ಬೆಳಗಾವಿ :ಗೋಕಾಕ ಸಿಪಿಐ ಗೋಪಾಲ್ ರಾಥೋಡ್ ಮತ್ತು ಪಿಎಸ್ ಐ ಪೊಲೀಸ್ ಅಧಿಕಾರಿಗಳಿಂದ ಆಗಿರುವ ಅನ್ಯಾಯಕ್ಕೆ ನಮಗೆ ನ್ಯಾಯ ದೊರಕಿಸಿಕೊಡುವಂತೆ ಬಬಲಿ ಕುಟುಂಬಸ್ಥರು ಶನಿವಾರ ಜಿಲ್ಲಾಧಿಕಾರಿ ಆವರಣದಲ್ಲಿ ಮಾಧ್ಯಮದವರ ಮುಂದೆ ಅಳಲು ತೋಡಿಕೊಂಡರು.
ಕಳೆದ ಜೂನ್ 2021 ರಂದು ಗೋಕಾಕ ತಾಲೂಕಿನ ಮಹಾಂತೇಶ ನಗರ ಬಡಾವಣೆಯ ಮಾಲದಿನ್ನಿ ಕ್ರಾಸ್ ಬಳಿ ಸಂಜೆ 7ಕ್ಕೆ ಮಂಜು ಶಂಕರ ಮುರುಕಿಬಾವಿ ಎಂಬ ವ್ಯಕ್ತಿಯ ಅನುಮಾನಸ್ಪಾದವಾಗಿ ಕೊಲೆಯಾಗಿದ್ದಾನೆ. ಈತನಿಗೂ ನಮ್ಮ ಮಕ್ಕಳಿಗೆ ಯಾವುದೇ ಸಂಬಂಧ ಇಲ್ಲ.ಬಸಪ್ಪ ರಂಗೇನಕೊಪ್ಪ ಈತನ ಹೇಳಿಕೆಯ ಅಧಾರದ ಮೇಲೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ನನ್ನ ಮಕ್ಕಳಿಗೆ ಮನಸೋ ಇಚ್ಚೆ ಥಳಿಸಿದ್ದಾರೆ. ನನ್ನ ಪತಿ ಸಿದ್ಧಪ್ಪ ಪೊಲೀಸ್ ಠಾಣೆಗೆ ವಿಚಾರಿಸಲು ತೆರಳಿದಾಗ ಲಾಕಪ್‌ನಲ್ಲಿ ಹಾಕಿ ಅವರಿಗೂ ಥಳಿಸಿದ್ದಾರೆ ಎಂದು ದೂರಿದ್ದಾರೆ.
ಕೊಲೆಯಾಗಿರುವ ಮಂಜು ಹಾಗೂ ನನ್ನ ಮಗಳಿಗೆ ಯಾವುದೇ ಸಂಬಂಧ ಇಲ್ಲ. ನನ್ನ ಮಗಳಿಗೆ ಮದುವೆಯಾಗಿ ಒಂದು ಮಗು ಇದೆ. ನನ್ನ ಮಗಳಿಗೂ ಹಾಗೂ ಕೊಲೆಯಾದ ವ್ಯಕ್ತಿಗೂ ಸಂಬಂಧ ಇದೆ ಎಂದು ಊಹಿಸಿಕೊಂಡು ವಿಠ್ಠಲ ನಮ್ಮ ಮೇಲೆ ಪ್ರಕರಣ ದಾಖಲಿಸಿದ್ದಾನೆ. ಇದಕ್ಕೂ ನಮಗೂ ಸಂಬಂದ ಇಲ್ಲ ಎಂದು ಪೊಲೀಸ್ ಠಾಣೆಗೆ ನ್ಯಾಯ ಕೇಳಲು ಹೋದರೆ ಠಾಣೆಯಿಂದ ನಿಮ್ಮ ಮಕ್ಕಳನು ಆಚೆಗೆ ತರಲು ಹಣ ಖರ್ಚಾಗುತ್ತದೆ. ಹಣದ ವ್ಯವಸ್ಥೆ ಮಾಡಿದರೆ ನಿಮ್ಮ ಮಕ್ಕಳನ್ನು ಬಿಡುವುದಾಗಿ ಗೋಕಾಕ ಸಿಪಿಐ ಮತ್ತು ಪಿಎಸ್ ಹೇಳಿದರು. ಅಲ್ಲದೆ, ಈ ಪ್ರಕರಣದಲ್ಲಿ ನಮ್ಮ ಸಂಬಂಧಿಕರಾರ ಸುಷ್ಮಾ, ಲಕ್ಷ್ಮಣ, ಮಾನಿಂಗ, ರೇಣುಕಾ, ರಾಯವ್ವ ಐದು ಜನರ ಮೇಲೆ ಎಫ್ ಐಆರ್ ಆಗಿರುತ್ತದೆ. ಅದನ್ನು ಆಗದಂತೆ ನೋಡಿಕೊಳ್ಳಲು 15 ಲಕ್ಷ ರೂ. ಕೊಡಬೇಕೆಂದು ಹೇಳಿದಾಗ ಭಯದಿಂದ ಒಪ್ಪಿಕೊಂಡಿದ್ದೇವೆ ಎಂದು ಮಾಧ್ಯಮದವರ ಮುಂದೆ ತಮ್ಮ ಅಳಲು ತೋಡಿಕೊಂಡರು.
21 ಜುಲೈ 2021ರಂದು ರಾತ್ರಿ 9ಕ್ಕೆ ಪೊಲೀಸ್ ಕಾನ್ ಸ್ಟೇಬಲ್ ಗೋಕಾಕದ ಬ್ಯಾಳಿ ಕಾಟದ ಬಳಿ ಬಂದು 4 ಲಕ್ಷ 50 ಸಾವಿರ ರೂ.ಬಳಿಕ ನಾಲ್ಕೈದು ದಿನಗಳ ನಂತರ ಬಿ.ಎಸ್. ಆಫೀಸ್ ಹೋಟೆಲ್ ಬಳಿ 3 ಲಕ್ಷ, ಮತ್ತೆ 5 ಲಕ್ಷ 50 ಸಾವಿರ ಹಣವನ್ನು ಸಿದ್ದಪ್ಪ ಬಬಲಿ ಅವರು ಅಡಿಯಪ್ಪ, ಸಣ್ಣ ಸಲಗನ್ನವರ, ಸಿದ್ರಾಮ ಹಳ್ಳೂರೆ ಸೇರಿಕೊಂಡು ಕಾನ್ ಸ್ಟೇಬಲ್ ಪಾಟೀಲರ ಕೈಯಲ್ಲಿ ಹಣ ತಲುಪಿಸಿದ್ದೇವೆ. ಅಲ್ಲದೆ, ಕೋಕಾಕ ಕೋಟ್೯ ಸರ್ಕಲ್ ಬಳಿ 2 ಲಕ್ಷ ಸೇರಿದಂತೆ ಒಟ್ಟು 15 ಲಕ್ಷ ರು. ಹಣ ನೀಡಿದ್ದೇವೆ ಎಂದು ಗೋಕಾಕ ಸಿಪಿಐ ಹಾಗೂ ಪಿಎಸ್ ಐ ಮೇಲೆ ಆರೋಪಿಸಿದರು.
ಈ ಪ್ರಕರಣವನ್ನು ಮತ್ತೆ ಪರಿಶೀಲನೆ ಮಾಡಿ ಹಣದ ಆಸೆಗಾಗಿ ಗೋಕಾಕ ಸಿಪಿಐ ಹಾಗೂ ಪಿಎಸ್ ಐ ಮಾನಸಿಕವಾಗಿ ತೊಂದರೆ ಕೊಡುತ್ತಿದ್ದಾರೆ. ಅನುಮಾನಾಸ್ಪದವಾಗಿ ಕೊಲೆಯಾಗಿರುವುದನ್ನು ಸರಿಯಾಗಿ ತನಿಖೆ ಮಾಡದೆ ಅಮಾಯಕರಾದ ನಮ್ಮ ಮೇಲೆ ಹಣ ಪೀಕಿಕೊಂಡು ನಮಗೆ ತೊಂದರೆ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗೋಕಾಕ ಸಿಪಿಐ ಹಾಗೂ ಪಿಎಸ್ ಐ ಮಾಡುತ್ತಿರುವ ದಬ್ಬಾಳಿಕೆಯನ್ನು ತಡೆಯಬೇಕು. ಅಲ್ಲದೆ ಅವರಿಗೆ ನೀಡಿರುವ ಹಣವನ್ನು ಬೇರೆ ಯಾರಿಗಾದರೂ ಹೇಳಿದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬೇದರಿಕೆ ಹಾಕಿದ್ದಾರೆ. ನಮಗೆ ನ್ಯಾಯ ಕೊಡಿಸಿ ಇಲ್ಲದಿದ್ದರೇ ಆತ್ಮಹತ್ಯೆ ಮಾಡಿಕೊಳ್ಳುವುದೊಂದೆ ದಾರಿ ಎಂದು ಮಾಧ್ಯಮದವರ ಮುಂದೆ ಅಳಲು ತೋಡಿಕೊಂಡರು.