Breaking News

ಗ್ರಾ.ಪಂ. ಚುನಾವಣೆ ಹಿನ್ನೆಲೆ ಮದ್ಯ ಮಾರಾಟಕ್ಕೆ ಬ್ರೇಕ್: ಡಿಸಿ ಮಹಾಂತೇಶ ಹಿರೇಮಠ

Spread the love

ಗ್ರಾ.ಪಂ. ಚುನಾವಣೆ ಹಿನ್ನೆಲೆ ಮದ್ಯ ಮಾರಾಟಕ್ಕೆ ಬ್ರೇಕ್: ಡಿಸಿ ಮಹಾಂತೇಶ ಹಿರೇಮಠ

ಬೆಳಗಾವಿ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಚುನಾವಣೆ ಜರುಗಲಿರುವ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಡಿ.20ರಂದು ಸಂಜೆ 5 ಗಂಟೆಯಿಂದ ಡಿ.22 ಸಂಜೆ 5 ಗಂಟೆವರೆಗೆ ಸಾರಾಯಿ ಮಾರಾಟಕ್ಕೆ ನಿಷೇಧ ಹೇರಿ ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ಮಹತ್ವದ ಆದೇಶ ಹೊರಡಿಸಿದ್ದಾರೆ.

ಅದೇ ರೀತಿ 2ನೇ ಹಂತದಲ್ಲಿ ಚುನಾವಣೆ ಜರುಗಲಿರುವ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಡಿ.25ರಂದು ಸಾಯಂಕಾಲ 5 ಗಂಟೆಯಿಂದ ಡಿ.27ರಂದು ಸಾಯಂಕಾಲ 5 ಗಂಟೆವರಗೆ ಸಾರಾಯಿ ಮಾರಾಟ ಮತ್ತು ಮದ್ಯ ಸೇವಿಸಿ ಬೀದಿಯಲ್ಲಿ ರಂಪಾಟ ಮಾಡುವಂತಿಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ಆದೇಶ ಹೊರಡಿಸಿದ್ದಾರೆ. ಈ ನಿಯಮವನ್ನು ಯಾರಾದ್ರು ಉಲ್ಲಂಘಿಸಿ ಸಾರಾಯಿ ಮಾರಾಟ ಮಾಡುವುದಾಗಲಿ, ಸಾರಾಯಿ ಕುಡಿದು ಗಲಾಟೆ ಮಾಡುವುದಾಗಲಿ ಮಾಡಿದ್ರೆ ಅಂತವರನ್ನು ಮುಂಜಾಗ್ರತಾ ಕ್ರಮವಾಗಿ ಚುನಾವಣೆ ಮುಗಿಯುವವರೆಗೂ ಕಸ್ಟಡಿಯಲ್ಲಿ ಇಡುವಂತೆ ಪೊಲೀಸ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ.


Spread the love

About Laxminews 24x7

Check Also

ಗ್ಯಾರಂಟಿಗಳ ಬಜೆಟ್ ಇಡೀ ರಾಜ್ಯದ ಆರ್ಥಿಕತೆ ಕುಸಿತಕ್ಕೆ ಕಾರಣವಾಗಲಿದೆ

Spread the loveಬೆಳಗಾವಿ: ಶಿಸ್ತುಬದ್ಧ ತೆರಿಗೆ ಪಾವತಿ ಸೇರಿ ದೇಶದ ಕಾನೂನು ಪಾಲನೆಯಲ್ಲಿ ಯೋಜನಾ ಬದ್ಧ ಜೀವನ ವ್ಯವಸ್ಥೆ ಹೊಂದಿರುವ ಕರ್ನಾಟಕಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ