ಹಾವೇರಿ: ಜಿಲ್ಲೆಯ ಹಾನಗಲ್ ತಾಲೂಕಿನ ವರ್ದಿ ಗ್ರಾಮದ ಕೋಡಿಬಸವೇಶ್ವರ ದೇಗುಲದಲ್ಲಿ ಕಳ್ಳತನ ನಡೆದಿದೆ. ತಡ ರಾತ್ರಿ ಖದೀಮರು ದೇವಸ್ಥಾನದ ಬೀಗ ಒಡೆದು ಕೃತ್ಯ ಎಸಗಿದ್ದಾರೆ.
ದೇವಸ್ಥಾನ ಹುಂಡಿಯಲ್ಲಿದ್ದ ಕಾಣಿಕೆ, ಬೆಳ್ಳಿ ಅಭರಣಗಳು ಮತ್ತು ಮೈಕನ್ನು ಎಗರಿಸಿ ಹಣವನ್ನು ತೆಗೆದುಕೊಂಡು ಹುಂಡಿಯನ್ನು ಕೆರೆಯಲ್ಲಿ ಎಸೆದು ಪರಾರಿಯಾಗಿದ್ದಾರೆ. ಹುಂಡಿಯಲ್ಲಿ ಸುಮಾರು ಐದು ಸಾವಿರಕ್ಕೂ ಅಧಿಕ ಹಣ ಇತ್ತು ಎಂದು ಅಂದಾಜಿಸಲಾಗಿದೆ. ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Laxmi News 24×7