Breaking News

ಕಲಬುರಗಿ: ಪರೀಕ್ಷೆಯಲ್ಲಿ ನಕಲು ಮಾಡ್ತಿರೋದನ್ನ ಪ್ರಶ್ನಿಸಿ ತಡೆದಿದಕ್ಕೆ ಶಿಕ್ಷಕರ ಮೇಲೆ ವಿದ್ಯಾರ್ಥಿ ಹಲ್ಲೆ ನಡೆಸಿರುವ ಘಟನೆ ಕಲಬುರಗಿಯ ಹೋಮಿಯೋಪಥಿ ಕಾಲೇಜೊಂದರಲ್ಲಿ ನಡೆದಿದೆ. ಶಹಬಾಜ್ ಎಂಬ ವಿದ್ಯಾರ್ಥಿ ಬ್ಲಾಕ್‌ನ ಮೇಲ್ವಿಚಾರಣೆ ಮಾಡುತ್ತಿದ್ದ ಸಹಾಯಕ ಪ್ರಾಧ್ಯಾಪಕ ಶಿವರಾಜಕುಮಾರ್ ಮೇಲೆ ಹಲ್ಲೆ ನಡೆಸಿದ್ದಾನೆ.  ಕಾಲೇಜಿನಲ್ಲಿ ಹೋಮಿಯೋಪಥಿಕ್ ಮಟೇರಿಯಾ ಮೆಡಿಕಾ ವಿಷಯದ ಇಂಟರ್ನಲ್ ಎಕ್ಸಾಮ್ ನಡೆಯುತ್ತಿತ್ತು. ಈ ವೇಳೆ ಶಹಬಾಜ್ ಮೊಬೈಲ್ ಬಳಸಿ ನಕಲು ಮಾಡಲು ಮುಂದಾಗಿದ್ದ. ಇದನ್ನು ನೋಡಿದ ಪ್ರಾಧ್ಯಾಪಕರು ಶಹಬಾಜ್‌ಗೆ ಪ್ರಶ್ನಿಸಿ ಉತ್ತರ ಪತ್ರಿಕೆ ಪಡೆದಿದ್ದರು. ಬಳಿಕ ಕ್ಲಾಸ್ ರೂಮ್‌ನಿಂದ ಆಚೆ ಹೋಗುವಂತೆ ಹೇಳಿದ್ದರು. ಇದಕ್ಕೆ ಕೆರಳಿ ಕೆಂಡವಾದ ಶಹಬಾಜ್ ಪ್ರಾಧ್ಯಾಪಕರ ಮೇಲೆ ಹಲ್ಲೆ ಮಾಡಿದ್ದ. ವಿದ್ಯಾರ್ಥಿಯ ನಡುವಳಿಕೆ ಬಗ್ಗೆ ಕಾಲೇಜಿನ ಆಡಳಿತ ಮಂಡಳಿ ಪಾಲಕರ ಗಮನಕ್ಕೆ ತಂದಿದೆ. ಜೊತೆಗೆ ಮುಂದಿನ ಪರೀಕ್ಷೆಗಳಿಗೆ ಅವಕಾಶ ನೀಡದಿರಲು ನಿರ್ಧಾರ ತೆಗೆದುಕೊಂಡಿದೆ. ಕಾಲೇಜ್ ಆಡಳಿತ ಮಂಡಳಿಯಿಂದಾದಲಿ ಅಥವಾ ಹಲ್ಲೆಗೆ ಒಳಗಾದ ಸಹಾಯಕ ಪ್ರಾಧ್ಯಾಪಕ ಶಿವರಾಜ್ ಕುಮಾರ್‌ನಿಂದ ಈವರೆಗೂ ಯಾವುದೇ ದೂರು ದಾಖಲಾಗಿಲ್ಲ.

Spread the love

ಕಲಬುರಗಿ: ಪರೀಕ್ಷೆಯಲ್ಲಿ ನಕಲು ಮಾಡ್ತಿರೋದನ್ನ ಪ್ರಶ್ನಿಸಿ ತಡೆದಿದಕ್ಕೆ ಶಿಕ್ಷಕರ ಮೇಲೆ ವಿದ್ಯಾರ್ಥಿ ಹಲ್ಲೆ ನಡೆಸಿರುವ ಘಟನೆ ಕಲಬುರಗಿಯ ಹೋಮಿಯೋಪಥಿ ಕಾಲೇಜೊಂದರಲ್ಲಿ ನಡೆದಿದೆ.

ಶಹಬಾಜ್ ಎಂಬ ವಿದ್ಯಾರ್ಥಿ ಬ್ಲಾಕ್‌ನ ಮೇಲ್ವಿಚಾರಣೆ ಮಾಡುತ್ತಿದ್ದ ಸಹಾಯಕ ಪ್ರಾಧ್ಯಾಪಕ ಶಿವರಾಜಕುಮಾರ್ ಮೇಲೆ ಹಲ್ಲೆ ನಡೆಸಿದ್ದಾನೆ.

ಕಾಲೇಜಿನಲ್ಲಿ ಹೋಮಿಯೋಪಥಿಕ್ ಮಟೇರಿಯಾ ಮೆಡಿಕಾ ವಿಷಯದ ಇಂಟರ್ನಲ್ ಎಕ್ಸಾಮ್ ನಡೆಯುತ್ತಿತ್ತು. ಈ ವೇಳೆ ಶಹಬಾಜ್ ಮೊಬೈಲ್ ಬಳಸಿ ನಕಲು ಮಾಡಲು ಮುಂದಾಗಿದ್ದ. ಇದನ್ನು ನೋಡಿದ ಪ್ರಾಧ್ಯಾಪಕರು ಶಹಬಾಜ್‌ಗೆ ಪ್ರಶ್ನಿಸಿ ಉತ್ತರ ಪತ್ರಿಕೆ ಪಡೆದಿದ್ದರು. ಬಳಿಕ ಕ್ಲಾಸ್ ರೂಮ್‌ನಿಂದ ಆಚೆ ಹೋಗುವಂತೆ ಹೇಳಿದ್ದರು. ಇದಕ್ಕೆ ಕೆರಳಿ ಕೆಂಡವಾದ ಶಹಬಾಜ್ ಪ್ರಾಧ್ಯಾಪಕರ ಮೇಲೆ ಹಲ್ಲೆ ಮಾಡಿದ್ದ.

ವಿದ್ಯಾರ್ಥಿಯ ನಡುವಳಿಕೆ ಬಗ್ಗೆ ಕಾಲೇಜಿನ ಆಡಳಿತ ಮಂಡಳಿ ಪಾಲಕರ ಗಮನಕ್ಕೆ ತಂದಿದೆ. ಜೊತೆಗೆ ಮುಂದಿನ ಪರೀಕ್ಷೆಗಳಿಗೆ ಅವಕಾಶ ನೀಡದಿರಲು ನಿರ್ಧಾರ ತೆಗೆದುಕೊಂಡಿದೆ. ಕಾಲೇಜ್ ಆಡಳಿತ ಮಂಡಳಿಯಿಂದಾದಲಿ ಅಥವಾ ಹಲ್ಲೆಗೆ ಒಳಗಾದ ಸಹಾಯಕ ಪ್ರಾಧ್ಯಾಪಕ ಶಿವರಾಜ್ ಕುಮಾರ್‌ನಿಂದ ಈವರೆಗೂ ಯಾವುದೇ ದೂರು ದಾಖಲಾಗಿಲ್ಲ.


Spread the love

About Laxminews 24x7

Check Also

ಕಬ್ಬು ನಾಟಿ ಮಾಡುತ್ತಿದ್ದಾಗ ಸಿಡಿಲು ಬಡಿದು ಯುವಕ ಸಾವು

Spread the loveಕಲಬುರಗಿ: ಕಬ್ಬು ನಾಟಿ ಮಾಡುತ್ತಿದ್ದಾಗ ಸಿಡಿಲು ಬಡಿದು ಯುವ ರೈತ ಸಾವನ್ನಪ್ಪಿರುವ ಘಟನೆ ಕಲಬುರಗಿ ಜಿಲ್ಲೆ ಚಿಂಚೋಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ