ಗೋಕಾಕ ತಾಲೂಕನಲ್ಲಿ ಅಕ್ರಮವಾಗಿ ಸಂಗ್ರಹಿಸಲ್ಪಟ್ಟಿದ್ದ 49 ಜಿಲಿಟಿನ್ ಸ್ಫೋಟಕ ಪದಾರ್ಥಗಳನ್ನು ಆಂತರಿಕ ಭದ್ರತಾ ವಿಭಾಗದ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.
ಗೋಕಾಕ ತಾಲೂಕಿನ ಮಣ್ಣಿಕೇರಿ ರಾಮೇಶ್ವರ ಕೆನಾಲ್ ಹತ್ತಿರ ಈ ಸ್ಫೋಟಕ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ. ರಾಯಬಾಗ ತಾಲೂಕಿನ ನಿಪನಾಳದ ವಿಠ್ಠಲ ಯಮನಪ್ಪ ಹಳಬರ ಟ್ರ್ಯಾಕ್ಟರ್ ನಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದ. 23 ಇಡಿ ಕೇಬಲ್ ಹಾಗೂ ಬ್ಲಾಸ್ಟಿಂಗ್ ಚಾರ್ಜರ್ ಬ್ಯಾಟರಿ ಕೂಡ ಆತನ ಬಳಿ ಇತ್ತು. ಇದರ ಮೌಲ್ಯ 2,03,500 ರೂ.
ಕುಲಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ಇನಸ್ಪೆಕ್ಟರ್ ಶಿವಾನಂದ ಅಂಬಿಗೇರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
ಪ್ರಶಾಂತ ಹಿರೇಮಠ, ಫಕ್ರುದ್ದೀನ್ ಖೋಂದು ನಾಯ್ಡು, ಲೋಹಿತ್ ಅರೆನ್ನವರ್ ದಾಳಿಯ ಕಾರ್ಯಾಚರಣೆಯಲ್ಲಿದ್ದರು.
ಆಂತರಿಕ ಭದ್ರತಾ ವಲಯದ ಉತ್ತರ ವಲಯ ಉಸ್ತುವಾರಿ, ಡಿವೈಎಸ್ಪಿ ಅನಿಲಕುಮಾರ ಭೂಮರಡ್ಡಿ ಈ ಮಾಹಿತಿ ನೀಡಿದ್ದಾರೆ.
 Laxmi News 24×7
Laxmi News 24×7
				 
		 
						
					 
						
					