Breaking News

ಕ್ಯೂಬಾಗೆ ತೈಲ ಪೂರೈಸುವ ರಾಷ್ಟ್ರಗಳಿಗೆ ಹೆಚ್ಚುವರಿ ಸುಂಕ; ಮೆಕ್ಸಿಕೊ ಮೇಲೆ ಒತ್ತಡ ಹೆಚ್ಚಿಸಿದ ಟ್ರಂಪ್

Spread the love

ವಾಷಿಂಗ್ಟನ್: ಕ್ಯೂಬಾಗೆ  ತೈಲ ಮಾರಾಟ ಮಾಡುವ ಅಥವಾ ಸರಬರಾಜು ಮಾಡುವ ಯಾವುದೇ ದೇಶದ ಸರಕುಗಳ ಮೇಲೆ ಸುಂಕ  ವಿಧಿಸುವ ಪ್ರಸ್ತಾಪವನ್ನು ಹೊಂದಿರುವ ಕಾರ್ಯಕಾರಿ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್  ಸಹಿ ಹಾಕಿದ್ದಾರೆ. ದ್ವೀಪ ರಾಷ್ಟ್ರಕ್ಕೆ ದೀರ್ಘಕಾಲದಿಂದ ಕಚ್ಚಾ ತೈಲದ ಪ್ರಮುಖ ಪೂರೈಕೆದಾರನಾಗಿರುವ ಮೆಕ್ಸಿಕೊದ ಮೇಲಿನ ಹಿಡಿತವನ್ನು ಬಿಗಿಗೊಳಿಸುವ ಪ್ರಯತ್ನ ಇದಾಗಿದೆ.

ಮೆಕ್ಸಿಕೊ ಅಧ್ಯಕ್ಷ ಕ್ಲೌಡಿಯಾ ಷೈನ್‌ಬಾಮ್ ಅವರು ಇತ್ತೀಚೆಗೆ ತಮ್ಮ ಸರ್ಕಾರ ಕ್ಯೂಬಾಗೆ ತೈಲ ರವಾನೆಯನ್ನು ತಾತ್ಕಾಲಿಕವಾಗಿ ನಿಲುಗಡೆ ಮಾಡಿದೆ ಎಂದು ದೃಢಪಡಿಸಿದ್ದಾರೆ. ಆದರೆ, ಇದು ಅಮೆರಿಕದ ಒತ್ತಡದಿಂದಲ್ಲ, ಬದಲಿಗೆ ಸಾರ್ವಭೌಮ ನಿರ್ಧಾರ ಎಂದು ಅವರು ಒತ್ತಿ ಹೇಳಿದ್ದಾರೆ. ತೈಲ ಪೂರೈಕೆಯು ಕಾರ್ಯಾಚರಣೆ ಮತ್ತು ಮಾರುಕಟ್ಟೆ ಅಂಶಗಳಿಂದಾಗಿ ಏರಿಳಿತಗಳನ್ನು ಕಾಣುತ್ತದೆ ಎಂದೂ ಅವರು ತಿಳಿಸಿದ್ದಾರೆ.

ಪೆಮೆಕ್ಸ್ (ಮೆಕ್ಸಿಕೋದ ಸರ್ಕಾರಿ ತೈಲ ಕಂಪನಿ) ವರದಿಯ ಪ್ರಕಾರ, 2025ರ ಜನವರಿಯಿಂದ ಸೆಪ್ಟೆಂಬರ್‌ವರೆಗೆ ಕ್ಯೂಬಾಗೆ ಸರಾಸರಿ ದಿನಕ್ಕೆ ಸುಮಾರು 20,000 ಬ್ಯಾರೆಲ್‌ಗಳಷ್ಟು ತೈಲ ರಫ್ತು ಮಾಡಲಾಗಿತ್ತು. ಕ್ಯೂಬಾ ಸರ್ಕಾರವನ್ನು ಅಮೆರಿಕದ ರಾಷ್ಟ್ರೀಯ ಭದ್ರತೆಗೆ ‘ಅಸಾಧಾರಣ ಮತ್ತು ಅತ್ಯಾತ್ಮಿಕ ಬೆದರಿಕೆ’ ಎಂದು ಘೋಷಿಸಿ ಈ ಆದೇಶ ಹೊರಡಿಸಲಾಗಿದೆ. ಇದರ ಮೂಲಕ ಟ್ರಂಪ್ ಆಡಳಿತ ಕ್ಯೂಬಾ ವಿರುದ್ಧದ ತನ್ನ ಭೌಗೋಳಿಕ ರಾಜಕೀಯ ಧೋರಣೆಗೆ ಲ್ಯಾಟಿನ್ ಅಮೆರಿಕದ ದೇಶಗಳನ್ನು ಸಮರ್ಥನೆಗೊಳಿಸಲು ಪ್ರಯತ್ನಿಸುತ್ತಿದೆ ಎನ್ನಲಾಗಿದೆ.


Spread the love

About Laxminews 24x7

Check Also

ಸಂವಿಧಾನ ರಕ್ಷಣೆಯ ಕ್ರಾಂತಿಯಾಗಲಿ: ಬಸವರಾಜ ಬೊಮ್ಮಾಯಿ*

Spread the love  ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿಯವರ ಕಲ್ಯಾಣ ರಾಜ್ಯದ ಕನಸಿಗೆ ಎಲ್ಲರೂ ಬೆಂಬಲ ಕೊಟ್ಟಾಗ ಮಾತ್ರ ವಿಕಸಿತ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ