Breaking News

ಒಳಿತು ಮಾಡು ಮನುಷ್ಯಾ.. ನೀ ಇರೋದು ಮೂರು ದಿವಸಾ: ಹಿಂಗೆ ನಡೆದುಕೊಳ್ಳುತ್ತಿದ್ದಾರೆ ಹುಬ್ಬಳ್ಳಿ ಪೊಲೀಸರು…!

Spread the love

ಹುಬ್ಬಳ್ಳಿ: ಕೊರೋನಾ ಎಂಬ ಮಹಾಮಾರಿ ಪ್ರತಿಯೊಬ್ಬರ ನೆಮ್ಮದಿಯನ್ನ ಹಾಳು ಮಾಡುವುದಲ್ಲದೇ, ಬದುಕನ್ನ ನಿರ್ಜೀವಿಯನ್ನಾಗಿ ಮಾಡುತ್ತಿರುವುದು ಎಲ್ಲರಿಗೂ ಗೊತ್ತೆಯಿದೆ. ತಾನೂ ಇರುವುದೆಷ್ಟು ದಿನ ಎಂಬುದು ಗೊತ್ತೆಯಿಲ್ಲದಿದ್ದರೂ, ಮನುಷ್ಯ ಮಾತ್ರ ಮಾನವೀಯ ಇನ್ನೂ ಮೈಗೂಡಿಸಿಕೊಳ್ಳುತ್ತಿಲ್ಲ. ಆದರೆ, ಸದಾಕಾಲ ಸಾರ್ವಜನಿಕರಿಂದ ವಿನಾಕಾರಣ ಬೈಸಿಕೊಳ್ಳುವ ಪೊಲೀಸರು ಮಾತ್ರ, ತಾವೂ ಎಷ್ಟು ಮಾನವೀಯತೆ ಹೊಂದಿದ್ದೇವ ಎಂಬುದನ್ನ ಸದ್ದಿಲ್ಲದೇ ತೋರಿಸಿಕೊಂಡು ಹೋಗುತ್ತಿದ್ದಾರೆ..
ಹುಬ್ಬಳ್ಳಿ ಪೊಲೀಸ್ ಕಮೀಷನರ್ ಲಾಬುರಾಮ್ ಅವರು ಬಂದ ನಂತರ ಪೊಲೀಸ್ ವ್ಯವಸ್ಥೆಯಲ್ಲಿ ಸಾಕಷ್ಟು ಉತ್ತಮ ಬೆಳವಣಿಗೆಗಳು ನಡೆದಿವೆ. ಅದಕ್ಕೆ ಪೂರಕವಾಗಿ ಇಂತಹ ಘಟನೆಗಳು ನಡೆಯುತ್ತಿದ್ದು, ಪೊಲೀಸರು ಸಾರ್ವಜನಿಕ ಸೇವೆಯಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ.

ಕೆಡಗಾಲದಲ್ಲಿ ಸಹಾಯ ಮಾಡುವವನೇ ದೊರೆಯಂಬುದನ್ನ ಮಾನವಂತರು ಅರಿತುಕೊಳ್ಳಬೇಕಿದೆಯಲ್ಲವೇ. ಹುಬ್ಬಳ್ಳಿ ಪೊಲೀಸರಿಗೆ ಕರ್ನಾಟಕವಾಯ್ಸ್.ಕಾಂ ಕೂಡಾ ಧನ್ಯವಾದ ತಿಳಿಸುತ್ತದೆ.


Spread the love

About Laxminews 24x7

Check Also

ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿ‌ ಇಲ್ಲ : ಆರ್ ವಿ ದೇಶಪಾಂಡೆ

Spread the loveಶಿರಸಿ (ಉತ್ತರ ಕನ್ನಡ): ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ, ಆ ವಿಷಯಕ್ಕೆ ಪೂರ್ಣವಿರಾಮ ಇಡಲಾಗಿದ್ದು, ಮುಖ್ಯಮಂತ್ರಿ ಬದಲಾವಣೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ