Breaking News
???????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಗೋಕಾಕ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಹಶೀಲದಾರ ಕಾರ್ಯಾಲಯದಲ್ಲಿ ರೈತ ಮುಖಂಡರು ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ ಘೇರಾವು ಹಾಕಿ ನಂತರ ಸಭೆ ನಡೆಸುತ್ತಿರುವುದು.

Spread the love

ಗೋಕಾಕ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಹಶೀಲದಾರ ಕಾರ್ಯಾಲಯದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯದರ್ಶಿ ಭೀಮಶಿ ಗದಾಡಿ ಅವರ ನೇತ್ರತ್ವದಲ್ಲಿ ರೈತ ಮುಖಂಡರು ತಹಶೀಲದಾರ ಪ್ರಕಾಶ ಹೊಳೆಪ್ಪಗೋಳ ಘೇರಾವು ಹಾಕಿ ನಂತರ ಸಭೆ ನಡೆಸಿದರು.
ಕಳೆದ 2019ನೇ ಸಾಲಿನಲ್ಲಿ ಪ್ರವಾಹ ಹಾಗೂ ಮಳೆಯಿಂದ ಹಾನಿಯಾದ ಮನೆಗಳಿಗೆ ಇನ್ನೂವರೆಗೂ ಪರಿಹಾರ ದೊರಕಿಲ್ಲವಲ್ಲದೇ ಸರ್ವೆ ಮಾಡುವಲ್ಲಿ ಅಧಿಕಾರಿಗಳು ತಾರ್ಯತ್ಯಮ ಮಾಡಿದ್ದಾರೆಂದು ಆರೋಪಿಸಿದರು. ಕಲಾರಕೊಪ್ಪ, ಮೆಳವಂಕಿ ಗ್ರಾಮದಲ್ಲಿ ಮೂರು ಸಲ ಸರ್ವೆ ಕಾರ್ಯವನ್ನು ಮಾಡಲಾಗಿದೆ. ಎಲ್ಲರಿಗೂ ನ್ಯಾಯ ಒದಗಿಸುವ ಕಾರ್ಯವನ್ನು ಮಾಡಲಾಗಿದ್ದು ಆದರೂ ಕೂಡಾ ನಜರಚೂಕಿಯಿಂದ ಕೆಲವೊಂದು ಉಳಿದಿರಬಹುದು ಅಂತಹ ಪ್ರಕರಣಗಳನ್ನು ಗುರುತಿಸಿ ಕೂಡಲೇ ಕ್ರಮವಹಿಸಲಾಗುವುದೆಂದು ತಹಶೀಲದಾರ ತಿಳಿಸಿದರು.
ಆಧಾರ ಕಾರ್ಡ ತಿದ್ದುಪಡಿಗಾಗಿ ಎಂಟು ತಿಂಗಳಿನಿಂದ ನಿಮ್ಮ ಕಾರ್ಯಲಯಕ್ಕೆ ಅಲೆದಾಡುತ್ತಿದ್ದು, ಆಧಾರ ಕೇಂದ್ರ ಬಂದಾಗಿದೆ ನಾವೆಲ್ಲಿ ಹೋಗಬೇಕೆಂದು ತಹಶೀಲದಾರ ಅವರನ್ನು ಆಧಾರ ಕಾರ್ಡ ತಿದ್ದುಪಡಿಗಾಗಿ ಬಂದ ರೈತ ಮಹಿಳೆಯೊರ್ವಳು ಪ್ರಶ್ನಿಸಿದರು. ತಾಂತ್ರಿಕ ತೊಂದರೆಯಿಂದ ಕಳೆದು ಪ್ರೆಬುವರಿ ತಿಂಗಳಿನಿಂದ ಆಧಾರ ಕೇಂದ್ರ ಬಂದಾಗಿದ್ದು ಇನ್ನೂ ಮೂರು ದಿನದಲ್ಲಿ ಪ್ರಾರಂಭಿಸಲಾಗುವುದೆಂದು ತಹಶೀಲದಾರ ತಿಳಿಸಿದರು.
ಪಹಣಿ ಪತ್ರಿಕೆ ವಿತರಣಾ ಕೇಂದ್ರದಲ್ಲಿರುವ ಮಹಿಳಾ ನೌಕರಳು ರೈತರೊಂದಿಗೆ ಸೌಜ್ಯನಯುತವಾಗಿ ವರ್ತಿಸುತ್ತಿಲ್ಲ, ಪಹಣಿ ವಿತರಣೆಯಲ್ಲಿ ವಿಳಂಬವಾಗುತ್ತಿದೆ. ನಾಡ ಕಚೇರಿಗಳಲ್ಲಿ ಹಾಗೂ ಕಂದಾಯ ಇಲಾಖೆಯ ಪಡಸಾಲೆಯಲ್ಲಿ ಪಹಣಿ ಪತ್ರಿಕೆಗಳನ್ನು ವಿತರಿಸುವ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ. ಇದಕ್ಕೆ ಕಾರಣವೇನೆಂದು ರೈತ ಮುಖಂಡರು ತಹಶೀಲದಾರರನ್ನು ಪ್ರಶ್ನಿಸಿದರು. ಈ ಸಮಸ್ಯೆಯನ್ನು ಶೀಘ್ರದಲ್ಲಿ ಬಗೆ ಹರಿಸಲಾಗುವುದೆಂದು ತಹಶೀಲದಾರರು ತಿಳಿಸಿದರು.
ಇತ್ತಿಚೆಗೆ ಸುರಿದ ಮಳೆ ಹಾಗೂ ಪ್ರವಾಹದಿಂದ ಬೆಳೆ ಹಾನಿಯಾದ ಪ್ರದೇಶಗಳ ಸರ್ವೆ ಕಾರ್ಯವನ್ನು ಯಾವಾಗ ಆರಂಭಿಸುತ್ತಿರಿ. ನೀವು ಬರುವ ದಾರಿಯನ್ನು ರೈತರು ಕಾಯಬೇಕಾ.. ನಾವು ಇನ್ನೊಂದು ಬೆಳೆ ಬೆಳೆಯಲು ಬಿತ್ತನೆ ಮಾಡಬೇಕಾ ಅಥವಾ ಬೇಡವಾ ಎಂದು ಖಾರವಾಗಿ ರೈತ ಮುಖಂಡರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತಹಶೀಲದಾರರು ಕೃಷಿ ಇಲಾಖೆಯೊಂದಿಗೆ ಜಂಟಿ ಸಮೀಕ್ಷಾ ಕಾರ್ಯವನ್ನು ಇನ್ನೆರಡು ದಿನದಲ್ಲಿ ಮಾಡಲಾಗುವುದೆಂದು ರೈತರಿಗೆ ತಿಳಿಸಿದರು. ಇನ್ನೂ ಹಲವಾರು ಸಮಸ್ಯೆಗಳ ಬಗ್ಗೆ ರೈತರು ತಹಶೀಲದಾರ ಗಮನಕ್ಕೆ ತಂದರು. ಸಮಸ್ಯೆಗಳು ಶೀಘ್ರದಲ್ಲಿ ಪರಿಹಾರಗೊಳ್ಳದಿದ್ದಲ್ಲಿ ಪ್ರತಿಭಟನೆಯನ್ನು ನಡೆಸಲಾಗುವುದೆಂದು ರೈತ ಮುಖಂಡರು ತಿಳಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ತಾಲೂಕಾಧ್ಯಕ್ಷ ಮುತ್ತೇಪ್ಪ ಬಾಗನ್ನವರ, ಮುಖಂಡರಾದ ಶಂಕರ ಮದಿಹಳ್ಳಿ, ರಾಯಪ್ಪ ಗೌಡಪ್ಪನವರ, ಕುಮಾರ ತಿಗಡಿ, ಶಿವಪ್ಪ ಹೊಸಮನಿ, ಲಕ್ಷ್ಮಣ ಹಳ್ಳೂರ, ಮುದಕಪ್ಪ ಬನಾಜ, ಶಂಕರ ಕಣವಿ, ಪ್ರವೀಣ ಚಂಡುಗೋಳ, ಯಮನಪ್ಪ ಉಪ್ಪಾರ ಸೇರಿದಂತೆ ಅನೇಕರು ಇದ್ದರು.


Spread the love

About Laxminews 24x7

Check Also

ಜಲಜೀವನ್​​​ ಮಿಷನ್​​​ ಯೋಜನೆ ಅನುಷ್ಠಾನದಲ್ಲಿನ ತಪ್ಪುಗಳ ಬಗ್ಗೆ ತನಿಖೆ ?

Spread the loveಬೆಂಗಳೂರು: ತುಮಕೂರು ಜಿಲ್ಲೆಯ ಜಲಜೀವನ್​​ ಮಿಷನ್​​ ಯೋಜನೆ ಅನುಷ್ಠಾನದಲ್ಲಿ ನಾನಾ ತಪ್ಪುಗಳಾಗಿದ್ದು, ಸರ್ಕಾರ ತನಿಖೆ ನಡೆಸಿ ವರದಿ ನೀಡಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ