Breaking News

ಧಾರವಾಡ: ಕೊಲೆ ಆರೋಪಿಯನ್ನು ಹೆಡೆಮುರಿ ಕಟ್ಟಿದ ಪೊಲೀಸರು

Spread the love

ಧಾರವಾಡ: ಇಲ್ಲಿನ ಮದಿಹಾಳದಲ್ಲಿ ನಿನ್ನೆ ನಡೆದ ಕೊಲೆಗೆ ಸಂಬಂಧಿಸಿದಂತೆ ರೌಡಿಶೀಟರ್ ಶ್ರೀಶೈಲ ಗಾಣಿಗೇರನನ್ನು ಬಂಧಿಸುವಲ್ಲಿ ಶಹರ ಠಾಣೆ ಪೊಲೀಸರ ಯಶಸ್ವಿಯಾಗಿದ್ದಾರೆ.

ಶಿವಯೋಗಿ ಭಾವಿಕಟ್ಟಿ ಹಾಗೂ ಆರೋಪಿ ಶ್ರೀಶೈಲ ಗಾಣಿಗೇರ ಮಧ್ಯೆ ಆಸ್ತಿಗೆ ಸಂಬಂಧಿಸಿದ ವ್ಯವಹಾರವಿತ್ತು. ಈ ಸಂಬಂಧ ಮೊನ್ನೆ ತಡರಾತ್ರಿ ಶಿವಯೋಗಿ ಹಾಗೂ ಆತನ ಇನ್ನಿಬ್ಬರು ಸಹಚರರಾದ ಈರಪ್ಪ ಯಂಗಳ್ಳಿ ಹಾಗೂ ಸುನೀಲ ಕೋನಣ್ಣವರ ಅವರು ಶ್ರೀಶೈಲನ ಮನೆಗೆ ಹೋಗಿ ಕ್ಯಾತೆ ತೆಗೆದಿದ್ದರು. ಈ ಜಗಳ ವಿಕೋಪಕ್ಕೆ ಹೋಗಿದ್ದರಿಂದ ಶ್ರೀಶೈಲ ರಿವಾಲ್ವಾರ್ ನಿಂದ ಶಿವಯೋಗಿಯನ್ನು ಹತ್ಯೆ ಮಾಡಿದ್ದಾನೆ. ಅಲ್ಲದೇ ಉಳಿದ ಇಬ್ಬರ ಮೇಲೂ ದಾಳಿ ನಡೆಸಿದ್ದು, ಅವರೂ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ನಡೆದ ಕೂಡಲೇ ಆರೋಪಿ ಶ್ರೀಶೈಲ ಅಲ್ಲಿಂದ ಪರಾರಿಯಾಗಿದ್ದ.

ಆರೋಪಿಯನ್ನು ಪತ್ತೆ ಮಾಡಲು ಪೊಲೀಸ್ ಆಯುಕ್ತ ಆರ್.ದಿಲೀಪ್ ಅವರು ಎಸಿಪಿ ಅನುಶಾ ನೇತೃತ್ವದಲ್ಲಿ ತಂಡವೊಂದನ್ನು ರಚಿಸಿದ್ದರು. ಆ ತಂಡ ಇದೀಗ ಆರೋಪಿಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದು, ಆತನಿಂದ ಹತ್ಯೆಗೆ ಬಳಸಿದ ರಿವಾಲ್ವಾರ್ ಹಾಗೂ ಬೈಕ್ ವಶಪಡಿಸಿಕೊಳ್ಳಲಾಗಿದೆ.


Spread the love

About Laxminews 24x7

Check Also

ವಾರ್ಡರ್‌ಗಳಿಂದಲೇ ಕೈದಿಗಳಿಗೆ ಸಿಗರೇಟು, ಗುಟ್ಕಾ ಪೂರೈಕೆ – ಮೂವರ ವಿರುದ್ಧ FIR

Spread the love ಧಾರವಾಡ: ಧಾರವಾಡದ ಕೇಂದ್ರ ಕಾರಾಗೃಹ ಅಂದ್ರೆ ಕೈದಿಗಳಿಗೆ (Prisoners) ಭಯವೇ ಇಲ್ಲದಂತಾಗಿದೆ. ಹಣ ಕೊಟ್ಟರೆ ಕಾರಾಗೃಹದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ