Breaking News

ರಾಜಸ್ಥಾನ್ ವಿರುದ್ಧದ ಪಂದ್ಯಕ್ಕೂ ಮುನ್ನ ಕೊಹ್ಲಿಗೆ ಸಿಕ್ತು 5 ಸಿಹಿ ಸುದ್ದಿ!

Spread the love

ಆರ್​ಸಿಬಿಗೆ ಗುಡ್ ನ್ಯೂಸ್ ನಂ.1
ಅಬುಧಾಬಿ ಕಂಡೀಷನ್​ಗೆ ಹೊಂದಿಕೊಂಡ ಕೊಹ್ಲಿ ಬಾಯ್ಸ್
ಮೊದಲ ಗುಡ್‌ನ್ಯೂಸ್‌ ಅಂದ್ರೆ, ಕೊಹ್ಲಿ ಪಡೆ ಅಬುಧಾಬಿ ಕಂಡೀಷನ್‌ಗೆ ಹೊಂದಿಕೊಂಡಿದೆ. ಕಳೆದ 3 ದಿನಗಳಿಂದ ಅಬುದಾಬಿಯಲ್ಲಿ, ಕೊಹ್ಲಿ ಗ್ಯಾಂಗ್ ಮಠಮಠ ಮಧ್ಯಾಹ್ನ ಪ್ರಾಕ್ಟೀಸ್‌ ಮ್ಯಾಚ್ ಆಡಿದ್ದಾರೆ. ಇಂದಿನ ಪಂದ್ಯವೂ ಮಧ್ಯಾಹ್ನವೇ ನಡೆತೀರೋದು ಆರ್​ಸಿಬಿಗೆ ಅಡ್ವಾಂಟೇಜ್ ಆಗಿದೆ.

ಆರ್​ಸಿಬಿಗೆ ಗುಡ್ ನ್ಯೂಸ್ ನಂ.2
ಸ್ಟ್ರಾಂಗ್ ಆಯ್ತು ಆರ್​ಸಿಬಿ ಆಲ್​ರೌಂಡರ್ ಕೋಟಾ
ಆರ್​ಸಿಬಿಗೆ 2ನೇ ಗುಡ್‌ನ್ಯೂಸ್ ಅಂದ್ರೆ, ಕ್ರಿಸ್ ಮಾರಿಸ್ ಚೇತರಿಸಿಕೊಂಡಿರೋದು. ಅಬುಧಾಬಿ ಕಂಡೀಷನ್‌ನಲ್ಲೇ ಮಾರಿಸ್ ಭರ್ಜರಿ ನೆಟ್ ಪ್ರಾಕ್ಟೀಸ್ ನಡೆಸಿದ್ದಾರೆ. ಟೀಮ್ ಮ್ಯಾನೇಜ್ಮೆಂಟ್ ಮಾರಿಸ್​ನನ್ನ ರಾಜಸ್ಥಾನ್ ವಿರುದ್ಧ ಕಣಕ್ಕಿಳಿಸೋ ಪ್ಲಾನ್ ಮಾಡಿದೆ. ಇದು ಆರ್​ಸಿಬಿ ತಂಡದ ಆಲ್‌ರೌಂಡರ್ ಕೋಟಾ ಬಲಿಷ್ಟವಾಗುವಂತೆ ಮಾಡಿದೆ.

ಆರ್​ಸಿಬಿಗೆ ಗುಡ್ ನ್ಯೂಸ್ ನಂ.3
ಅಬುಧಾಬಿ ಪಿಚ್ ಸ್ಪಿನ್ನರ್​ಗಳಿಗೆ ನೆರವಾಗುತ್ತೆ
ಅಬುದಾಗಿ ಪಿಚ್‌ ಕಂಡೀಷನ್‌ ಸ್ಲೋ ಇರೋದ್ರಿಂದ, ರಿಸ್ಟ್ ಸ್ಪಿನ್ನರ್​ಗಳಿಗೆ ನೆರವಾಗುತ್ತೆ. ಅಲ್ಲಿಗೆ ಯಜ್ವಿಂದರ್ ಚಹಲ್ ಮತ್ತು ಌಡಂ ಜಾಂಪಾ, ವಾಷಿಂಗ್ಟನ್ ಸುಂದರ್ ಆರ್​ಸಿಬಿ ಪರ ಪಂದ್ಯದ ದಿಕ್ಕು ಬದಲಿಸೋ ಆಟಗಾರರಾಗಿದ್ದಾರೆ. ಹೀಗಾಗಿ ಸ್ಪಿನ್ ಕೋಟಾದಲ್ಲೂ ಆರ್​ಸಿಬಿ ಕ್ವಾಲಿಟಿ ಆಟಗಾರರನ್ನೇ ಹೊಂದಿದೆ.

ಆರ್​ಸಿಬಿಗೆ ಗುಡ್ ನ್ಯೂಸ್ ನಂ.4
ಕೆಕೆಆರ್ ವಿರುದ್ಧ ಹೀನಾಯವಾಗಿ ಸೋತ ರಾಜಸ್ಥಾನ್
ಇನ್ನೂಂದು ಖುಷಿ ವಿಚಾರ ಅಂದ್ರೆ, ರಾಜಸ್ತಾನ್ ರಾಯಲ್ಸ್ ತಂಡ ಕಳೆದ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಹೀನಾಯವಾಗಿ ಸೋತು ಕಂಗಾಲಾಗಿದೆ. ಇದು ಕ್ಯಾಪ್ಟನ್ ಕೊಹ್ಲಿಗೆ, ರಾಜಸ್ಥಾನ್ ವಿರುದ್ಧ ಉತ್ತಮ ರಣತಂತ್ರ ಹಣೆಯೋದಕ್ಕೆ ಅವಕಾಶ ಮಾಡಿಕೊಟ್ಟಂತಾಗಿದೆ.

ಆರ್​ಸಿಬಿಗೆ ಗುಡ್ ನ್ಯೂಸ್ ನಂ.5
ಪಡಿಕ್ಕಲ್​ಗೆ ಮೆಂಟರ್ ಆಗಿದ್ದಾರೆ ಕೊಹ್ಲಿ
ಆರ್​ಸಿಬಿ ಪರ ಆಡಿದ ಮೂರು ಪಂದ್ಯಗಳಲ್ಲಿ ಎರಡು ಅರ್ಧಶತಕ ಸಿಡಿಸಿರೋ ಕನ್ನಡಿಗ ದೇವದತ್ ಪಡಿಕ್ಕಲ್, ರೆಡ್ ಹಾಟ್ ಪಾರ್ಮ್​ನಲ್ಲಿದ್ದಾರೆ. ಅದು ಅಲ್ಲದೇ ಆರ್​ಸಿಬಿ ತಂದಿರೋ ಮೆಂಟರ್​ಶಿಪ್ ಪ್ರೋಗ್ರಾಮ್​ನಲ್ಲಿ, ಕೊಹ್ಲಿ ಪಡಿಕ್ಕಲ್​ಗೆ ಮೆಂಟರ್ ಆಗಿದ್ದಾರೆ. ಇದು ಪಡಿಕ್ಕಲ್ ಇನ್ನು ಉತ್ತಮ ಪ್ರದರ್ಶನ ನೀಡೋದಕ್ಕೆ ನೆರವಾಗಲಿದೆ.

ಈ ಐದು ಗುಡ್ ನ್ಯೂಸ್ ಕ್ಯಾಪ್ಟನ್ ಕೊಹ್ಲಿ ಬಳಗಕ್ಕೆ ಗೆಲುವಿನ ವಿಶ್ವಾಸ ಹೆಚ್ಚಿಸಿದೆ. ಹೀಗಾಗಿ ರಾಜಸ್ಥಾನ್ ಐಪಿಎಲ್​ನಲ್ಲಿ, ಆರ್​ಸಿಬಿ ವಿರುದ್ಧ ಹೆಚ್ಚು ಪಂದ್ಯಗಳನ್ನ ಗೆದ್ದ ದಾಖಲೆ ಹೊಂದಿದ್ರೂ, ಇಂದಿನ ಪಂದ್ಯದಲ್ಲಿ ಕೊಹ್ಲಿ ಪಡೆಯೇ ಹಾಟ್ ಪೇವರಿಟ್ ಅನ್ನೋದ್ರಲ್ಲಿ ಅನುಮಾನವೇ ಇಲ್ಲ.


Spread the love

About Laxminews 24x7

Check Also

ಬ್ಯಾಂಕ್​ನಿಂದ ಹಣ ಡ್ರಾ ಮಾಡಿಕೊಂಡು ಹೋಗುವಾಗ ನಿವೃತ್ತ ಶಿಕ್ಷಕನ ಹತ್ಯೆ

Spread the loveಬೆಂಗಳೂರು, (ಡಿಸೆಂಬರ್ 03): ಸುದೀರ್ಘ ಸೇವೆಯ ಬಳಿಕ ನಿವೃತ್ತಿಯಾಗಿದ್ದ ಶಿಕ್ಷಕರೊಬ್ಬರು ಕನಸಿನ ಮನೆ ಕಟ್ಟಲು ಹಣ ಡ್ರಾ ಮಾಡಿಕೊಂಡು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ