Breaking News

ಚಂದ್ರಶೇಖರ್ ಗುರೂಜಿ ಹತ್ಯೆ ಕೇಸ್;ಮರಣೋತ್ತರ ಪರೀಕ್ಷಾ ವರದಿ ಬಹಿರಂಗ

Spread the love

ಹುಬ್ಬಳ್ಳಿ: ಸರಳವಾಸ್ತು ಖ್ಯಾತಿಯ, ವಾಸ್ತು ತಜ್ಞ ಡಾ.ಚಂದ್ರಶೇಖರ್ ಗುರೂಜಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ದೇಹದ ಮರಣೋತ್ತರ ಪರೀಕ್ಷೆ ಮುಕ್ತಾಯಗೊಂಡಿದ್ದು, ವರದಿ ಬಹಿರಂಗವಾಗಿದೆ.

ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ವಿಧಿವಿಜ್ಞಾನ ವಿಭಾಗದ ಡಾ.ಸುನೀಲ್ ಬಿರಾದಾರ್ ನೇತೃತ್ವದಲ್ಲಿ ಚಂದ್ರಶೇಖರ್ ಗುರೂಜಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ವರದಿಯಲ್ಲಿ ಗುರೂಜಿಯವರಿಗೆ ಬರೋಬ್ಬರಿ 42 ಬಾರಿ ಚಾಕುವಿನಿಂದ ಇರಿದ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಚಂದ್ರಶೇಖರ್ ಗುರೂಜಿ ಕುತ್ತಿಗೆಯ ಭಾಗದಲ್ಲಿ ಎರಡು ಕಡೆ ಇರಿದ ಗುರುತು ಪತ್ತೆಯಾಗಿದ್ದು, 2-3 ಇಂಚಿನಷ್ಟು ಆಳವಾಗಿ ಇರಿದ ಗಾಯವಾಗಿದೆ. ಕುತ್ತಿಗೆ ಭಾಗದಲ್ಲಿ ಇರಿದ ಪರಿಣಾಮ ಹೆಚ್ಚು ರಕ್ತಸ್ರಾವವಾಗಿದೆ. ದೇಹದ ಒಟ್ಟು 42 ಕಡೆ ಚಾಕುವಿನಿಂದ ಇರಿದ ಗುರುತು ಪತ್ತೆಯಾಗಿದೆ ಎಂದು ಪೋಸ್ಟ್ ಮಾರ್ಟಮ್ ರಿಪೋರ್ಟ್ ನಲ್ಲಿ ತಿಳಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

ಇನ್ನು ಕಿಮ್ಸ್ ಆಸ್ಪತ್ರೆಯಿಂದ ಚಂದ್ರಶೇಖರ್ ಗುರೂಜಿ ಪಾರ್ಥಿವ ಶರೀರವನ್ನು ಹುಬ್ಬಳ್ಳಿಯ ಕೇಶ್ವಾಪುರ ಬಳಿಯ ಸುಳ್ಳ ಗ್ರಾಮಕ್ಕೆ ಕೊಂಡಯ್ಯಲಾಗುತ್ತಿದ್ದು, ಸಂಜೆ ಸುಳ್ಳ ಗ್ರಾಮದಲ್ಲಿನ ಗುರೂಜಿ ಜಮೀನಿನಲ್ಲಿ ವೀರಶೈವ-ಲಿಂಗಾಯಿತ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಲಿದೆ.


Spread the love

About Laxminews 24x7

Check Also

ಬಿಪಿಎಲ್ ಇದ್ದಿದ್ದನ್ನು ಎಪಿಎಲ್​ಗೆ ಸೇರಿಸಿದ್ದಕ್ಕೆ ಜನರು ಸರ್ಕಾರದ ವಿರುದ್ಧ ಆಕ್ರೋಶ

Spread the loveಸದ್ಯ ಕರ್ನಾಟಕದಲ್ಲಿ ಪಡಿತರ ಚೀಟಿ ಪರಿಷ್ಕರಣೆ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ತಮ್ಮ ಬಿಪಿಎಲ್​ ಕಾರ್ಡ್​ ರದ್ದಾಗಿದ್ದಕ್ಕೆ ಮತ್ತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ