Breaking News

ವಿದ್ಯಾಗಮ ಬದಲು ಕೊರೊನಾ ಬಂತು.. ವಠಾರ ಶಾಲೆಯಲ್ಲಿ ಶಿಕ್ಷಕರು, ಮಕ್ಕಳಿಗೆ ಸೋಂಕು

Spread the love

ಕಲಬುರಗಿ: ಶಾಲೆ ಓಪನ್​ ಮಾಡ್ಬೇಕಾ ಬೇಡ್ವಾ ಅನ್ನೋ ಗೊಂದಲದಲ್ಲಿದ್ದ ರಾಜ್ಯ ಸರ್ಕಾರ ಮತ್ತ ಪೋಷಕರಿಗೆ ಈ ಸುದ್ದಿ ಆಘಾತ ತಂದೊಡ್ಡಿದೆ. ಯಾಕಂದ್ರೆ, ವಠಾರ ಶಾಲೆಗೆ ಹೋಗಿದ್ದ 4 ಮಕ್ಕಳಿಗೆ ಕೊರೊನಾ ದೃಢವಾಗಿರುವ ಘಟನೆ ಜಿಲ್ಲೆಯ ಅಫಜಲಪುರ ತಾಲೂಕಿನ ಮಾಶಾಳ್ ಗ್ರಾಮದಲ್ಲಿ ನಡೆದಿದೆ.
 ವಿದ್ಯಾಗಮ ಯೋಜನೆಯಡಿ ವಠಾರ ಶಾಲೆಯನ್ನು ಪ್ರಾರಂಭಿಸಿದ್ದು ಸುಮಾರು 250 ಮಕ್ಕಳು ಶಾಲೆಗೆ ಬರುತ್ತಿದ್ದರು ಎಂದು ಹೇಳಲಾಗಿದೆ.

ಈ ಹಿಂದೆ ಶಾಲೆಯ ಮುಖ್ಯ ಶಿಕ್ಷಕನಿಗೆ ಸೋಂಕು ದೃಢವಾಗಿತ್ತು. ಈ ಹಿನ್ನೆಲೆಯಲ್ಲಿ ಶಾಲೆಯ 250 ಮಕ್ಕಳಿಗೆ ಕೊರೊನಾ ಟೆಸ್ಟ್ ಮಾಡಲಾಗಿತ್ತು. ಈ ಪೈಕಿ ನಾಲ್ವರಲ್ಲಿ ಸೋಂಕು ಪತ್ತೆಯಾಗಿದ್ದು ಮುಖ್ಯ ಶಿಕ್ಷಕರಿಂದ ಮಕ್ಕಳಿಗೆ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ನಾಲ್ವರು ವಿದ್ಯಾರ್ಥಿಗಳಿಗೆ ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜೊತೆಗೆ, ಆರೋಗ್ಯ ಇಲಾಖೆ ಇನ್ನೂ 20 ವಿದ್ಯಾರ್ಥಿಗಳ ವರದಿಯ ನಿರೀಕ್ಷೆಯಲ್ಲಿದೆ.

ಏನಿದು ವಿದ್ಯಾಗಮ ಯೋಜನೆ?
ವಿದ್ಯಾಗಮ ಯೋಜನೆ ಹೆಸ್ರಲ್ಲಿ ಮಕ್ಕಳಿಗೆ ತರಗತಿ ನಡೆಸಲಾಗ್ತಾ ಇದೆ. ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಶಾಲೆ ಮಕ್ಕಳಿಗೆ ತರಗತಿ ನಡೆಸಲಾಗ್ತಾ ಇದೆ. ವಠಾರದಲ್ಲಿರೋ ಅಥವಾ ಅಕ್ಕಪಕ್ಕದಲ್ಲಿರೋ ಮಕ್ಕಳನ್ನ ಸೇರಿಸಿ ಕ್ಲಾಸ್ ಮಾಡಲಾಗುತ್ತಿದ್ದು ಸರ್ಕಾರದ ನಿಯಮದಂತೆ 5 ಮಕ್ಕಳನ್ನ ಮೀರಿ ಸೇರಿಸೋ ಹಾಗಿಲ್ಲ. ಅಂದರೆ, ತರಗತಿ ನಡೆಸೋದಕ್ಕೆ ಮಿತಿ ಮೀರಿ ಮಕ್ಕಳನ್ನ ತರಗತಿಗೆ ಕರೆಯೋ ಹಾಗಿಲ್ಲ.

ಆದರೆ, ಪ್ರಸ್ತುತ ಸರ್ಕಾರದ ಆದೇಶವನ್ನು ಧಿಕ್ಕರಿಸಿ 30-40 ಮಕ್ಕಳನ್ನ ಒಂದೇ ಕಡೆ ಸೇರಿಸಿ ತರಗತಿ ತೆಗೆದುಕೊಳ್ತಿದ್ದಾರೆ. ಹಾಗಾಗಿ, ವಿದ್ಯಾಗಮ ಯೋಜನೆಯೇ ಮಕ್ಕಳಿಗೆ ಮಾರಕವಾಗುತ್ತಿದೆ. ಈ ಹಿಂದೆ, ವಿದ್ಯಾಗಮ ಯೋಜನೆ ಬಗ್ಗೆ ಖಾಸಗಿ ಶಾಲೆಗಳು ಸಹ ತಕರಾರು ಎತ್ತಿದ್ದವು.
    

 


Spread the love

About Laxminews 24x7

Check Also

ಮನುಷ್ಯ ನೀನು ದಂಡ, ಸತ್ತು ಹೋಗು!: ಎಐ ಚಾಟ್‌ಬಾಟ್‌ ಹೇಳಿಕೆ

Spread the love ನವದೆಹಲಿ: ಇತ್ತೀಚೆಗೆ ಕೃತಕ ಬುದ್ಧಿಮತ್ತೆ(ಎಐ) ಚಾಲಿತ ರೊಬೋಟ್‌ ಒಂದು ಕೆಲಸದ ಒತ್ತಡದಿಂದ ಆತ್ಮಹತ್ಯೆಗೆ ಶರಣಾಗಿತ್ತು. ಇದರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ