Breaking News

ರೇವಣ್ಣ ಕುಟುಂಬ ಮುಗಿಸಲು ಬಳಸಿಕೊಂಡ ಎಸ್‌ಐಟಿಗೆ ಉಡುಗೊರೆ ಕೊಟ್ಟಿದ್ದಾರೆ – ಸರ್ಕಾರದ ವಿರುದ್ಧ ಹೆಚ್‌ಡಿಡಿ ವಾಗ್ದಾಳಿ

Spread the love

ಹಾಸನ: ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದಿರುವ ನಮ್ಮ ಎದುರಾಳಿಗಳು, ರೇವಣ್ಣ ಅವರ ಕುಟುಂಬ ಮುಗಿಸಲು ಯಾವ ಎಸ್‌ಐಟಿ  ಬಳಸಿಕೊಂಡಿದ್ದರೋ ಅವರಿಗೆ ಉಡುಗೊರೆ ಕೊಟ್ಟಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡರು  ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಹಾಸನದ  ಬೂವನಹಳ್ಳಿ ಬಳಿ ನಡೆದ ಜೆಡಿಎಸ್‌  ಸಮಾವೇಶದಲ್ಲಿ ಅವರು ಮಾತನಾಡಿದರು. ಈ ವೇಳೆ, ರೇವಣ್ಣ ಅವರ ಕುಟುಂಬವನ್ನು ಮುಗಿಸಲು ಎದುರಾಳಿಗಳು ಪ್ರಯತ್ನಪಟ್ಟರು. ಈ ಜಿಲ್ಲೆಯಲ್ಲಿ ಜೆಡಿಎಸ್ ಪ್ರಬಲವಾಗಿದೆ. ಜೆಡಿಎಸ್ ಮುಗಿಸಲು ಎರಡು ಬಾರಿ ಸಮಾವೇಶ ಮಾಡಿದ್ರು. ನನಗೆ ಆನಂದ ಆಯಿತು, ನಿನ್ನೆ ಇನ್ನೂ ಡಯಾಲಿಸಿಸ್ ಮಾಡ್ಸಿದ್ದೆ. ನನ್ನ ಕಣ್ಣು ಕ್ಕುಕ್ಕುತ್ತಾ ಇದೆ ನಿಮ್ಮನ್ನೆಲ್ಲಾ ನೋಡಿ. ಯಾರು ಆಡಳಿತ ನಡೆಸುತ್ತಿದ್ದಾರೋ ಅವರಿಗೆ ನಿಮ್ಮ ಆಟ ನಡೆಯೋದಿಲ್ಲ ನಾವಿದ್ದೇವೆ ಎಂದು ತೋರಿಸಿದ್ದೀರಿ. ಕಾಲ ಬರುತ್ತೆ, ನನಗೆ ದೈವದಲ್ಲಿ ನಂಬಿಕೆ ಇದೆ ಎಂದರು.

ನನಗೆ 93 ವರ್ಷ ವಯಸ್ಸು, ಈ ಆತ್ಮ ಸ್ವಚ್ಛವಾಗಿದೆ. ಜನರಿಗಾಗಿ ದುಡಿದ್ದೇನೆ, ಕಷ್ಟ ಪಟ್ಟಿದ್ದೇನೆ. ಹಾಸನ ಜಿಲ್ಲೆಯಲ್ಲಿ ಒಂದು ಬಾರಿ ನನ್ನನ್ನು ಸೋಲಿಸಿದ್ದಾರೆ. ಒಂದು ಸಿನಿಮಾ ಥಿಯೇಟರ್ ಕಟ್ಟಿದ್ರು ಅಂಥ ಸೊಲಿಸಿದ್ರು. ಯಾರು ಸೋಲಿಸಿದ್ರೋ ಅದೇ ಜನ 1991 ರಲ್ಲಿ ಹಾಸನ ಜಿಲ್ಲೆಯಿಂದ ಲೋಕಸಭೆಗೆ ಕಳುಹಿಸಿದ್ರು. ಆ ಜನಕ್ಕೆ ತಲೆ ಬಾಗುತ್ತೇನೆ. ಯಾವ ಜನ ನನ್ನನ್ನು ತುಳಿಯಬೇಕು ಎಂದು ಕೇಸ್‌ಗಳನ್ನು ಹಾಕಿಸಿದ್ರು ಅದನ್ನು ಮೆಟ್ಟಿನಿಂತು ರಾಜಕೀಯ ಮಾಡಿದ್ದೇನೆ ಎಂದರು.

ಕಾಂಗ್ರೆಸ್‌ನವರು ಈ ಜಿಲ್ಲೆಯಲ್ಲಿ ಎರಡು ಕಾರ್ಯಕ್ರಮ ಮಾಡಿದ್ರು. ಯಾರು ರೇವಣ್ಣ ಅವರನ್ನು ಮುಗಿಸುವ ಪ್ರಯತ್ನ ಮಾಡಿದ್ರೋ ಅವರಿಗೆ ಇಲ್ಲಿ ಬಂದಿರುವ ಜನರು ಉತ್ತರ ಕೊಟ್ಟಿದ್ದಾರೆ. ನನಗೆ ಕಿಡ್ನಿ ಫೇಲ್ ಆಗಿದೆ, ವಾರದಲ್ಲಿ ಮೂರು ದಿನ ಡಯಾಲಿಸಿಸ್ ಮಾಡಿಸಬೇಕು. ವಿವಿಧ ಜಾತಿಗಳು, ಸಂಪ್ರದಾಯಗಳು ಇರುವ ದೇಶ ಇದು. ನಾನು ಸುದೀರ್ಘ ರಾಜಕೀಯ ಮಾಡಿದ್ದೇನೆ ಯಾರಿಗೂ ಅನ್ಯಾಯವಾಗಲು ಬಿಟ್ಟಿಲ್ಲ.

ರಾಹುಲ್‌ಗಾಂಧಿ ಹತ್ತು ವರ್ಷದ ಹಿಂದೆ ಹಾಸನಕ್ಕೆ ಬಂದರು. ಜೆಡಿಎಸ್ ಬಿಜೆಪಿಯ ಬಿ ಟೀಂ ಅಂದರು. ಅವತ್ತು ನನ್ನ ಸ್ನೇಹಿತ ಸೋತ. ಅವರ ಮಗ ಈಗ ಹಾಸನ ಎಂಎಲ್‌ಎ ಆಗಿದ್ದಾರೆ. ಇವತ್ತು ನಾವು ಎನ್‌ಡಿಎ ಪಾಲುದಾರರಾಗಿದ್ದು, ಕುಮಾರಸ್ವಾಮಿ ಕೇಂದ್ರದಲ್ಲಿ ಮಂತ್ರಿಯಾಗಿದ್ದಾರೆ. ನಾನು ಹಗಲು-ರಾತ್ರಿ ದುಡಿದು ಈ ಜಿಲ್ಲೆಗಾಗಿ ಹೋರಾಟ ಮಾಡ್ದೆ. ನನ್ನನ್ನು ತುಳಿಯಲೇ ಬೇಕು ಎಂದು ಬಹಳ ಪ್ರಯತ್ನಪಟ್ಟರು. ಹೆಚ್.ಡಿ.ಕುಮಾರಸ್ವಾಮಿ ಅವರು ದುಡ್ಡು ಕೊಟ್ಟು ಜಮೀನು ತೆಗೆದುಕೊಂಡರೆ ಅದು ಗೋಮಾಳ ಜಾಗ, ಸುಳ್ಳು ದಾಖಲೆ ಮಾಡಿಸಿದ್ದಾರೆ ಎಂದು ತನಿಖೆ ಮಾಡಿಸಿದ್ರು ಎಂದರು.

ರಾಹುಲ್‌ಗಾಂಧಿ ಜೆಡಿಎಸ್ ಬಿಜೆಪಿಯ ಟೀಂ ಎಂದಿದ್ದರು ಈಗ ಅವರ ಜೊತೆಯೇ ಆಡಳಿತ ಮಾಡುತ್ತಿದ್ದೇವೆ. ವೋಟ್ ಚೋರಿ ಅಂದರು ಬರೀ ಆರೇ ಸೀಟ್ ಬಂತು. ಕಾಂಗ್ರೆಸ್ ಮೂರೇ ರಾಜ್ಯದಲ್ಲೇ ಇರೋದು. ಎಲ್ಲಲ್ಲಿ ಏನೇನು ನಡೆಸಿದೆ ಹೇಳ್ಲಾ, ಈ ನಾಲಿಗೆ ಹೊಲಸು ಮಾಡಿಕೊಳ್ಳಲ್ಲ. ನನ್ನದೊಂದು ಆಸೆ ಇದೆ. ಮೋದಿಯವರನ್ನು ಕರೆಸಿ ಹದಿನೆಂಟು ಎಂಪಿಗಳನ್ನು ವೇದಿಕೆ ಮೇಲೆ ಕೂರಿಸಿ ಐಐಟಿ ಸ್ಥಾಪನೆ ಹಾಗೂ ವಿಮಾನ ನಿಲ್ದಾಣ ಉದ್ಘಾಟನೆ ಮಾಡುವ ಕೆಲಸ ಮಾಡುತ್ತೇನೆ. ಕುಮಾರಸ್ವಾಮಿಯವರು ಹಲವು ಯೋಜನೆ ಇಟ್ಟು ಕೊಂಡಿದ್ದಾರೆ. ಇಂಡಸ್ಟ್ರೀಯಲ್ ಕ್ಲಸ್ಟರ್ ಮಾಡಬೇಕು ಎನ್ನುವ ಕನಸು ಅವರಿಗಿದೆ ಎಂದರು.

Spread the love

About Laxminews 24x7

Check Also

ಸಮಾನತೆ ಮತ್ತು ಸ್ವಾಭಿಮಾನದ ಸಂಕೇತ: ಭೀಮಾ ಕೋರೆಗಾಂವ್ ವಿಜಯೋತ್ಸವ

Spread the love ಸಮಾನತೆ ಮತ್ತು ಸ್ವಾಭಿಮಾನದ ಸಂಕೇತ: ಭೀಮಾ ಕೋರೆಗಾಂವ್ ವಿಜಯೋತ್ಸವ ​ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿರುವ ‘ಡಾ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ