Breaking News

ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಸಿದ್ದೇಶ್ವರ ಜಾತ್ರೆಯನ್ನು ಶುಕ್ರವಾರ ದಿ. 13 ರಂದು ಸರಳವಾಗಿ ನೇರವೆರಿಸಲಾಗುವುದು

Spread the love

ಗೋಕಾಕ : ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಸಿದ್ದೇಶ್ವರ ಜಾತ್ರೆಯನ್ನು ಶುಕ್ರವಾರ ದಿ. 13 ರಂದು ಸರಳವಾಗಿ ನೇರವೆರಿಸಲಾಗುವುದು ಎಂದು ಶ್ರೀ ಸಿದ್ದೇಶ್ವರ ದೇವಸ್ಥಾನ (ಟ್ರಸ್ಟ್) ಜಾತ್ರಾ ಕಮಿಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

 

ಕೊರೋನಾ ಮಹಾಮಾರಿ ತಡೆಗಟ್ಟಲು ಸರಕಾರದ ನಿಯಮಗಳನ್ನು ಪಾಲಿಸುವ ಸಲುವಾಗಿ ಈ ಸಲ ರಥೋತ್ಸವವನ್ನು ರದ್ದು ಗೋಳಿಸಲಾಗಿದ್ದು, ರಥೋತ್ಸವ ದಿನದಂದು ರಥದ ಸ್ಥಳದಲ್ಲೇ ಸಾಯಂಕಾಲ 4 ಘಂಟೆಗೆ ಪೂಜೆ ಮಾಡಲಾಗುವುದು. ದೇವರ ದರ್ಶನಕ್ಕೆ ಬರುವ ಭಕ್ತಾದಿಗಳು ಕಡ್ಡಾಯವಾಗಿ ಮಾಸ್ಕ ಧರಿಸಿಕೊಂಡು ಸಮಾಜಿಕ ಅಂತರವನ್ನು ಕಾಪಾಡಿಕೊಂಡು ಬರಬೇಕು‌. 10 ವರ್ಷದ ಒಳಗಿನ ಮಕ್ಕಳಿಗೆ ದೇವಸ್ಥಾನದ ಒಳಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಬಹುಮುಖ್ಯವಾಗಿ ಈ ಬಾರಿ ಜಾತ್ರೆಗೆ ದೇವಸ್ಥಾನದ ಅಕ್ಕ ಪಕ್ಕ ಆಟಿಗೆ ಸಾಮಾನು, ತಿಂಡಿ ತಿನಿಸುಗಳ ಅಂಗಡಿಗಳನ್ನು ಹಚ್ಚಲು ಅನುಮತಿ ಇರುವುದಿಲ್ಲ.

 

ಈ ಬಾರಿಯ ಸಿದ್ದೇಶ್ವರ ದೇವಸ್ಥಾನದ ಗರ್ಭ ಗುಡಿಗೆ ಯಾರಿಗೂ ಪ್ರವೇಶ ಇರುವುದಿಲ್ಲ ಮತ್ತು ಸಂಜೆ 6 ಘಂಟೆಗೆ ಮಂಗಳಾರತಿ ಮಾಡಿ ಜಾತ್ರೆಯನ್ನು ಮುಕ್ತಾಯ ಗೊಳಿಸಲಾಗುವುದು. ದೇವರ ದರ್ಶನ ಪಡೆಯುವ ವೇಳೆ ಜನದಟ್ಟನೆ ಆಗಬಾರದು ಎಂದು ಉದ್ದೇಶಿಸಿ ದೇವರ ದರ್ಶನವನ್ನು ಮುಂಜಾನೆ 8:30 ರಿಂದ ಪ್ರಾರಂಭಿಸಿ ಸಾಯಂಕಾಲ 5:00 ಘಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಸಿದ್ದೇಶ್ವರ ಜಾತ್ರಾ ಕಮಿಟಿಯವರು ತಿಳಿಸಿದ್ದಾರೆ.

 

 

 


Spread the love

About Laxminews 24x7

Check Also

ಪ್ರಸಕ್ತ ಸಾಲಿನ ಪದವಿ ಪೂರ್ವ ಕಾಲೇಜುಗಳ ಬಾಲಕ, ಬಾಲಕಿಯರ ರಾಜ್ಯಮಟ್ಟದ ಸ್ಕೇಟಿಂಗ್ ಸ್ಪರ್ಧೆಯನ್ನು ನ.26 ರಿಂದ ಮಾಲಿನಿ ಸಿಟಿ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಎಸ್.ಎನ್.ದೇಸಾಯಿ ಹೇಳಿದರು.

Spread the loveಬೆಳಗಾವಿ :ಪ್ರಸಕ್ತ ಸಾಲಿನ ಪದವಿ ಪೂರ್ವ ಕಾಲೇಜುಗಳ ಬಾಲಕ, ಬಾಲಕಿಯರ ರಾಜ್ಯಮಟ್ಟದ ಸ್ಕೇಟಿಂಗ್ ಸ್ಪರ್ಧೆಯನ್ನು ನ.26 ರಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ