Breaking News

ಪ್ರಿಯಕರನ ಹುಟ್ಟುಹಬ್ಬದಂದು ಆತ ಇದ್ದ ಜೈಲಿಗೆ ಹೋಗಿ ರೀಲ್ಸ್​ ಮಾಡಿದ ಗೆಳತಿ

Spread the love

ಭೋಪಾಲ್: ಛತ್ತೀಸ್‌ಗಢದ ಅತ್ಯಂತ ಸುರಕ್ಷಿತ ಕಾರಾಗೃಹಗಳಲ್ಲಿ ರಾಯ್‌ಪುರ ಕೇಂದ್ರ ಕಾರಾಗೃಹವು ಕೂಡ ಒಂದು. ಆದರೆ ಯುವತಿಯೊಬ್ಬಳು ಜೈಲಿನಲ್ಲಿ ಕೈದಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದು, ಜೈಲಿನ ಸುರಕ್ಷತೆ ಬಗ್ಗೆ ಕಳವಳ ಹುಟ್ಟುಹಾಕಿದೆ. ಯುವತಿಯೊಬ್ಬಳು ತನ್ನ ಪ್ರಿಯಕರನ ಹುಟ್ಟುಹಬ್ಬದಂದು ಸಂದರ್ಶಕರ ಕೋಣೆಯೊಳಗೆ ಮುಕ್ತವಾಗಿ ವಿಡಿಯೋ ರೆಕಾರ್ಡ್​ ಮಾಡಿದ್ದಾರೆ. ಮೊಬೈಲ್​ನಲ್ಲಿ ವಿಡಿಯೋವನ್ನು ಚಿತ್ರೀಕರಿಸಲಾಗಿದೆ. ಜೈಲಿನ ಭದ್ರತೆ ಮತ್ತು ಅಧಿಕೃತ ಮೇಲ್ವಿಚಾರಣೆಯ ಬಗ್ಗೆ ಗೊಂದಲದ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ವೈರಲ್ ಆಗಿರುವ ಈ ಕ್ಲಿಪ್‌ನಲ್ಲಿ, ಆ ಯುವತಿ ಭಾವನಾತ್ಮಕವಾಗಿ ಕ್ಯಾಮೆರಾದ ಮುಂದೆ ಮಾತನಾಡುತ್ತಾ, ಇಂದು ನನ್ನ ಗೆಳೆಯನ ಹುಟ್ಟುಹಬ್ಬ. ನಾನು ಅವನನ್ನು ಭೇಟಿಯಾಗಲು ಕೇಂದ್ರ ಜೈಲಿಗೆ ಬಂದಿದ್ದೇನೆ. ಅವನು ನನ್ನೊಂದಿಗೆ ಇಲ್ಲದಿರುವುದು ತುಂಬಾ ನೋವುಂಟುಮಾಡುತ್ತಿದೆ.

ಅವನ ಹುಟ್ಟುಹಬ್ಬದಂದು ನಾನು ಅವನೊಂದಿಗೆ ಇಲ್ಲ. ಆದರೆ ನಾನು ಅವನನ್ನು ಭೇಟಿಯಾಗಲು ಬಂದಿದ್ದೇನೆ, ಅವನ ಪ್ರತಿಕ್ರಿಯೆ ಹೇಗಿರುತ್ತೆ ನೋಡೋಣ ಎಂದು ಹೇಳುತ್ತಿರುವುದು ಕಂಡುಬರುತ್ತದೆ. ಸಂದರ್ಶಕರ ಕೋಣೆಯೊಳಗೆ ತನ್ನ ಗೆಳೆಯನೊಂದಿಗೆ ಮಾತನಾಡುತ್ತಿದ್ದಾಗ ಈ ವೀಡಿಯೊವನ್ನು ಚಿತ್ರೀಕರಿಸಲಾಗಿದೆ ಮತ್ತು ನಂತರ ಅದನ್ನು ಆಕೆಯ ಸಾಮಾಜಿಕ ಮಾಧ್ಯಮ ಖಾತೆಗೆ ಅಪ್‌ಲೋಡ್ ಮಾಡಲಾಗಿತ್ತು.

ವೀಡಿಯೊದಲ್ಲಿ ಕಾಣುತ್ತಿರುವ ಕೈದಿಯನ್ನು ತಾರಕೇಶ್ವರ ಎಂದು ಗುರುತಿಸಲಾಗಿದ್ದು, ಪ್ರಸ್ತುತ ರಾಯ್‌ಪುರ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ. ವೈರಲ್ ವೀಡಿಯೊದ ಬಗ್ಗೆ ಜೈಲು ಅಧಿಕಾರಿಗಳು ಇಲ್ಲಿಯವರೆಗೆ ಮೌನವನ್ನು ಕಾಯ್ದುಕೊಂಡಿದ್ದಾರೆ.

 


Spread the love

About Laxminews 24x7

Check Also

ಮೂಡಲಗಿ ತಾಲೂಕಿನ ಸುಪ್ರಸಿದ್ಧ ಕುಲಗೋಡ ಗ್ರಾಮದ ಶ್ರೀ ಬಲಭೀಮ ದೇವರ ಕಾರ್ತಿಕೋತ್ಸವದಲ್ಲಿ ಯುವ ನಾಯಕ ರಾಹುಲ್ ಜಾರಕಿಹೊಳಿ

Spread the love ಮೂಡಲಗಿ ತಾಲೂಕಿನ ಸುಪ್ರಸಿದ್ಧ ಕುಲಗೋಡ ಗ್ರಾಮದ ಶ್ರೀ ಬಲಭೀಮ ದೇವರ ಕಾರ್ತಿಕೋತ್ಸವದಲ್ಲಿ ಯುವ ನಾಯಕ ರಾಹುಲ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ