ಅಥಣಿ: ಒಂದು ಕಾಲದಲ್ಲಿ ಫಲವತ್ತಾದ ಭೂಮಿಯಾಗಿದ್ದ ಅಥಣಿ ತಾಲ್ಲೂಕು ಈಗ ಸವುಳು- ಜವಳ ಮಣ್ಣಾಗಿದೆ. ಕೆಲವೆಡೆ ದ್ರಾಕ್ಷಿಯ ಹೊರತಾಗಿ ಮತ್ಯಾವ ಬೆಳೆಯನ್ನೂ ಬೆಳೆಯಲು ಈ ಮಣ್ಣು ಯೋಗ್ಯವಾಗಿಲ್ಲ.
ಇಂಥ ಮಣ್ಣಿಗೆ ಮತ್ತೆ ಮರುಜೀವ ನೀಡುವ ಯೋಜನೆ ರಾಜ್ಯ ಸರ್ಕಾರದಲ್ಲಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದ ಕಾರಣ ಕಾರ್ಯಗತವಾಗಿಲ್ಲ. ಅಥಣಿ ತಾಲ್ಲೂಕನ್ನು ಈ ಬಾರಿಯ ಬಜೆಟ್ನಲ್ಲಿ ವಿಶೇಷವಾಗಿ ಪರಿಗಣಿಸಬೇಕು ಎಂಬುದು ಜನರ ಆಗ್ರಹ. ಸವುಳು-ಜವುಳು ಜಮೀನಿಗೆ ಹಿಪ್ಪರಗಿ ಅಣೆಕಟ್ಟೆ ಕಾರಣವೆಂದು ಕೆಲ ರೈತರು ಹೇಳುತ್ತಾರೆ. ನಂದೇಶ್ವರದ ಬೆಂಚಿ ಹೊಲಗಳಿಂದ ಜನವಾಡದ ಕಡೆಗೆ ನೀರು ಹರಿದು ಹೋಗಲು ತೋಡಿರುವ ತಗ್ಗು ಕೆಲ ವರ್ಷಗಳಿಂದ ಹೂಳು ಹುಲ್ಲು-ಕಡ್ಡಿಗಳಿಂದ ತುಂಬಿದೆ.
ಕಾಲುವೆ ಸ್ವಚ್ಛಗೊಳಿಸಿದರೆ ಮಾತ್ರ ಹೊಲಗಳಲ್ಲಿ ಸಂಗ್ರಹವಾಗಿರುವ ನೀರು ಹೊರಗೆ ಹೋಗುತ್ತದೆ ಎನ್ನುತ್ತಾರೆ ರೈತರು. ಅಂದಾಜು 20 ಸಾವಿರ ಹೆಕ್ಟೇರ್ ಈ ರೀತಿಯ ಸಮಸ್ಯೆ ಎದುರಿಸುತ್ತಿದೆ. ಕೆಲ ರೈತರೆ ಒಂದುಗೂಡಿ ಸ್ವಂತ ಖರ್ಚಿನಿಂದ ಸವುಳು- ಜವಳು ಜಮೀನಿನಲ್ಲಿನ ನೀರು ಹೊರಹಾಕಲು ಪೈಪ್ಲೈನ್ ಅಳವಡಿಸಿಕೊಂಡಿದ್ದಾರೆ. ಆರ್ಥಿಕವಾಗಿ ಹಿಂದುಳಿದವರಿಗೆ ಇದು ಸಾಧ್ಯವಿಲ್ಲ. ಅವರಿಗಾಗಿ ಬಜೆಟ್ನಲ್ಲಿ ವಿಶೇಷ ಪ್ಯಾಕೇಜ್ ನೀಡಬೇಕು ಎಂಬುದು ಮುಖಂಡ ರಮೇಶಗೌಡ ಪಾಟೀಲ ಆಗ್ರಹ
Laxmi News 24×7