ಮೈಸೂರು,ಜ.20- ಫ್ರೀ ಕಾಶ್ಮೀರ ಎಂಬ ಭಿತ್ತಿಪತ್ರ ಪ್ರದರ್ಶಿಸಿದ ಆರೋಪ ಹೊತ್ತಿರುವ ಯುವತಿ ಪರ ವಕಾಲತ್ತು ವಹಿಸಲು ಹಲವಾರು ವಕೀಲರು ಮುಂದೆ ಬಂದಿದ್ದಾರೆ. ನಳಿನಿ ಪರ ವಕಾಲತ್ತು ವಹಿಸಲು ಬೆಂಗಳೂರು, ಮಂಡ್ಯ, ಚಾಮರಾಜನಗರ, ಶಿವಮೊಗ್ಗ, ದಾವಣಗೆರೆ ಸೇರಿದಂತೆ ಹಲವು ಜಿಲ್ಲೆಗಳಿಂದ ವಕೀಲರು ಆಗಮಿಸಿ 250ಕ್ಕೂ ಹೆಚ್ಚು ಸಹಿ ಇರುವ ವಕಾಲತ್ತು ಪತ್ರವನ್ನು ಇಂದು ಮೈಸೂರಿನ 2ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಿಗೆ ಸಲ್ಲಿಸಿದ್ದಾರೆ.
![]()
ನಳಿನಿ ಪರ ವಕಾಲತ್ತು ವಹಿಸದಂತೆ ಮೈಸೂರಿನ ವಕೀಲರ ಸಂಘ ಈ ಪ್ರಕರಣದಿಂದ ಹಿಂದೆ ಸರಿದಿತ್ತು. ಇದೀಗ ಇಂದಿನ ಬೆಳವಣಿಗೆ ಕುರಿತಂತೆ ಚರ್ಚೆ ನಡೆಸಲು ಮೈಸೂರು ವಕೀಲರ ಸಂಘ ಸಭೆ ನಡೆಸಲು ಮುಂದಾಗಿದೆ.

Laxmi News 24×7