ಗೋಕಾಕ್: ಲೋಕವಾರ್ತೆ ದಿನಪತ್ರಿಕೆ ಸಂಪಾದಕ ಹೀರೋಜಿ ಮಾವರಕರ ಅವರ ಮೇಲೆ 3 ದಿನಗಳ ಹಿಂದೆ ಗೋಕಾಕದಲ್ಲಿ ಹಲ್ಲೆ ನಡೆದಿದೆ ಎಂದು ಅವರ ಸಹೋದರ ಲೋಕ ಕ್ರಾಂತಿ ದಿನಪತ್ರಿಕೆ ಸಂಪಾದಕ ಶ್ರೀನಿವಾಸ ಮಾವರ್ಕರ್ ತಿಳಿದ್ದು; ಈ ಸಂಬಂಧ ಆ ಕುಟುಂಬಕ್ಕೆ ಸೂಕ್ತ ರಕ್ಷಣೆ ಕೊಡಬೇಕೆಂದು ಸಂಪಾದಕರ ಸಂಘದ ಅಧ್ಯಕ್ಷ ಮುರಗೇಶ ಶಿವಪೂಜಿ ಒತ್ತಾಯಿಸಿದ್ದಾರೆ. ಬೆಳಗಾವಿಯ ಎಲ್ಲ ಪತ್ರಿಕಾ ಸಂಪಾದಕರು, ಪತ್ರಕರ್ತರು ಈ ಘಟನೆಯನ್ನು ಖಂಡಿಸಿದ್ದಾರೆ.
ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿರುವ ಹಲ್ಲೆ ಸಂದರ್ಭದ ವಿಡಿಯೋ ಫೂಟೇಜನ್ನು ಕಳಿಸಿದ್ದು; ಗೋಕಾಕದ ಅವರ ಮನೆಯ ಪಕ್ಕದ ನಿವೇಶನದ ಸಂಬಂಧಿ ಈ ಹಲ್ಲೆ ನಡೆದಿದೆ ಎಂದು ಶ್ರೀನಿವಾಸ್ ಹೇಳಿದ್ದಾರೆ.
ಗಂಭೀರವಾಗಿ ಗಾಯಗೊಂಡಿರುವ ಸಂಪಾದಕ ಹೀರೋಜಿ ಅವರನ್ನು ರಾತ್ರಿ ಬೀಟ್ ನಲ್ಲಿದ್ದ ಪೋಲಿಸರು ಗೋಕಾಕದ ಉಮ್ರಾಣಿ ಆಸ್ಪತ್ರೆಗೆ ಸೇರಿಸಿ ಪ್ರಾಣ ಉಳಿಸಿದ್ದಾರೆ.
ಹಲ್ಲೆಗೊಳಗಾದವರಿಗೆ ಸೂಕ್ತ ರಕ್ಷಣೆಯನ್ನೂ ನೀಡಬೇಕು. ಸಂಪಾದಕರ ಕುಟುಂಬದವರಿಗೆ ರಕ್ಷಣೆ ನೀಡಿದರೆ ಮುಂದೆ ಹೆಚ್ಚಿನ ಅನಾಹುತ ಆಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದಿನಪತ್ರಿಕೆಗಳ ಸಂಪಾದಕರ ಸಂಘ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ವಿನಂತಿಸಿದೆ.ಗೋಕಾಕ್ ಪೊಲೀಸರು ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸಿದ್ದಾರೆ.
Laxmi News 24×7