Breaking News

ಗೋಕಾಕ: ಜ.6 ರಂದು ತೆರಿಗೆ ಸಂದಾಯ ಮಾಡದ 21 ವಾಹನಗಳ ಹರಾಜು!!

Spread the love

ಗೋಕಾಕ: ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆಯ ಪ್ರಕಾರ ತೆರಿಗೆ ಸಂದಾಯ ಮಾಡದಿರುವ ಕಾರಣ ಮುಟ್ಟುಗೋಲು ಹಾಕಿಕೊಂಡಿರುವ 21 ವಾಹನಗಳನ್ನು ಜ. 6 ರಂದು ಮುಂಜಾನೆ 10.30 ಘಂಟೆಗೆ ನಗರದ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಆವರಣದಲ್ಲಿ ಬಹಿರಂಗು ಹರಾಜು ಮಾಡಲಾಗುವುದು ಸಾರಿಗೆ ಅಧಿಕಾರಿ ಟಿ.ಜೆ.ಹೇಮಾವತಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು, ಬಾಕಿ ಇರುವ ತೆರಿಗೆ ಸಂದಾಯ ಮಾಡಿ ವಾಹನವನ್ನು ತಮ್ಮ ಸ್ವಾಧೀನಕ್ಕೆ ತೆಗೆದುಕೊಳ್ಳುಲು ಸಂಬಂಧಪಟ್ಟ ವಾಹನಗಳ ಮಾಲೀಕರು ಹಾಗೂ ಹಣಕಾಸು ಸಂಸ್ಥೆಯವರಿಗೆ ನೋಟೀಸು ಮುಖಾಂತರ ತಿಳಿಸಿಲಾಗಿದ್ದರು ತೆರಿಗೆ ಮತ್ತು ದಂಡ ಸಂದಾಯ ಮಾಡಿ ವಾಹನವನ್ನು ಮರಳಿ ಪಡೆಯಲು ಮುಂದೆ ಬಂದಿರುವದಿಲ್ಲ. ಹೀಗಾಗಿ ಕರ್ನಾಟಕ ಮೋಟಾರು ವಾಹನ ತೆರಿಗೆ ನಿಯಮ 27ಬಿ ಮತ್ತು 1957ರ ಮೋಟಾರು ವಾಹನ ತೆರಿಗೆ ಕಾಯ್ದೆ ಕಲಂ 11(ಎ)(2) ಅಡಿಯಲ್ಲಿ ವಾಹನಗಳನ್ನು ಸದ್ಯ ಇರುವ ಸ್ಥಿತಿಯಲ್ಲಿಯೇ ಬಹಿರಂಗ ಹರಾಜು ಹಾಕಿ ಸರ್ಕಾರಕ್ಕೆ ಬರಬೇಕಾದ ಬಾಕಿ ತೆರಿಗೆಯನ್ನು ಸಂಗ್ರಹಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.

ಹರಾಜಿನಲ್ಲಿ ಭಾಗವಹಿಸುವರು ಕಡ್ಡಾಯವಾಗಿ ಜಿ.ಎಸ್.ಟಿ ಸಂಖ್ಯೆ ಹೊಂದಿರಬೇಕು. ಬಹಿರಂಗ ಹರಾಜಿನಲ್ಲಿ ಐದು ಸಾವಿರ ರೂ. ಮುಂಗಡ ಹಣ ಸಂದಾಯ ಮಾಡಿ ರಶೀದಿ ಪಡೆಯಬೇಕು. ವಾಹನ ಖರೀದಿ ಮಾಡಿದವರು ಸ್ಥಳದಲ್ಲಿ ಶೇ. 50 ರಷ್ಟು ಹಣ ಸಂದಾಯ ಮಾಡಬೇಕು. ಹೆಚ್ಚಿನ ಮಾಹಿತಿಗಾಗಿ ಕಚೇರಿ ಅಧೀಕ್ಷಕ ಎಸ್.ಎಚ್.ಕರಿಗಾರ ಮೊ-9663692013 ಅಥವಾ ಎಫ್‍ಡಿಸಿ ಮಂಜುನಾಥ ಉಪ್ಪಾರ ಮೊ. 9743887769 ಅವರನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ.


Spread the love

About Laxminews 24x7

Check Also

ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ

Spread the loveಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ ಇಂದು ಬೆಳಗಾವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ