Breaking News

ಆಶಾ ಕಾರ್ಯಕರ್ತೆಯಿಂದ ಸ್ಟಾಫ್ ನರ್ಸ್ ಗೂ ತಗುಲಿದ ಕೊರೊನಾ

Spread the love

ಹಾವೇರಿ: ಜಿಲ್ಲೆಯಲ್ಲಿ ಇವತ್ತು 10 ಮಂದಿಗೆ ಕೊರೊನಾ ತಗುಲಿದ್ದು, ಸೋಂಕಿತರ ಸಂಖ್ಯೆ 54ಕ್ಕೇರಿಕೆಯಾಗಿದೆ. ಸವಣೂರು ಪಟ್ಟಣದಲ್ಲಿ ಸ್ಟಾಫ್ ನರ್ಸ್ ಸೇರಿದಂತೆ ಏಳು ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.

ಸವಣೂರು ಪಟ್ಟಣದ 23 ವರ್ಷದ ಗರ್ಭಿಣಿಗೆ ರೋಗಿ 8699 ಪ್ರಾಥಮಿಕ ಸಂಪರ್ಕದಿಂದ ಏಳು ಜನರಿಗೆ ಕೊರೊನಾ ಸೋಂಕು ಧೃಡಪಟ್ಟಿದೆ. ಇನ್ನು ಸವಣೂರು ತಾಲೂಕಿನ ಕಾರಡಗಿ ಗ್ರಾಮದ 38 ವರ್ಷದ ಆಶಾ ಕಾರ್ಯಕರ್ತೆ (ರೋಗಿ-8700)ಯ ಸಂಪರ್ಕದಿಂದ ಸ್ಟಾಫ್ ನರ್ಸ್ ಗೆ ಕೊರೊನಾ ವಕ್ಕರಿಸಿದೆ. ಜೂನ್ 21ರಂದು ಆಶಾ ಕಾರ್ಯಕರ್ತೆಯಲ್ಲಿ ಸೋಂಕು ದೃಢಪಟ್ಟಿದ್ದು, ಪ್ರಾಥಮಿಕ ಸಂಪರ್ಕದಲ್ಲಿರುವ ತಾಲೂಕು ಸರ್ಕಾರಿ ಆಸ್ಪತ್ರೆಯ ಸ್ಟಾಫ್ ನರ್ಸ್ ಗೆ ಸೋಂಕು ತಗುಲಿದೆ.

ಹಾನಗಲ್ ತಾಲೂಕಿನ ಶಿವಪುರ, ಕುಂಟನಹೊಸಳ್ಳಿ ಹಾಗೂ ಚಿಕ್ಕೇರಿಹೊಸಳ್ಳಿ ಗ್ರಾಮದ ತಲಾ ಒಬ್ಬರಲ್ಲಿ ದೃಢಪಟ್ಟಿದ್ದು, ಕುಂಟನಹೊಸಳ್ಳಿ ಗ್ರಾಮದಲ್ಲಿ ಬೀಡಿ ಅಂಗಡಿ ಇಟ್ಟುಕೊಂಡಿದ್ದ 55 ವರ್ಷದ ವ್ಯಕ್ತಿಗೆ ಸೋಂಕು ಧೃಡಪಟ್ಟಿದೆ. ಇಬ್ಬರು ಸೋಂಕಿತರ ಸಂಪರ್ಕದಲ್ಲಿದ್ದವರನ್ನು ಜಿಲ್ಲಾಡಳಿತ ಪತ್ತೆ ಮಾಡುತ್ತಿದೆ.


Spread the love

About Laxminews 24x7

Check Also

ಭಾನುವಾರ ನೀಟ್ ಪರೀಕ್ಷೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯ 65 ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

Spread the love ಬೆಂಗಳೂರು: ವೈದ್ಯಕೀಯ ಪ್ರವೇಶಕ್ಕೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ವತಿಯಿಂದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್​-ಯುಜಿ) …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ