Breaking News

ಚೀಟಿ ವ್ಯವಹಾರದಲ್ಲಿ ವಂಚನೆ; ಕೇಸ್‌ನಿಂದ ಕೈಬಿಡಲು 5 ಲಕ್ಷಕ್ಕೆ ಡೀಲ್ ಮಾಡಿದ್ದ ಇನ್‌ಸ್ಪೆಕ್ಟರ್ ‘ಲೋಕಾ’ ಬಲೆಗೆ

Spread the love

ಬೆಂಗಳೂರು: ಪ್ರಕರಣವೊಂದರಿಂದ ಕೈಬಿಡಲು 5 ಲಕ್ಷಕ್ಕೆ ಬೇಡಿಕೆಯಿಟ್ಟು, ಹಣ ಪಡೆಯುವಾಗ ಕೆ.ಪಿ. ಅಗ್ರಹಾರ ಠಾಣೆ  ಇನ್‌ಸ್ಪೆಕ್ಟರ್‌ವೊಬ್ಬರು ಲೋಕಾಯುಕ್ತ  ಬಲೆಗೆ ಬಿದ್ದಿದ್ದಾರೆ.

ಇನ್‌ಸ್ಪೆಕ್ಟರ್ ಗೋವಿಂದರಾಜು ಟ್ರ್ಯಾಪ್‌ಗೆ ಒಳಗಾದವರು. ಟ್ರ್ಯಾಪ್‌ಗೂ ಮುನ್ನ ಆರೋಪಿಗಳ ಬಂಧನಕ್ಕೆ ತೆರಳಿದ್ದ ಇನ್ಸ್ಪೆಕ್ಟರ್, ಚೀಟಿ ವ್ಯವಹಾರದಲ್ಲಿ ವಂಚನೆ ಸಂಬಂಧ ಬಂಧನ ಕಾರ್ಯಾಚರಣೆ ನಡೆಸಿದ್ದರು. ಪ್ಲಾಟ್‌ನಲ್ಲಿ ಆರೋಪಿಗಳು ಪ್ರತಿರೋಧ ತೋರಿದ್ದರು. ಪೊಲೀಸರು ಮನೆಗೆ ಬರುವ ಸಿಸಿಟಿವಿ ಹಾಗೂ ವೀಡಿಯೋ ಮಾಡಿದ್ದರು. ‘ನೋಟಿಸ್ ಕೊಡದೇ ಬಂದಿದ್ದೀರಾ, ನಾವು ಲಾಯರ್ ಬಳಿ ಮಾತನಾಡುತ್ತೇವೆ’ ಎಂದು ಆರೋಪಿಗಳು ಪಟ್ಟುಹಿಡಿದಿದ್ದರು. ಪೊಲೀಸರು ಬಳಿಕ ಹೊಯ್ಸಳ ಕರೆಯಿಸಿ ಠಾಣೆಗೆ ಕರೆದುಕೊಂಡು ಹೋಗಿದ್ದರು.

ಸ್ಟೇಷನ್‌ಗೆ ಹೋದ ಮೇಲೆ ಡೀಲ್ ಮಾಡಿದ್ದರು. ಕೇಸ್‌ನಿಂದ ಕೈ ಬಿಡಲು ಐದು ಲಕ್ಷ ನೀಡುವಂತೆ ಹೇಳಿದ್ದರು. ಮೊದಲು ಒಂದು ಲಕ್ಷ ಹಣ ತರಿಸಿಕೊಂಡಿದ್ದರು. ನಂತರ ನಾಲ್ಕು ಲಕ್ಷ ಹಣ ತರುವಂತೆ ಸೂಚನೆ ನೀಡಿದ್ದರು. ನಾಲ್ಕು ಲಕ್ಷ ಹಣ ಪಡೆಯುವಾಗ ಲೋಕಾಯುಕ್ತ ಬಲೆಗೆ ಇನ್ಸ್ಪೆಕ್ಟರ್ ಬಿದ್ದಿದ್ದಾರೆ. ಮೈಸೂರು ರಸ್ತೆ ಸಿಎಆರ್ ಗ್ರೌಂಡ್ ಬಳಿ ಇನ್‌ಸ್ಪೆಕ್ಟರ್ ಟ್ರ‍್ಯಾಪ್ ಆಗಿದ್ದಾರೆ.

ಇನ್‌ಸ್ಪೆಕ್ಟರ್ ಗೋವಿಂದರಾಜು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಪೊಲೀಸರ ಬಂಧನ ಕಾರ್ಯಾಚರಣೆಯ ಸಿಸಿಟಿವಿ ವಿಡಿಯೋ, ಮೊಬೈಲ್ ದೃಶ್ಯಾವಳಿ ಲಭ್ಯವಿದೆ.

ವೀಡಿಯೋದಲ್ಲೇನಿದೆ?
ವ್ಯಕ್ತಿ 1: ಸರ್ ನಿಮ್ಮ ಕರ್ತವ್ಯಕ್ಕೆ ಅಡ್ಡಿ ಪಡಿಸಿಲ್ಲ… ನೀವು ನೋಟಿಸ್ ಕೊಟ್ಟಿಲ್ಲ… ನೀವು ನೋಟೀಸ್ ತೋರಿಸಿಲ್ಲ ಸರ್.. ನಾವು ಅಡ್ಡ ಬರಲಿಲ್ಲ ಸರ್.. ನೋಟಿಸ್ ತೋರಿಸಿಲ್ಲ ಅರ್ಧ ಗಂಟೆ ಆಯ್ತು.
ಗೋವಿಂದರಾಜು, ಇನ್‌ಸ್ಪೆಕ್ಟರ್: ನಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸ್ತಾ ಇದ್ದೀರಾ?
ವ್ಯಕ್ತಿ 1: ನನಗೆ ನಮ್ಮ ಲಾಯರ್ ಬೇಕು… ನಿಮಗೆ ನಾನು ಸಹಕಾರ ಕೊಡ್ತೇನೆ… ನನಗೆ ಲಾಯರ್ ಬರಬೇಕು… ಇದರಲ್ಲಿ ಲ್ಯಾಪ್ಸ್ ಇದೆ.


Spread the love

About Laxminews 24x7

Check Also

ಅಮೆರಿಕ ಸುಂಕ ಹೇರಿದ್ರೂ ರಫ್ತು ಹೆಚ್ಚಳ, 11 ತಿಂಗಳಿಗೆ ಆಮದು ಮಾಡುವಷ್ಟು ವಿದೇಶಿ ವಿನಿಮಯ ಮೀಸಲು

Spread the loveನವದೆಹಲಿ: 2027 ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ 6.8%-7.2% ರಷ್ಟು ಬೆಳೆಯುವ ನಿರೀಕ್ಷೆಯಿದೆ ಎಂದು ಆರ್ಥಿಕ ಸಮೀಕ್ಷೆ  …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ