಮಾಡುತ್ತಿರುವ ತಂಡಕ್ಕೆ ಒಂದು ರನ್ ದಂಡ ವಿಧಿಸಬೇಕೆನ್ನುತ್ತಾರೆ .


Spread the love

About Laxminews 24x7

Check Also

ಬೆಳಗಾವಿ ಜಿಲ್ಲೆಗೆ ರೆಡ್ ಅಲರ್ಟ್ ಘೋಷಿಸಿದೆ.‌ ನಿರಂತರ ಮಳೆಯಿಂದ ಘಟಪ್ರಭಾ, ಕೃಷ್ಣಾ, ದೂಧಗಂಗಾ, ಹಿರಣ್ಯಕೇಶಿ, ಮಾರ್ಕಂಡೇಯ ಹಾಗೂ ಮಲಪ್ರಭಾ ನದಿಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿವೆ.

Spread the love ಭಾರತ ಹವಾಮಾನ ಇಲಾಖೆ ಆಗಸ್ಟ್ 19 ಮತ್ತು 20 ರಂದು ಬೆಳಗಾವಿ ಜಿಲ್ಲೆಗೆ ರೆಡ್ ಅಲರ್ಟ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ