ಬೆಂಗಳೂರು: ಜಿಬಿಎ ಚುನಾವಣೆಗೆ ಕಾಂಗ್ರೆಸ್ ಭರ್ಜರಿ ಸಿದ್ಧತೆ ಮಾಡುತ್ತಿದೆ. 369 ವಾರ್ಡ್‌ಗಳ 1,800 ಅರ್ಜಿ ಸೇಲ್ ಆಗಿದೆ. ಕಾಂಗ್ರೆಸ್‌ನಲ್ಲಿ ಜಿಬಿಎ ಚುನಾವಣೆಗೆ ಪೈಪೋಟಿ ಹೆಚ್ಚಾಗುತ್ತಿದೆ.
ಜೂನ್ 30ರ ಒಳಗಡೆ ಜಿಬಿಎ ಚುನಾವಣೆ ಮಾಡಬೇಕು ಅಂತಾ ಸುಪ್ರೀಂ ಕೋರ್ಟ್ ಆದೇಶ ಮಾಡಿದೆ. ಸಹಜವಾಗಿ ಈಗ ಆಕಾಂಕ್ಷಿಗಳಲ್ಲಿ ಆಸೆ ಚಿಗುರೊಡೆದಿದೆ. ಈಗಾಗಲೇ ಎಲ್ಲಾ ಪಕ್ಷಗಳು ಜಿಬಿಎ ಚುನಾವಣೆಗೆ ಸಿದ್ಧತೆ ಆರಂಭಿಸಿವೆ. ಕಾಂಗ್ರೆಸ್‌ನಲ್ಲಿ ಜಿಬಿಎ ಚುನಾವಣೆಗೆ ಭರ್ಜರಿಯಾಗಿ ಸಿದ್ಧತೆ ನಡೆಯುತ್ತಿದೆ.
ಹೌದು, ಈಗಾಗಲೇ ಆಕಾಂಕ್ಷಿಗಳಿಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. 369 ವಾರ್ಡ್‌ಗೆ ಚುನಾವಣೆ ನಡೆಯಲಿದ್ದು ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳ ಪಟ್ಟಿ ಏರಿಕೆ ಆಗುತ್ತಿದೆ. 1,800 ಮಂದಿ ಅರ್ಜಿಯನ್ನ ಸ್ವೀಕಾರ ಮಾಡಿದ್ದಾರೆ. ಅದರಲ್ಲಿ ಎಷ್ಟು ಮಂದಿ ಅರ್ಜಿ ಸಲ್ಲಿಕೆ ಮಾಡಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.
ಇನ್ನೂ ಅರ್ಜಿ ಸಲ್ಲಿಕೆಗೆ ಇದೇ ತಿಂಗಳ 30ರವರೆಗೂ ಅವಕಾಶ ನೀಡಲಾಗಿದೆ. ಕೆಪಿಸಿಸಿ ಭಾರತ್ ಜೋಡೋ ಕಚೇರಿಯಲ್ಲಿ ಅರ್ಜಿ ನೀಡಲಾಗ್ತಿದೆ. ಆಕಾಂಕ್ಷಿಗಳ ಪಟ್ಟಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಅರ್ಜಿ ಸಲ್ಲಿಕೆ ಮಾಡುವ ಪುರುಷ ಆಕಾಂಕ್ಷಿಗಳು 50 ಸಾವಿರ ಹಣ ವನ್ನ ಕಟ್ಟಬೇಕಾಗಿದೆ. ಮಹಿಳಾ ಆಕಾಂಕ್ಷಿಗಳು 25 ಸಾವಿರ ಹಣ ಕಟ್ಟಬೇಕಾಗಿದೆ. ಅರ್ಜಿ ಸಲ್ಲಿಕೆ ಬಳಿಕ ಅಭ್ಯರ್ಥಿಗಳ ಆಯ್ಕೆ ಕೂಡ ಪ್ರಮುಖವಾಗಿರಲಿದೆ.
ಒಟ್ಟಾರೆ ಜಿಬಿಎ ಚುನಾವಣೆಯ ಪ್ರಕ್ರಿಯೆ ಶುರುವಾಗಿದೆ. ವಾರ್ಡ್ ಮೀಸಲಾತಿ ಕರಡು ಪ್ರತಿ ಬಿಡುಗಡೆ ಆಗಿದೆ. ಅಧಿಕೃತ ಅಧಿಸೂಚನೆ ಬಂದ ಬಳಿಕ ಉಳಿದ ಪಕ್ಷಗಳ ಪ್ರತಿಕ್ರಿಯೆ ಹೇಗಿರಲಿದೆ ಜೊತೆಗೆ ಜಿಬಿಎ ಚುನಾವಣೆಗೆ ಜೆಡಿಎಸ್ ಮತ್ತು ಬಿಜೆಪಿ ತಯಾರಿ ಹೇಗಿರಲಿದೆ ಎಂಬುದನ್ನ ಕಾದು ನೋಡಬೇಕಿದೆ.
Laxmi News 24×7