ಗೋಕಾಕ: ಇಲ್ಲಿನ ಬಸವ ನಗರದಲ್ಲಿ ಗೀಜರ್ ಬ್ಲಾಸ್ಟ್ ಆಗಿ ಮನೆ ಹೊತ್ತಿ ಉರಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ, ಬೆಂಕಿ ಆರಿಸಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ. ಯಾವುದೇ ಪ್ರಾಣ ಹಾನಿಯಾಗಿಲ್ಲ.
ಗುರುವಾರ ಬೆಳಗಿನ ಜಾವ ರಾಠೋಡ ಎಂಬುವರಿಗೆ ಸೇರಿದ ಮನೆಯ ಎರಡನೇ ಮಹಡಿಯಲ್ಲಿ ಏಕಾಏಕಿ ಗೀಜರ್ ಬ್ಲಾಸ್ಟ್ ಆಗಿ ಮನೆಯಲ್ಲಿ ಬೆಂಕಿ ಹೊತ್ತಿಕೊಂಡಿದೆ. ಕ್ಷಣಮಾತ್ರದಲ್ಲೇ ಬೆಂಕಿಯ ಕೆನ್ನಾಲಿಗೆ ಮನೆಯಲ್ಲೆಲ್ಲ ವ್ಯಾಪಿಸಿದೆ. ಹೊತ್ತಿ ಉರಿದ ಬೆಂಕಿಯಿಂದ ಮನೆಯ ಕಿಟಕಿ, ಗಾಜುಗಳು ಪುಡಿಪುಡಿಯಾಗಿದ್ದು, ಗೋಡೆಗೆ ಹಾನಿಯಾಗಿದೆ.
ಇದರಿಂದ ಮನೆಯಲ್ಲಿದ್ದವರೆಲ್ಲ ಆತಂಕದಿಂದ ಹೊರಗೆ ಓಡಿ ಬಂದಿದ್ದಾರೆ. ಮನೆಯ ಹೊರಗಡೆ ಇದ್ದ ಜನರು ಹಾಗೂ ದಾರಿಹೋಕರು ಕೂಡ ಇದರಿಂದ ಕೆಲಕಾಲ ಆತಂಕಕ್ಕೀಡಾಗಿದ್ದಾರೆ.
ತಕ್ಷಣ ಅಗ್ನಿಶಾಮಕ ದಳದವರಿಗೆ ವಿಷಯ ತಿಳಿಸಿದ್ದರಿಂದ ಕೆಲವೇ ಹೊತ್ತಿನಲ್ಲಿ ಬಂದ ಅಗ್ನಿಶಾಮಕ ಸಿಬ್ಬಂದಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದುರಂತದಲ್ಲಿ ಮನೆಯಲ್ಲಿನ ಬೆಲೆಬಾಳುವ ಸಾಮಗ್ರಿಗಳು ಸುಟ್ಟು ಕರಕಲಾಗಿವೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ತಿಳಿಸಿದ್ದಾರೆ.
*ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ ಫಾಲೋ ಮಾಡಿ*??
*ಸುದ್ದಿ ಮತ್ತು ಜಾಹೀರಾತುಗಳಿಗೆ ಸಂಪರ್ಕಿಸಿರಿ*: *8123967576*
*Laxmi News*