ಘಟಪ್ರಭಾ: ಸಮೀಪದ ಕೊಟಬಾಗಿ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಕೊಠಡಿಯನ್ನು ಬಿಡಿಸಿಸಿ ಬ್ಯಾಂಕ ಅಧ್ಯಕ್ಷ ರಮೇಶ ಕತ್ತಿ ಉದ್ಘಾಟಿಸಿದರು.
ಎರಡು ನೂತನ ಶಾಲಾ ಕೊಠಡಿ ನಿರ್ಮಾಣಕ್ಕೆ ಅಡಿಗಲ್ಲು ಕಾರ್ಯಕ್ರಮಕ್ಕೆ ಎಸ್‍ಡಿಎಂಸಿ ಅಧ್ಯಕ್ಷ ರಾಜಕುಮಾರ ಪಾಟೀಲ ಭೂಮಿ ಪೂಜೆ ನೆರವೇರಿಸಿದರು.ಈ ಸಂದರ್ಭದಲ್ಲಿ ಬಿಇಒ ಮೋಹನ ದಂಡಿನ, ಬಿಸಿಯೂಟ ಸಹ ನಿರ್ದೇಶಕ ಹಿರೇಮಠ, ಸಿಆರ್‍ಪಿಗಳಾದ ವಿ.ಎಸ್.ರಜಪೂತ, ಪ್ರಧಾನ ಗುರು ಎಸ್.ಬಿ.ಹೊಳೆಪ್ಪಗೋಳ ಸೇರಿದಂತೆ ಎಸ್ ಡಿಎಂಸಿ ಸದಸ್ಯರು,ಶಿಕ್ಷಣ ಪ್ರೇಮಿಗಳು ಹಾಗೂ ಸಹಶಿಕ್ಷಕರು ಇದ್ದರು. ಶಿಕ್ಷಕ ಡಿ.ಬಿ.ಹುಲಕುಂದ ಸ್ವಾಗತಿಸಿ,ನಿರೂಪಿಸಿದರು.
Laxmi News 24×7