ನವದೆಹಲಿ: ಸೆಪ್ಟೆಂಬರ್ 25ರಂದು ನಿಗದಿಯಾಗಿದ್ದ ವಾರ್ಷಿಕ ಸಾರ್ಕ್ ವಿದೇಶಾಂಗ ಮಂತ್ರಿಗಳ ಸಭೆ ರದ್ದುಗೊಂಡಿದೆ.
ಅಫ್ಘಾನಿಸ್ತಾನ ಪ್ರತಿನಿಧಿಸಲು ತಾಲಿಬಾನ್ಗೆ ಅನುಮತಿ ನೀಡುವಂತೆ ಪಾಕಿಸ್ತಾನ ಮನವಿ ಸಲ್ಲಿಸಿದ್ದ ಬೆನ್ನಲ್ಲೇ ಸಾರ್ಕ್ ವಿದೇಶಾಂಗ ಮಂತ್ರಿಗಳ ಸಭೆಯನ್ನೇ ರದ್ದುಗೊಳಿಸಲಾಗಿದೆ ಎಂದು ನೇಪಾಳ ವಿದೇಶಾಂಗ ಸಚಿವಾಲಯ ಅಧಿಕೃತ ಮಾಹಿತಿ ನೀಡಿದೆ.
ಸೆಪ್ಟೆಂಬರ್ 25ರಂದು ನ್ಯೂಯಾರ್ಕ್ನಲ್ಲಿ ಯುಎನ್ ಜನರಲ್ ಅಸೆಂಬ್ಲಿಯ 76ನೇ ಅಧಿವೇಶನದಲ್ಲಿ ಭಾಗವಹಿಸಬೇಕಿತ್ತು. ಆದರೆ ಎಲ್ಲಾ ಸದಸ್ಯ ರಾಷ್ಟ್ರಗಳ ಒಪ್ಪಿಗೆಯ ಕೊರತೆಯಿಂದ ಸಭೆ ರದ್ದುಗೊಂಡಿದೆ ಎಂದು ನೇಪಾಳದ ವಿದೇಶಾಂಗ ಸಚಿವಾಲಯ ಹೇಳಿದೆ.