Breaking News
?????????

ಗೋಕಾಕ: ನಗರದ ಹೊರವಲಯದಲ್ಲಿರುವ ಆಗ್ನಿಶಾಮಕ ಠಾಣೆಯಲ್ಲಿ ಸಕಾಲ ಸೇವಾ ಸಪ್ತಾಹದ ಅಂಗವಾಗಿ ಹಮ್ಮಿಕೊಂಡ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಠಾಣಾಧಿಕಾರಿ ಸದಾನಂದ ಮೆಳವಂಕಿ ಅವರು ಚಾಲನೆ ನೀಡುತ್ತಿರುವುದು.

Spread the love

ಗೋಕಾಕ: ಆಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯಲ್ಲಿ ಸಕಾಲ ವ್ಯಾಪ್ತಿಯಲ್ಲಿ 5 ಸೇವೆಗಳನ್ನು ಸಾರ್ವಜನಿಕರಿಗೆ ನೀಡಲಾಗುತ್ತಿದ್ದು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಇಲ್ಲಿಯ ಆಗ್ನಿ ಶಾಮಕ ಠಾಣಾಧಿಕಾರಿ ಸದಾನಂದ ಮೆಳವಂಕಿ ಹೇಳಿದರು.
ಶುಕ್ರವಾರದಂದು ನಗರದ ಹೊರವಲಯದಲ್ಲಿರುವ ಆಗ್ನಿಶಾಮಕ ಠಾಣೆಯಲ್ಲಿ ಸಕಾಲ ಸೇವಾ ಸಪ್ತಾಹದ ಅಂಗವಾಗಿ ಹಮ್ಮಿಕೊಂಡ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬಹುಮಹಡಿ ಕಟ್ಟಡಗಳಿಗೆ ನಿರ್ಮಾಣ ಪೂರ್ವದಲ್ಲಿ ಇಲಾಖೆಯಿಂದ ನೀಡಲಾಗುವ ನಿರಾಕ್ಷೇಪಣಾ ಪತ್ರ, ನಿರ್ಮಾಣದ ನಂತರ ಕ್ಲಿಯರೆನ್ಸ್ ಪ್ರಮಾಣ, ಬೆಂಕಿ ಆಕಸ್ಮಿಕವಾಗಿ ತುರ್ತು ಕ್ರಿಯೆಗೆ ಪ್ರತಿಕ್ರಿಯೆ ನೀಡುವುದು, ಪಟಾಕಿಗಳ ಮಾರಾಟ ಲೈಸನ್ಸ್‍ಗೆ ಸಂಬಂಧಿಸಿದಂತೆ, ಹಲವಾರು ಸೇವೆಗಳನ್ನು ಸಾರ್ವಜನಿಕರಿಗೆ ಸೇವಾ ಸಿಂಧು ಮೂಲಕ ಪಡೆದುಕೊಳ್ಳಲು ಅವಕಾಶ ನೀಡಲಾಗಿದ್ದು ಸಾರ್ವಜನಿಕರು ಇದರ ಪ್ರಯೋಜನೆಯನ್ನು ಪಡೆದುಕೊಳ್ಳಬೇಕೆಂದು ಮನವಿ ಮಾಡಿದ ಅವರು ಅಫಘಾತ- ಅವಘಡಗಳು, ನೈಸರ್ಗಿಕ ವಿಪತ್ತಿನಲ್ಲಿ ರಕ್ಷಣಾ ಕಾರ್ಯ ಹಾಗೂ ವಿಪತ್ತು ನಿರ್ವಹಣೆಗೆ ಇಲಾಖೆಯ ಠಾಣೆಗೆ ಕರೆನ್ನು ಮಾಡಬೇಕು. ಇನ್ನು ಹೆಚ್ಚಿನ ಸೇವೆ ಹಾಗೂ ಮಾಹಿತಿಗಾಗಿ ಆಗ್ನಿಶಾಮಕ ಠಾಣೆಗೆ ಸಂಪರ್ಕಿಸಬಹುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಆಯ್.ಬಿ.ಮುಲ್ತಾನಿ, ವಿ.ಬಿ.ಉಳ್ಳಾಗಡ್ಡಿ, ವಿ.ಆರ್.ಭಾಗೋಜಿ, ಬಿ.ಎಮ್.ಪೀರಜಾದೆ, ಎಸ್.ಆರ್.ಪಾಟೀಲ, ಎಸ್.ಆರ್. ಚವ್ಹಾಣ, ಸಿ.ಎಸ್.ಚಿಪ್ಪಲಕಟ್ಟಿ, ಆರ್.ಎನ್.ಕಾಪಸಿ, ಎ.ಎನ್.ಜಗದಾಳ, ಆರ್.ಯು.ಖಿಲಾರಿ ಸೇರಿದಂತೆ ಅನೇಕರು ಇದ್ದರು.


Spread the love

About Laxminews 24x7

Check Also

ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ

Spread the loveಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ ಇಂದು ಬೆಳಗಾವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ