ಹೊಸದಿಲ್ಲಿ: ದೆಹಲಿ ಗಡಿಭಾಗದಲ್ಲಿ ನಡೆಯುತ್ತಿರುವ ರೈತ ಹೋರಾಟದಲ್ಲಿ ರೈತರಿಗೆ ಸಹಾಯ ಮಾಡಲೆಂದು ತೆರಳಿದ ವ್ಯಕ್ತಿ ದಾರುಣ ಸಾವಿಗೀಡಾಗಿದ್ದಾನೆ.
ಕಾರಿನಲ್ಲಿ ಮಲಗಿದ್ದ ಸಮಯದಲ್ಲಿ ಕಾರಿಗೆ ಬೆಂಕಿ ತಗುಲಿದ್ದು, ಆತನ ಸಜೀವ ದಹನವಾಗಿದೆ. ಪಂಜಾಬ್ ನ ಬರ್ನಾಲಾ ಜಿಲ್ಲೆಯ ಧನೋಲುವಾ ಗ್ರಾಮದ ಜನಕರಾಜ್ (55) ಮೃತ ವ್ಯಕ್ತಿ.
ರೈತ ಹೋರಾಟಕ್ಕೆಂದು ಅಲ್ಲಿಂದ ದೆಹಲಿಗೆ ಬಂದಿದ್ದ. ಟ್ರ್ಯಾಕ್ಟರ್ ಮೆಕಾನಿಕ್ ಆಗಿದ್ದ ಆತನನ್ನು ಹೋರಾಟ ನಿರತ ರೈತರ ಟ್ರ್ಯಾಕ್ಟರ್ಗಳನ್ನು ಸರಿ ಮಾಡಲೆಂದೇ ಕರೆಸಿಕೊಳ್ಳಲಾಗಿತ್ತು. ಶನಿವಾರ ರಾತ್ರಿ ತನ್ನ ಕೆಲಸ ಮುಗಿಸಿದ ಆತ ಕಾರಿನಲ್ಲಿ ನಿದ್ರೆಗೆ ಜಾರಿದ್ದಾನೆ. ಈ ಸಮಯದಲ್ಲಿ ಕಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಕಾರಿನಲ್ಲಿದ್ದ ಜನಕ ರಾಜ್ ಅಲ್ಲಿಯೇ ಸಜೀವ ದಹನವಾಗಿದ್ದಾನೆ.
Laxmi News 24×7