Breaking News

ಜಮೀರ್ ಪರ ಮಾತಾಡಿ ಸಿದ್ದರಾಮಯ್ಯನವರು ತಮ್ಮ ವ್ಯಕ್ತಿತ್ವ ತಾವೇ ಹಾಳು ಮಾಡಿಕೊಳ್ಳುತ್ತಿದ್ದಾರೆ : ಸಚಿವ ಜಗದೀಶ್ ಶೆಟ್ಟರ್​

Spread the love

ಧಾರವಾಡ : ಮಾಜಿ ಸಚಿವ ಜಮೀರ್ ಅಹಮ್ಮದ್ ಅವರು ಕ್ಯಾಸಿನೋಗೆ ಹೋಗಿದ್ದು ತಪ್ಪಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯನವರು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಈ ಮೂಲಕ ತಮ್ಮ ವ್ಯಕ್ತಿತ್ವವನ್ನು ತಾವೇ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಸಚಿವ ಜಗದೀಶ್ ಶೆಟ್ಟರ್​ ಹೇಳಿದರು. ಧಾರವಾಡದಲ್ಲಿ ಮಾತನಾಡಿದ ಅವರು ಕ್ಯಾಸಿನೋಗೂ ಹೋಗ ಬಾರದು, ಜೂಜು ಆಡಬಾರದು ಎಂದು ಸಿದ್ದರಾಮಯ್ಯ ಹೇಳಬೇಕಿತ್ತು. ಆದರೆ, ಜಮೀರ್ ಕ್ಯಾಸಿನೋಗೆ ಹೋಗಿದ್ದು ತಪ್ಪಲ್ಲ ಅಂತಾ ಹೇಳಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಸರ್ಕಾರ, ಸಮ್ಮಿಶ್ರ ಸರ್ಕಾರ ಇದ್ದಾಗ ಇದೆಲ್ಲ ಹೊರ ಬರಲಿಲ್ಲ, ಇವರು ಅಧಿಕಾರದಲ್ಲಿದ್ದಾಗ ಅದಕ್ಕೆಲ್ಲ ರಕ್ಷಣೆ ಕೊಟ್ಟಿದ್ದರು ಎಂದು ಆರೋಪ‌ ಮಾಡಿದ ಸಚಿವರು, ನಮ್ಮ ಸರ್ಕಾರ ಬಂದ ಮೇಲೆ ಎಲ್ಲವೂ ಹೊರ ಬರತಾ ಇದೆ ಎಂದು ಸಿದ್ದರಾಮಯ್ಯ ನವರಿಗೆ ತಿರುಗೆಟು ನೀಡಿದ್ದಾರೆ.

ಡ್ರಗ್ಸ್ ಪ್ರಕರಣದಲ್ಲಿ ಬಹಳ ಜನ ಇದರಲ್ಲಿ ಹೊರ ಬರುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.

ರಾಜಕೀಯ ಪಕ್ಷದವರು ಡ್ರಗ್ಸ್​​ ಕೇಸ್‌ ನಲ್ಲಿದಾರೆಂಬ ಪ್ರಶ್ನೆಗೆ ಪ್ರತಿಕ್ರಿಯೆಯ ನೀಡಿದ ಸಚಿವ ಜಗದೀಶ್ ಶೆಟ್ಟರ್, ಹೆಸರು ಗೊತ್ತಿದ್ದರೇ ಹೇಳಿ ಬಿಡಿ, ಅವರ ಹೆಸರು ಕೊಡಿ, ನಾನೇ ತನಿಖೆ ಮಾಡಿ ಅಂತಾ ಹೇಳುತ್ತೇನೆ ಎಂದು ಪತ್ರಕರ್ತರಿಗೆ ಪ್ರಶ್ನೆ ಮಾಡಿದರು. ಜಿ ಪಂ ಸದ್ಯದ ಯೋಗಿಶ್ ಗೌಡ ಕೊಲೆ‌ ಪ್ರಕರದಲ್ಲಿ ಬಿಜೆಪಿಯವರು ಸಿಬಿಐಯನ್ನು ದುರುಪಯೋಗ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ಯಾರೂ ತಪ್ಪು ಮಾಡಿಲ್ಲವೋ ಅವರು ತನಿಖೆಗೆ ಹೆದರುವ ಪ್ರಶ್ನೆಯೇ ಇಲ್ಲ‌, ಜಮೀರ್ ತಪ್ಪು ಮಾಡಿಲ್ಲ ಅಂತಾದ್ರೆ ಯಾಕೆ ಹೆದರಬೇಕು, ಯೋಗೀಶ್ ಗೌಡ ಹತ್ಯೆಯ ಪ್ರಕರಣವೂ ಇರಲಿ ಯಾವುದೇ ಪ್ರಕರಣ ಇದ್ದರು ತಪ್ಪು ಮಾಡದೇ ಇರುವವರು ಹೆದರುವ ಪ್ರಶ್ನೆ ಇಲ್ಲ ಎಂದಿದ್ದಾರೆ.

: ಡ್ರಗ್ಸ್ ಜಾಲದಲ್ಲಿ ಯಾರೇ ರಾಜಕೀಯ ನಾಯಕರು ಇದ್ದರೂ ಅವರ ವಿರುದ್ದ ಕ್ರಮ ಕೈಗೊಳ್ಳಲಿ : ಸಿದ್ದರಾಮಯ್ಯ

ಇನ್ನೂ ದೆಹಲಿ ಹೋಗಿ ಕೇಂದ್ರ ನಾಯಕರ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಾನು ನನ್ನ ಇಲಾಖೆ ವಿಚಾರವಾಗಿ ಕೇಂದ್ರ‌ ಸಚಿವರ ಭೇಟಿ ಮಾಡಿದ್ದೆ. ಅದನ್ನು ಬಿಟ್ಟು ಮಾಧ್ಯಮದವರೇ ಏನೇ‌ನೊ‌ ಸುದ್ದಿ ಮಾಡುತ್ತಿದ್ದಾರೆ ಎಂದರು.

ಹೊಸ ಕೈಗಾರಿಕೆಗಳನ್ನು ತರಲು ಚರ್ಚೆ ಮಾಡಿ, ಅವರಿಗೆ ಬೇಕಾದ ಭೂಮಿ‌ ನೀಡಲು‌ ಚಿಂತನೆ‌ ನಡೆದಿದೆ, ಈ ವಿಷಯವಾಗಿ ನಾನು ದೆಹಲಿಗೆ ಹೋಗಿದ್ದೆ ಹೊರತಾಗಿ ಬೇರೆ ಯಾವ ವಿಚಾರವು ಇಲ್ಲ‌ ಎಂದು ಸ್ಪಷ್ಟ ಪಡಿಸಿದ್ದಾರೆ.


Spread the love

About Laxminews 24x7

Check Also

ರಾಜ್ಯದ ಹಲವೆಡೆ ಭಾರಿ ಮಳೆ ಮುನ್ಸೂಚನೆ

Spread the loveಬೆಂಗಳೂರು: ರಾಜ್ಯದ ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ