Breaking News

ಇಟಲಿಯಲ್ಲೂ 20,000 ಜನರ ಕೊಂದ ಕಿಲ್ಲರ್ ಕೊರೊನಾ..!

Spread the love

ರೋಮ್/ವಾಷಿಂಗ್ಟನ್, ಏ.13-ಸೂಪರ್ ಪವರ್ ರಾಷ್ಟ್ರ ಅಮೆರಿಕದಲ್ಲಿ 20,000ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿರುವ ಕಿಲ್ಲರ್ ಕೊರೊನಾ ಇಟಲಿಯಲ್ಲಿಯೂ ಅದೇ ತೀವ್ರತೆಯ ರುದ್ರನರ್ತನ ಮುಂದುವರಿಸಿದೆ. ಇಲ್ಲಿಯೂ ಕೂಡ ಸತ್ತವರ ಸಂಖ್ಯೆ 20,000 ದಾಟಲಿರುವುದು ಆತಂಕದ ಸಂಗತಿಯಾಗಿದೆ.

ಇಟಲಿಯಲ್ಲಿ ನಿನ್ನೆ ಒಂದೇ ದಿನ 2000ಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 24 ತಾಸುಗಳ ಅವಧಿಯಲ್ಲಿ 620ಕ್ಕೂ ಅಧಿಕ ಸೋಂಕಿತರು ಅಸುನೀಗಿದ್ದಾರೆ.ಇಟಲಿಯಲ್ಲಿ ನಿನ್ನೆ ರಾತ್ರಿವರೆಗೆ ದೊರೆತ ಅಂಕಿ -ಅಂಶಗಳ ಪ್ರಕಾರ 19,468 ಮಂದಿ ಬಲಿಯಾಗಿದ್ದು, ಇಂದು ಸಾವಿನ ಸಂಖ್ಯೆ 20,000 ದಾಟಲಿದೆ.

ಇದರೊಂದಿಗೆ ಅಮೆರಿಕ ನಂತರ ಅತಿ ಹೆಚ್ಚು ಕೊರೊನಾ ಸೋಂಕು ಸಂಭವಿಸಿರುವ ದೇಶ ಎಂಬ ಕುಖ್ಯಾತಿಗೆ ಇಟಲಿ ಪಾತ್ರವಾಗಿದೆ. ಇನ್ನು ಅಮೆರಿಕನ್ನರ ಪಾಲಿಗೆ ಕೊರೊನಾ ವಿನಾಶಕಾರಿ ಸುನಾಮಿಯಂತಾಗಿದ್ದು, ಅಲ್ಲಿ ಬಲಿಯಾದವರ ಸಂಖ್ಯೆ 22,000 ದಾಟಿದೆ. 5.26 ಲಕ್ಷ ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಮರಣ ಪ್ರಮಾಣ ಮತ್ತಷ್ಟು ಹೆಚ್ಚಾಗುತ್ತಿದೆ.

ಯೂರೋಪ್ ಖಂಡ ಸ್ಪೇನ್ ಸಾವು ಮತ್ತು ಸೋಂಕಿನಲ್ಲಿ ಮೂರನೇ ಸ್ಥಾನದಲ್ಲಿದೆ. ಅಲ್ಲಿ ಈವರೆಗೆ 19,000 ಮಂದಿ ಬಲಿಯಾಗಿದ್ದಾರೆ. ಸೋಂಕು ಪೀಡಿತರ ಸಂಖ್ಯೆ 3.60 ಲಕ್ಷದಾಟಿದೆ. ಇಂಗ್ಲೆಂಡ್, ಜರ್ಮನಿ, ನೆದರ್‍ಲೆಂಡ್ ಮತ್ತಿತ್ತರ ದೇಶಗಳಲ್ಲಿಯೂ ಸಾವು ಮತ್ತು ಸೋಂಕಿ ಪ್ರಮಾಣ ಹೆಚ್ಚಾಗುತ್ತಿದೆ.

ಕೊರೊನಾ ವೈರಸ್‍ನಕೇಂದ್ರ ಬಿಂದುಚೀನಾ, ಜಪಾನ್, ಪಾಕಿಸ್ತಾನ, ದಕ್ಷಿಣಕೊರಿಯಾ ದೇಶಗಳಲ್ಲಿಯೂ ಹೋಸ ಹೊಸ ಕೋಂಕು ಪ್ರಕರಣಗಳು ವರದಿಯಾಗುತ್ತಲೇ ಇವೆ.


Spread the love

About Laxminews 24x7

Check Also

ವಿಜಯಪುರದಲ್ಲಿ ಬೃಹತ್ ಹನುಮ ಮೂರ್ತಿ ಮೆರವಣಿಗೆ: ಶಾಸಕ ಯತ್ನಾಳ ಭಾಗಿ

Spread the love ವಿಜಯಪುರದಲ್ಲಿ ಬೃಹತ್ ಹನುಮ ಮೂರ್ತಿ ಮೆರವಣಿಗೆ: ಶಾಸಕ ಯತ್ನಾಳ ಭಾಗಿ ವಿಜಯಪುರ ನಗರದಲ್ಲಿ ಹನುಮ ಜಯಂತಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ