Breaking News

ಕರ್ನಾಟಕದ ಆಕ್ಷೇಪ ತಿರಸ್ಕರಿಸಿದ ತಮಿಳುನಾಡು -ಟಾಪ್ 10 ಸುದ್ದಿಗಳ ಕ್ವಿಕ್​ರೌಂಡಪ್

Spread the love

ಬಾದಾಮಿ ಪ್ರವಾಸ ಕೈಗೊಂಡ ವಿಪಕ್ಷ ನಾಯಕ ಸಿದ್ದರಾಮಯ್ಯ
ವಿಪಕ್ಷ ನಾಯಕ ಸಿದ್ದರಾಮಯ್ಯ ಮೂರು ದಿನಗಳ ಬದಾಮಿ ಕ್ಷೇತ್ರದ ಪ್ರವಾಸ ಕೈಗೊಂಡಿದ್ದಾರೆ. ವಿಶೇಷ ವಿಮಾನದ ಮೂಲಕ ಈಗಾಗ್ಲೆ ಸಿದ್ದರಾಮಯ್ಯ ಹುಬ್ಬಳ್ಳಿಗೆ ತೆರಳಿದ್ದು, ಹುಬ್ಬಳ್ಳಿಯಿಂದ ಬದಾಮಿಗೆ ಭೇಟಿ ನೀಡಲಿದ್ದಾರೆ. ಇಂದು ಬಾದಾಮಿ ಕ್ಷೇತ್ರದಲ್ಲಿಯೇ ಸಿದ್ದರಾಮಯ್ಯ ವಾಸ್ತವ್ಯ ಹೂಡಲಿದ್ದು, ನಾಳೆ ಬೆಂಗಳೂರಿಗೆ ವಾಪಾಸ್ ಆಗಲಿದ್ದಾರೆ. ಗುಳೇದಗುಡ್ಡ ಹಾಗೂ ಬಾದಾಮಿ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಭಾಗಿಯಾಗಲಿದ್ದು, ವಿವಿಧ ಕಾಮಗಾರಿಗಳ ಶಂಕುಸ್ಥಾಪನೆಯಲ್ಲಿ ಸಿದ್ದರಾಮಯ್ಯ ಪಾಲ್ಗೊಳ್ಳಲಿದ್ದಾರೆ.

ಹೊಗೆನಕಲ್ ಯೋಜನೆ: ಕರ್ನಾಟಕದ ಆಕ್ಷೇಪ ತಿರಸ್ಕರಿಸಿದ ತಮಿಳುನಾಡು
ಹೊಗೇನಕಲ್‌ ಜಲ ಯೋಜನೆಯ ಎರಡನೇ ಹಂತದ ಕಾಮಗಾರಿ ಕುರಿತಂತೆ ಡಿಎಂಕೆ ಸರ್ಕಾರವನ್ನು ಬೆಂಬಲಿಸುವುದಾಗಿ ಎಐಎಡಿಎಂಕೆ ಹೇಳಿದೆ.. ಇದೇ ವೇಳೆ ಯೋಜನೆಗೆ ಆಕ್ಷೇಪ ಎತ್ತಿರುವ ಕರ್ನಾಟಕ ಸರ್ಕಾರದ ನಿಲುವನ್ನು ವಿರೋಧಿಸಿದೆ. ಎಐಎಡಿಎಂಕೆ ಸಂಯೋಜಕ ಪನ್ನೀರ್‌ಸೆಲ್ವಂ ‘ಕರ್ನಾಟಕ ಸರ್ಕಾರ ಸಕಾಲದಲ್ಲಿ ಕಾವೇರಿ ನೀರು ಹರಿಸುತ್ತಿಲ್ಲ. ಕೇವಲ ಹೆಚ್ಚುವರಿ ನೀರಷ್ಟೇ ಹರಿದು ಬರುತ್ತಿದೆ ಎಂದು ಆರೋಪಿಸಿದ್ದಾರೆ. ಧರ್ಮಪುರಿ ಮತ್ತು ಕೃಷ್ಣಗಿರಿ ಜಿಲ್ಲೆಗಳ ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವುದು ಈ ಯೋಜನೆಯ ಗುರಿ ಅಂತ ತಮಿಳುನಾಡು ಹೇಳಿಕೊಂಡಿದೆ.

ಸೋಲಾರ್ ತಂತಿಗೆ ಚಿರತೆ ಸಿಲುಕಿ ನರಳಾಟ
ಮೈಸೂರಿನ ಜಮೀನುವೊಂದರಲ್ಲಿ ಸೋಲಾರ್ ತಂತಿಗೆ ಚಿರತೆ ಸಿಲುಕಿ ನರಳಾಡಿದ ಘಟನೆ ನಡೆದಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಮುಳ್ಳೂರು ಗ್ರಾಮದಲ್ಲಿ ಬಾಳೆ ತೋಟದಲ್ಲಿ ರಕ್ಷಣೆಗೆ ಅಳವಡಿಸಿದ್ದ ಸೋಲಾರ್ ತಂತಿಗೆ ಚಿರತೆಯ ಬಲಗಾಲು ಸಿಕ್ಕಿ ಹಾಕಿಕೊಂಡು ನರಳಾಡಿದೆ. ವಿಷಯ ತಿಳಿದ ಮುಳ್ಳೂರು ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಆರ್​ಎಫ್​ಓ ಗೀತಾ ಹಾಗೂ ಅರಣ್ಯ ಸಿಬ್ಬಂದಿ ಚಿರತೆ ರಕ್ಷಿಸಿದ್ದಾರೆ. ಅಲ್ಲದೆ ಅದಕ್ಕೆ ಚಿಕಿತ್ಸೆ ನೀಡಿದ ಬಳಿಕ ಅರಣ್ಯದೊಳಗೆ ಬಿಡಲಾಗುವುದು ಎಂದು ತಿಳಿಸಿದ್ರು..

 


Spread the love

About Laxminews 24x7

Check Also

ಫ್ರಾನ್ಸ್ ಕೈಟ್ ಉತ್ಸವದಲ್ಲಿ ಮಂಗಳೂರಿನ ಗಾಳಿಪಟ: ಫ್ರೆಂಚರ ನಾಡಿನಲ್ಲಿ ಹಾರಲಿದೆ ‘ಕುಡ್ಲದ ತೇರು

Spread the love ಮಂಗಳೂರು: ಬಾನಾಡಿಯಲ್ಲಿ ಹಕ್ಕಿಗಳಂತೆ ಹಾರಾಡುವ ಗಾಳಿಪಟ ಈಗ ಅಂತಾರಾಷ್ಟ್ರೀಯ ಹಬ್ಬವಾಗಿದೆ. ಈ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಸೆಪ್ಟಂಬರ್​ನಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ