Breaking News

ಅಲೆಮಾರಿ ಜನಾಂಗದ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ

Spread the love

ಗೋಕಾಕ: ಹಿಂದುಳಿದ ಹಾಗೂ ಅಲೆಮಾರಿ ಜನಾಂಗದ ಕುಟುಂಬಗಳಿಗೆ ಇಲ್ಲಿಯ ನಗರಸಭೆ ವಾರ್ಡ ನಂ 12ರ ಸದಸ್ಯೆ ಭಾರತಿ ಶಿವಾನಂದ ಹತ್ತಿ ಅವರು ಆಸರೆಯಾಗಿದ್ದಾರೆ.

ನಗರದ ಹೊರವಲಯದಲ್ಲಿ ವಾಸವಾಗಿರುವ ಅಲೆಮಾರಿ ಜನಾಂಗ ಹಾಗೂ ನಿರ್ಗತಿಕ ಕುಟುಂಬಗಳಿಗೆ ಆಹಾರ ದಿನಸಿ ಕಿಟ್ ವಿತರಿಸಿ ಮಾನವಿಯತೆ ಮೆರದಿದ್ದಾರೆ.

ಕೊರೋನಾ 2ನೇ ಅಲೆಯ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ನಗರದ ಎಪಿಎಮ್‌ಸಿ ಆಗ್ನಿ ಶಾಮಕ ಠಾಣೆಯ ಹತ್ತಿರ ವಾಸವಾಗಿರುವ ಅಲೆಮಾರಿ ಕುಟುಂಬದವರಿಗೆ ಶಾಸಕ ರಮೇಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಆಹಾರ ಧಾನ್ಯಗಳ ಕಿಟ್ ವಿತರಣೆ ಮಾಡಿರುವುದಾಗಿ ಸಮಾಜ ಸೇವಕ ಶಿವಾನಂದ ಹತ್ತಿ ಹೇಳಿದರು.

ಈ ಸಂದರ್ಭದಲ್ಲಿ ರವಿ ಹನಿಮನಾಳ, ಮುತ್ತುರಾಜ ಜಮಖಂಡಿ, ನಿತ್ಯಾನಂದ ಅಮ್ಮಿನಭಾಂವಿ, ಸುಧೀರ ಜೋಗೊಜಿ, ಕಾಶೀನಾಥ, ಜಾಫರ್ ಶಭಾಶಖಾನ ಸೇರಿದಂತೆ ಇನ್ನಿತರರು ಇದ್ದರು.


Spread the love

About Laxminews 24x7

Check Also

ಅಗಸಗೆಯಲ್ಲಿ ಸಡಗರದ ವಿಶ್ವ ಮಹಿಳಾ ದಿನಾಚರಣೆ: ಮಹಿಳೆಯರಿಗೆ ಸೀರೆ ವಿತರಿಸಿ ಸಂಭ್ರಮ

Spread the loveಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಬೆಳಗಾವಿ ಜಿಲ್ಲೆಯ ಅಗಸಗೆ ಗ್ರಾಮದಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಚಿವರಾದ ಸತೀಶ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ