ಯಮಕನಮರಡಿ: ಮಹಾರಾಷ್ಟ್ರದಿಂದ ಬಂದ ರಾಜ್ಯದ ವಲಸೆ ಕಾರ್ಮಿಕರಿಗೆ ತಮ್ಮ ಗೆಸ್ಟ್ ಹೌಸ್ ನಲ್ಲಿ ಕ್ವಾರಂಟೈನ್ ಇಡಲು ಬಿಟ್ಟುಕೊಟ್ಟು ಸ್ವತಃ ತಮ್ಮ ಖರ್ಚಿನಲ್ಲಿ ಊಟ ಉಪಹಾರ ವ್ಯವಸ್ಥೆ ಮಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ , ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅವರ ಜನಪರ ಕಾರ್ಯ ಜನಪ್ರತಿನಿಧಿಗಳಿಗೆ ಮಾದರಿಯಾಗುವಂತಿದೆ.
ಮಹಾರಾಷ್ಟ್ರದಿಂದ ಬಂದ ಸುಮಾರು ಒಂದು ಸಾವಿರ ವಲಸೆ ಕಾರ್ಮಿಕರಿಗೆ ದಡ್ಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಶಾಸಕರ ಅಲದಾಳ ಗೆಸ್ಟ್ ಹೌಸ್ ಸೇರಿ ಬೇರೆ ಬೇರೆ ಕಡೆ ಇವರನ್ನು ಇಂದಿನಿಂದ 14 ದಿನಗಳ ಕ್ವಾರಂಟೈನ್ ನಲ್ಲಿ ಇಡಲಾಗಿದೆ. ಶಾಸಕರ ಗೆಸ್ಟ್ ಹೌಸ್ ನಲ್ಲಿ ಮಹಿಳೆಯರು ಮಕ್ಕಳು ಸೇರಿ ಸುಮಾರು ನೂರು ಜನರನ್ನು ಕ್ವಾರಂಟೈನ್ ಮಾಡಲಾಗಿದೆ.
ದಿನನಿತ್ಯ ಇವರ ಆರೋಗ್ಯದ ನಿಗಾಃ ಇಡಲಾಗಿದ್ದು ಶಾಸಕರು ತಮ್ಮ ಸ್ವಂತ ಖರ್ಚಿನಲ್ಲಿ ತಮ್ಮ ಕಾರ್ಯಕರ್ತರ ನೇತೃತ್ವದಲ್ಲಿ ಇವರ ಊಟ ಉಪಹಾರ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಶಾಸಕರ ಈ ಕಾರ್ಯಕ್ಕೆ ಸ್ಥಳಿಯ ಕಾರ್ಯಕರ್ತರಾದ ಆರ್.ಕೆ.ದೇಸಾಯಿ, ಮಹೇಶ ಕಡಪಟ್ಟಿ, ಕಿರಣಸಿಂಗ್ ರಜಪೂತ ಫಜಲ್ ಮಕಾಂದಾರ ಸೇರಿ ಹಲವರು ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.