ಕಾಗವಾಡ ತಾಲೂಕಿನ ಸಿದ್ಧಶ್ರೀ ಸಂಸ್ಥಾನ ಶ್ರೀ. ಕರಿಯೋಗಸಿದ್ಧ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ, ಕೌಲಗುಡ್ಡ ಇಲ್ಲಿಗೆ ಕಟ್ಟಿಸಿದ 14 ನೂತನ ಕೋಣೆಗಳ ಕಟ್ಟಡದ ಉದ್ಘಾಟನೆ ಸಮಾರಂಭ ಗುರುವಾರ ರಂದು ಬೆಳಿಗ್ಗೆ 10 ಗಂಟೆಗೆ ಕರ್ನಾಟಕ ರಾಜ್ಯದ ಗ್ರಾಮಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪಾ ಇವರು ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ನೆರವೇರಿಸಲಿದ್ದಾರೆಯೆಂದು ಸಿದ್ಧಯೋಗಿ ಅಮರೇಶ್ವರ ಮಹಾರಾಜರು ಮಾಹಿತಿ ನೀಡಿದರು.
ಬುಧವಾರ ರಂದು ಇನ್ ವಾಹಿನಿಗೆ ಸಿದ್ಧಯೋಗಿ ಅಮರೇಶ್ವರ ಮಹಾರಾಜರು ಮಾಹಿತಿ ನೀಡುವಾಗ, ಕರಿಯೋಗಸಿದ್ಧ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ನಿರ್ಮಿಸಲು ಕೋಣೆಗಳ ಕಟ್ಟಡಕ್ಕಾಗಿ ಸಚಿವರಾದ ಕೆ.ಎಸ್.ಈಶ್ವರಪ್ಪಾ ದೊಡ್ಡ ಪ್ರಮಾಣದಲ್ಲಿ ಸಹಕಾರ ನೀಡಿದ್ದಾರೆ. ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮಾಡುವ ಉದ್ದೇಶಕ್ಕಾಗಿ ಶಾಲೆ ನಿರ್ಮಿಸಲಾಗಿದೆ.
ಸಮಾರಂಭದ ಸಾನ್ನಿಧ್ಯವನ್ನು ಕಾಗಿನೆಲ್ ಕನಕಗುರುಪೀಠದ ಜಗದ್ಗುರು ರೇವನಸಿದ್ಧೇಶ್ವರ ಶ್ರೀ ನಿರಂಜನಾನಂದಪುರಿ ಸ್ವಾಮೀಜಿಗಳು ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಇವರೊಂದಿಗೆ ಕನೇರಿ ಸಿದ್ಧಗೀರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ, ಹೊಸದುರ್ಗ ಕಾಗಿನೇಲ್ ಮಠದ ಈಶ್ವರಾನಂದಪುರಿ ಸ್ವಾಮೀಜಿ, ಶಿರನಾಳ ಮಠದ ಸೋಮಲಿಂಗೇಶ್ವರ ದೇವರು, ಅಥಣಿ ಗಚ್ಚಿನ ಮಠದ ಶಿವಬಸವ ಮಹಾಸ್ವಾಮೀಜಿ, ಸೇರಿದಂತೆ ಅನೇಕ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ.
ಉದ್ಘಾಟಕರಾಗಿ ಉಪಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ, ಕಾಗವಾಡ ಶಾಸಕರು, ಜವಳಿ ಇಲಾಖೆ ಸಚಿವ ಶ್ರೀಮಂತ ಪಾಟೀಲ, ಜಿಲ್ಲಾ ಉಸ್ತುವರಿ ಸಚಿವ ರಮೇಶ ಜಾರಕಿಹೊಳಿ, ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಜಿಲ್ಲೆಯ ಎಲ್ಲ ಶಾಸಕರು, ಸಚಿವರು, ಸಂಸದರು, ಮಾಜಿ ಶಾಸಕರು, ಬೇರೆ-ಬೇರೆ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆಯೆಂದು ಅಮರೇಶ್ವರ ಮಹಾರಾಜರು ತಿಳಿಸಿದರು.
ಈ ನಿಮಿತ್ಯ ಶುಕ್ರವಾರ ದಿ. 19 ರಿಂದ ಮಂಗಳವಾರ ದಿ. 23ರ ವರೆಗೆ ಪ್ರತಿದಿನ ಸಂಜೆ ಶ್ರೀಗಳಿಂದ ಪ್ರವಚನೆ ಕಾರ್ಯಕ್ರಮ ನೆರವೇರಲಿದೆ.
ಬುಧವಾರ ದಿ. 24 ರಂದು ಸಂಜೆ 4 ಗಂಟೆಗೆ ಸಿದ್ಧರ ಪಲ್ಲಕ್ಕಿ ಭೇಟಿ ಕಾರ್ಯಕ್ರಮ ಅದ್ಧೂರಿವಾಗಿ ನೆರವೇರಿತು. ಸಂಜೆ ಚಿಂತನಾಸಭೆ ಕಾರ್ಯಕ್ರಮ ಜರುಗಿತು. ಮತ್ತು ರಾತ್ರಿ ಡೊಳ್ಳಿನ ಪದಗಳ ಕಾರ್ಯಕ್ರಮವು ನೆರವೇರಿದವು.