Breaking News

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ಕಾರು ಕೊಚ್ಚಿ ಹೋಗಿ ಮಹಿಳೆ ಸಾವು

Spread the love

ಹೈದರಾಬಾದ್: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿದೆ. ಹೀಗಾಗಿ ಆಂಧ್ರಪ್ರದೇಶ, ತೆಲಂಗಾಣ, ವಿಜಯನಗರಂ, ನೆಲ್ಲೂರು, ಚಿತ್ತೂರು, ಅನಂತಪುರಂ,ಗುಂಟೂರು, ವಿಶಾಖಪಟ್ಟಣಂ ಸೇರಿ ಹಲವೆಡೆ ಭಾರಿ ಮಳೆ ಸಂಭವಿಸುತ್ತಿದೆ. ಈ ಪರಿಣಾಮ ಭಾರಿ ನೀರಿನಲ್ಲಿ ಕಾರು ಕೊಚ್ಚಿ ಹೋದ ಘಟನೆ ಆಂಧ್ರದ ನರ್ಶಿಪಟ್ನಂ-ತೂನಿ ಹೆದ್ದಾರಿಯಲ್ಲಿ ನಡೆದಿದೆ.

 

ಸದ್ಯ ಅಗ್ನಿ ಶ್ಯಾಮಕದಳ ತಂಡ ಕಾರಿನಲ್ಲಿದ್ದ ಮೂವರ ರಕ್ಷಣೆ ಮಾಡಲಾಗಿದ್ದು, ಓರ್ವ ಮಹಿಳೆ ಪ್ರವಾಹದಲ್ಲಿ ಕೊಚ್ಚಿ ಕೊಂಡು ಹೋಗಿ ಮೃತಪಟ್ಟಿದ್ದಾರೆ.

ಅಲ್ಲದೆ ಶ್ರೀಕಾಕುಳಂ ಜಿಲ್ಲೆಯಲ್ಲಿ ರಾತ್ರಿಯಿಂದ ಸುರಿದ ಮಳೆಗೆ ಜನ ಜೀವನ ತತ್ತರಿಸಿದೆ. ಭಾರಿ ಅನಾಹುತಗಳು ಸಂಭವಿಸಿವೆ. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಅನೇಕ ಮನೆಗಳು,ಜಲಾವೃತಗೊಂಡಿವೆ. ಇನ್ನು 4ಗಂಟೆಗಳ ಕಾಲ ಇದೇ ಸ್ಥಿತಿ ಮುಂದುವರೆಯುವುದಾಗಿ ಹವಾಮಾನ ಇಲಾಖೆ ತಿಳಿಸಿದೆ. ಜೊತೆಗೆ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಲು ಹಾಗೂ ಜಾಗೃತರಾಗಿರಲು ಅಧಿಕಾರಿಗಳಿಗೆ ಎಚ್ಚರಿಸಲಾಗಿದೆ.


Spread the love

About Laxminews 24x7

Check Also

ನೀತಿ ಆಯೋಗದಿಂದ ಕಾಳಗಿಗೆ 2ನೇ ಸ್ಥಾನ, ₹1 ಕೋಟಿ ವಿಶೇಷ ಅನುದಾನ ಘೋಷಣೆ: ಸಚಿವ ಪ್ರಿಯಾಂಕ್ ಖರ್ಗೆ ಹರ್ಷ

Spread the loveನೀತಿ ಆಯೋಗದಿಂದ ಕಾಳಗಿಗೆ 2ನೇ ಸ್ಥಾನ, ₹1 ಕೋಟಿ ವಿಶೇಷ ಅನುದಾನ ಘೋಷಣೆ: ಸಚಿವ ಪ್ರಿಯಾಂಕ್ ಖರ್ಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ