ಕೊಪ್ಪಳ: ಪೋಷಕರು ಪಡೆದ ಸಾಲದ ಬಾಕಿ ತೀರಿಸಿಲ್ಲವೆಂದು ಮಗನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ (Assault on boy) ಘಟನೆ ಕೊಪ್ಪಳದಲ್ಲಿ ನಡೆದಿದೆ.
ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಕೆ. ಹೂಸೂರಿನಲ್ಲಿ ಡಿಸೆಂಬರ್‌ನಲ್ಲಿ ನಡೆದಿದ್ದು, ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ.
ಕನಕರಾಯಪ್ಪ, ರಾಜೇಶ್ವರಿ ಸೇರಿ 6 ಜನರು, 14 ವರ್ಷದ ಬಾಲಕನನ್ನು ಗಿಡಕ್ಕೆ ಕಟ್ಟಿ ಥಳಿಸಿದ್ದಾರೆ. ಬಾಲಕನ ಮೈಮೇಲೆ ಹಾಗೂ ಗುಪ್ತಾಂಗಕ್ಕೂ ಗಾಯವಾಗಿದೆ.
ಕನಕರಾಯಪ್ಪ ಎಂಬುವರು ಮಂಜುಳಾ ಮಡಿವಾಳ ಎಂಬುವರಿಗೆ 40 ಸಾವಿರ ರೂಪಾಯಿ ಸಾಲ ಕೊಟ್ಟಿದ್ದರು. 30 ಸಾವಿರ ರೂಪಾಯಿ ಸಾಲವನ್ನು ಮರುಪಾವತಿಸಲಾಗಿತ್ತು. ಆದರೆ ಉಳಿದ 10 ಸಾವಿರ ಅಸಲು ಮತ್ತು 4 ಸಾವಿರ ರೂಪಾಯಿ ಬಡ್ಡಿ ಸೇರಿ ಒಟ್ಟು 14 ಸಾವಿರ ರೂಪಾಯಿಗಾಗಿ ಪೀಡಿಸುತ್ತಿದ್ದರು. ಇದೇ ವಿಷಯಕ್ಕೆ ಮಂಜುಳಾ ಮಗನ ಮೇಲೆ ಹಲ್ಲೆ ನಡೆದಿದೆ. ಅವರು ಕೊಪ್ಪಳ ಎಸ್ಪಿಯವರಿಗೆ ದೂರು ಸಲ್ಲಿಸಿದ್ದಾರೆ.
ಕೊಪ್ಪಳ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ನನ್ನ ಆತ್ಮೀಯರು. ಅವರಿಂದಲೇ ನಾನು ರಾಜಕಾರಣಕ್ಕೆ ಬಂದಿದ್ದೇನೆ. ಆದರೆ, ಅವರು ಹೊಸ ಪಕ್ಷ ಸ್ಥಾಪಿಸಿರುವುದಕ್ಕೆ ನಾನು ಶುಭ ಕೋರಬಹುದು ಅಷ್ಟೇ. ಬಿಜೆಪಿಯಲ್ಲಿಯೇ ಮುಂದುವರಿಯಿರಿ ಎಂದು ನಾನು ಅವರನ್ನು (Janardhan Reddy) ಮನವೊಲಿಸುವಷ್ಟು ದೊಡ್ಡವನಲ್ಲ ಎಂದು ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಾರ್ದನ ರೆಡ್ಡಿ ಅವರು ಹೊಸ ಪಕ್ಷ ಕಟ್ಟಿದ್ದಾರೆ ಎಂಬ ವಿಷಯ ಕೇಳಿದ್ದೇನೆ. ನಾನು ಇಂದು ರಾಜಕಾರಣದಲ್ಲಿ ಇದ್ದೇನೆ ಎಂದರೆ ಅದಕ್ಕೆ ಜನಾರ್ದನ ರೆಡ್ಡಿ ಅವರೇ ಕಾರಣ. ನಾನು ಚುನಾವಣೆಗೆ ನಿಲ್ಲುವುದಿಲ್ಲ ಎಂದಿದ್ದಾಗ ಅವರು ಚುನಾವಣೆಗೆ ನಿಲ್ಲಿ ಎಂದು ಪ್ರೋತ್ಸಾಹ ನೀಡಿದ್ದರು. ಅವರ ಹಾಗೂ ನನ್ನ ನಡುವಿನ ಆ ಸ್ನೇಹ ಇನ್ನೂ ಹಾಗೆಯೇ ಇದೆ ಎಂದು ತಿಳಿಸಿದರು.
ಬಿಜೆಪಿಯಲ್ಲಿಯೇ ಮುಂದುವರಿಯಿರಿ ಎಂದು ಜನಾರ್ದನ ರೆಡ್ಡಿ ಅವರನ್ನು ಮನವೊಲಿಸುವಷ್ಟು ನಾನು ದೊಡ್ಡವನಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಚುನಾವಣೆಯಲ್ಲಿ ಸ್ಪರ್ಧಿಸಬಹುದು. ಬರುವ ಚುನಾವಣೆಯಲ್ಲಿ ಕೆಆರ್‌ಎಸ್, ಆಮ್ ಆದ್ಮಿ ಪಕ್ಷ, ತೃಣಮೂಲ ಕಾಂಗ್ರೆಸ್ ಸಹ ಬರಬಹುದು. ಯಾವುದೇ ಪಕ್ಷ ಬರಲಿ. ಆದರೆ ಬಿಜೆಪಿ ಸ್ವಂತ ಬಲದ ಮೇಲೆ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದರು.