ಬೆಂಗಳೂರು: ರಾಜ್ಯದ ಜನರಿಗೆ ಮಂಗಳವಾರ ಆತಂಕ ಸೃಷ್ಟಿಸಿದ್ದ ಕೊರೊನಾ ಸೋಂಕಿತರ ಸಂಖ್ಯೆಯು ಇಂದು ಇಳಿಕೆ ಕಂಡಿದೆ. ಇಂದು ರಾಜ್ಯದಲ್ಲಿ 67 ಮಂದಿಗೆ ಕೋವಿಡ್-19 ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 1,462ಕ್ಕೆ ಏರಿಕೆಯಾಗಿದೆ.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾಹಿತಿ ಪ್ರಕಾರ, ಇಂದು ಹಾಸನ 21, ಬೀದರ್ 10, ಮಂಡ್ಯ 8, ಉಡುಪಿ 6, ಕಲಬುರಗಿ 7, ಬೆಂಗಳೂರು, ತುಮಕೂರು, ರಾಯಚೂರಿನಲ್ಲಿ ತಲಾ 4, ಉತ್ತರ ಕನ್ನಡ, ದಕ್ಷಿಣ ಕನ್ನಡ, ಯಾದಗಿರಿಯಲ್ಲಿ ಒಬ್ಬರಿಗೆ ಸೋಂಕು ದೃಢಪಟ್ಟಿದೆ. 67 ಜನ ಸೋಂಕಿತರಲ್ಲಿ 52 ಮಂದಿ ಅಂತಾರಾಜ್ಯ (51 ಮಹಾರಾಷ್ಟ್ರ, 1 ವಿಶಾಖಪಟ್ಟಣಂ)ದಿಂದ ಬಂದವರೇ ಆಗಿದ್ದಾರೆ. ಮಂಗಳವಾರ ಒಂದೇ ದಿನ 149 ಜನರಿಗೆ ಸೋಂಕು ದೃಢಪಟ್ಟಿತ್ತು.
ಇದೇ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಸುರೇಶ್ ಕುಮಾರ್, ಇವತ್ತು ಒಟ್ಟು 8,182 ಜನರ ಸ್ಯಾಂಪಲ್ ಟೆಸ್ಟ್ ಮಾಡಲಾಗಿದೆ. ಐಸಿಎಂಆರ್ ನಿಂದ 50 ಲ್ಯಾಬ್‍ಗೆ ಮಂಜೂರಾತಿ ಸಿಕ್ಕಿದೆ. ಈಗಾಗಲೇ 44 ಓಪನ್ ಆಗಿವೆ ಎಂದು ಮಾಹಿತಿ ನೀಡಿದ್ದಾರೆ.
ಬೆಂಗಳೂರಿಗೆ ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲಿ 180 ಜನ ಬಂದಿದ್ದಾರೆ. ಈ ಪೈಕಿ 22 ಮಂದಿಗೆ ಟೆಸ್ಟ್ ಮಾಡಲಾಗಿದೆ. ವಿಮಾನದಲ್ಲಿ ಬಂದವರಲ್ಲಿ 94 ಜನರು ಇದ್ದಾರೆ. ಯಾರಿಗೂ ಸೋಂಕಿನ ಲಕ್ಷಣ ಕಂಡು ಬಂದಿಲ್ಲ ಎಂದು ತಿಳಿಸಿದರು.
ಬೆಳಗ್ಗಿನ ಬುಲೆಟಿನ್‍ನಲ್ಲಿ ಪೂರ್ಣ ಮಾಹಿತಿ ಕೊಡ ವಿಚಾರವಾಗಿ ಸ್ಪಷ್ಟನೆ ನೀಡಿದ ಸಚಿವರು, ಯಾವುದನ್ನೂ ಮುಚ್ಚಿಡುವ ಪ್ರಶ್ನೆ ಇಲ್ಲ. ಎಲ್ಲ ವರದಿಯನ್ನು ಕೊಡ್ತೀವಿ. ಸೋಂಕಿತರ ಪೂರ್ಣ ಮಾಹಿತಿ ಸಿಗುವುದು ತಡವಾಗುತ್ತಿದೆ. ಹಾಗಾಗಿ ಬೆಳಗ್ಗಿನ ಬುಲೆಟಿನ್‍ನಲ್ಲಿ ಸೋಂಕಿತರ ವಿವರಣೆ ನೀಡಲು ಸಾಧ್ಯವಾಗಿಲ್ಲ. ಹೆಚ್ಚುವರಿಯಾಗಿ ಪ್ರತ್ಯೇಕವಾಗಿ ಎಲ್ಲ ಮಾಹಿತಿ ಕೊಡುತ್ತೇವೆ ಎಂದರು.
ಸಾವು: ರೋಗಿ-1236, ಬೆಂಗಳೂರಿನ 43 ವರ್ಷದ ಪುರುಷ ಇಂದು ಸಾವನ್ನಪ್ಪಿದ್ದಾರೆ. ಅವರು ಹೈಪರ್‍ಟೆನಷನ್ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಅವರು ತಮಿಳುನಾಡಿನ ವೆಲ್ಲೂರುಗೆ ಪ್ರಯಾಣ ಮಾಡಿರುವ ಹಿನ್ನಲೆ ಹೊಂದಿದ್ದು, ಬೆಂಗಳೂರಿಗೆ ಮೇ 18ರಂದು ವಾಪಸ್ ಆಗಿದ್ದರು. ಆರೋಗ್ಯ ಸಮಸ್ಯೆ ಹಿನ್ನೆಲೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ಈವರೆಗೂ 9 ಜನರು ಕೊರೊನಾದಿಂದ ಮೃತಪಟ್ಟಿದ್ದು, ರಾಜ್ಯದಲ್ಲಿ ಮೃತರ ಸಂಖ್ಯೆ 41ಕ್ಕೆ ಏರಿಕೆಯಾಗಿದೆ.
ಡಿಸ್ಚಾರ್ಜ್:
ಧಾರವಾಡ, ದಾವಣಗೆರೆ, ಮಂಡ್ಯ ಸೇರಿ ರಾಜ್ಯದ ವಿವಿಧ ಆಸ್ಪತ್ರೆಗಳಿಂದ ಇಂದು 13 ಮಂದಿ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಧಾರವಾಡ ಇಬ್ಬರು (ರೋಗಿ-430, 431), ದಾವಣಗೆರೆ 7 ಮಂದಿ (ರೋಗಿ-580, 583, 584, 585, 616, 617, 635) ಬೆಂಗಳೂರಿನಲ್ಲಿ ಒಬ್ಬರು (ರೋಗಿ-101) ಹಾಗೂ ಮಂಡ್ಯದಲ್ಲಿ ಮೂವರು (ರೋಗಿ-481, 567, 638) ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಸೋಂಕಿತರ ವಿವರ:
1. ರೋಗಿ-1396: ಬೆಂಗಳೂರು ನಗರದ 30 ವರ್ಷದ ಪುರುಷ, ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
2. ರೋಗಿ-1397: ಬೆಂಗಳೂರು ನಗರದ 28 ವರ್ಷದ ಪುರುಷ, ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
3. ರೋಗಿ-1398: ಹಾಸನದ 30 ವರ್ಷದ ಪುರುಷ, ಮುಂಬೈ ಪ್ರಯಾಣ ಹಿನ್ನೆಲೆ
4. ರೋಗಿ-1399: ಹಾಸನದ 50 ವರ್ಷದ ಪುರುಷ, ಮುಂಬೈ ಪ್ರಯಾಣ ಹಿನ್ನೆಲೆ
5. ರೋಗಿ-1400: ಮಂಡ್ಯದ 36 ವರ್ಷದ ಹೆಣ್ಣು, ಮುಂಬೈ ಪ್ರಯಾಣದ ಹಿನ್ನೆಲೆ
6. ರೋಗಿ-1401: ತುಮಕೂರಿನ 28 ವರ್ಷದ ಮಹಿಳೆ, ಮುಂಬೈ ಪ್ರಯಾಣ ಹಿನ್ನೆಲೆ
7. ರೋಗಿ-1402: ತುಮಕೂರಿನ 30 ವರ್ಷದ ಮಹಿಳೆ, ಮುಂಬೈ ಪ್ರಯಾಣದ ಹಿನ್ನೆಲೆ
8. ರೋಗಿ-1403: ತುಮಕೂರಿನ 10 ವರ್ಷದ ಬಾಲಕ, ಮುಂಬೈ ಪ್ರಯಾಣದ ಹಿನ್ನೆಲೆ
9. ರೋಗಿ-1404: ತುಮಕೂರಿನ 12ದ ವರ್ಷ ಬಾಲಕಿ, ಮುಂಬೈ ಪ್ರಯಾಣದ ಹಿನ್ನೆಲೆ
10. ರೋಗಿ-1405: ಬೆಂಗಳೂರಿನ 31 ವರ್ಷದ ಮಹಿಳೆ, ರೋಗಿ ಸಂಖ್ಯೆ 701ರ ದ್ವಿತೀಯ ಸಂಪರ್ಕ
11. ರೋಗಿ-1406: ಬೆಂಗಳೂರಿನ 40 ವರ್ಷದ ಪುರುಷ, ರೋಗಿ ಸಂಖ್ಯೆ 701ರ ದ್ವಿತೀಯ ಸಂಪರ್ಕ
12. ರೋಗಿ-1407: ಮಂಡ್ಯದ 10 ವರ್ಷದ ಬಾಲಕಿ, ಮುಂಬೈ ಪ್ರಯಾಣ ಹಿನ್ನೆಲೆ
13. ರೋಗಿ-1408: ಮಂಡ್ಯದ 39 ವರ್ಷದ ಪುರುಷ, ಮುಂಬೈ ಪ್ರಯಾಣ ಹಿನ್ನೆಲೆ
14. ರೋಗಿ-1409: ಮಂಡ್ಯದ 14 ವರ್ಷದ ಬಾಲಕಿ, ಮುಂಬೈ ಪ್ರಯಾಣದ ಹಿನ್ನೆಲೆ
15. ರೋಗಿ-1410: ಮಂಡ್ಯದ 44 ವರ್ಷದ ಪುರುಷ, ಮುಂಬೈ ಪ್ರಯಾಣದ ಹಿನ್ನೆಲೆ
16. ರೋಗಿ-1411: ಮಂಡ್ಯದ 66 ವರ್ಷದ ಮಹಿಳೆ, ಮುಂಬೈ ಪ್ರಯಾಣದ ಹಿನ್ನೆಲೆ
17. ರೋಗಿ-1412: ಮಂಡ್ಯದ 27 ವರ್ಷದ ಮಹಿಳೆ, ಮುಂಬೈ ಪ್ರಯಾಣದ ಹಿನ್ನೆಲೆ
18, ರೋಗಿ-1413: ಉತ್ತರ ಕನ್ನಡದ 46 ವರ್ಷದ ಪುರುಷ, ಸೊಲ್ಲಾಪುರದ ಪ್ರಯಾಣ ಹಿನ್ನೆಲೆ
19. ರೋಗಿ-1414: ಹಾಸನದ 35 ವರ್ಷ ಮಹಿಳೆ, ವಿಶಾಖಪಟ್ಟಣ ಪ್ರಯಾಣ ಹಿನ್ನೆಲೆ
20. ರೋಗಿ-1415: ಹಾಸನದ 42 ವರ್ಷ ಪುರುಷ, ಮುಂಬೈ ಪ್ರಯಾಣದ ಹಿನ್ನೆಲೆ
21. ರೋಗಿ-1416: ಹಾಸನದ 36 ವರ್ಷದ ಯುವಕ- ಮುಂಬೈ ಪ್ರಯಾಣದ ಹಿನ್ನೆಲೆ
22. ರೋಗಿ-1417: ಹಾಸನದ 24 ವರ್ಷದ ಯುವತಿ- ಮುಂಬೈ ಪ್ರಯಾಣದ ಹಿನ್ನೆಲೆ
23. ರೋಗಿ-1418: ಹಾಸನದ 22 ವರ್ಷದ ಯುವಕ- ಮುಂಬೈ ಪ್ರಯಾಣದ ಹಿನ್ನೆಲೆ
24. ರೋಗಿ-1419: ಹಾಸನದ 64 ವರ್ಷದ ವೃದ್ಧ- ಮುಂಬೈ ಪ್ರಯಾಣದ ಹಿನ್ನೆಲೆ
25. ರೋಗಿ-1420: ಹಾಸನದ 40 ವರ್ಷದ ವ್ಯಕ್ತಿ- ಮುಂಬೈ ಪ್ರಯಾಣದ ಹಿನ್ನೆಲೆ
26. ರೋಗಿ-1421: ಹಾಸನದ 45 ವರ್ಷದ ಮಹಿಳೆ- ಮುಂಬೈ ಪ್ರಯಾಣದ ಹಿನ್ನೆಲೆ
27. ರೋಗಿ-1422: ಹಾಸನದ 31 ವರ್ಷದ ಮಹಿಳೆ- ಮುಂಬೈ ಪ್ರಯಾಣದ ಹಿನ್ನೆಲೆ
28. ರೋಗಿ-1423: ಹಾಸನದ 22 ವರ್ಷದ ಯುವಕ- ಜಲಗಾವ್, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
29. ರೋಗಿ-1424: ಕಲಬುರಗಿಯ 35 ವರ್ಷದ ಯುವಕ- ರತ್ನಗಿರಿ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
30. ರೋಗಿ-1425: ಕಲಬುರಗಿಯ 25 ವರ್ಷದ ಯುವಕ- ನಂದೂರ್‍ಬಾರ್, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
31. ರೋಗಿ-1426: ಕಲಬುರಗಿಯ 22 ವರ್ಷದ ಯುವತಿ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
32. ರೋಗಿ-1427: ಕಲಬುರಗಿಯ 46 ವರ್ಷದ ವ್ಯಕ್ತಿ- ರತ್ನಗಿರಿ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
33. ರೋಗಿ-1428: ಕಲಬುರಗಿಯ 26 ವರ್ಷದ ಯುವಕ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
34. ರೋಗಿ-1429: ಕಲಬುರಗಿಯ 50 ವರ್ಷದ ವ್ಯಕ್ತಿ- ಮುಂಬೈ, ಮಹಾರಾಷ್ಟ್ರ ಪ್ರಯಾಣದ ಹಿನ್ನೆಲೆ
35. ರೋಗಿ-1430: ಬೀದರ್ ನ 24 ವರ್ಷದ ಯುವತಿ- ರೋಗಿ 1041ರ ಸಂಪರ್ಕ
36. ರೋಗಿ-1431: ಬೀದರ್ ನ 38 ವರ್ಷದ ಮಹಿಳೆ- ರೋಗಿ 1041ರ ಸಂಪರ್ಕ
37. ರೋಗಿ-1432: ಉಡುಪಿಯ 55 ವರ್ಷದ ವ್ಯಕ್ತಿ- ಮುಂಬೈ ಪ್ರಯಾಣದ ಹಿನ್ನೆಲೆ
38. ರೋಗಿ-1433: ಉಡುಪಿಯ 04 ವರ್ಷದ ಬಾಲಕಿ- ಮುಂಬೈ ಪ್ರಯಾಣದ ಹಿನ್ನೆಲೆ
39. ರೋಗಿ-1434: ಉಡುಪಿಯ 15 ವರ್ಷದ ಬಾಲಕಿ- ಮುಂಬೈ ಪ್ರಯಾಣದ ಹಿನ್ನೆಲೆ
40. ರೋಗಿ-1435: ಉಡುಪಿಯ 74 ವರ್ಷದ ವೃದ್ಧ- ಮುಂಬೈ ಪ್ರಯಾಣದ ಹಿನ್ನೆಲೆ
41. ರೋಗಿ-1436: ಉಡುಪಿಯ 31 ವರ್ಷದ ಮಹಿಳೆ- ಮುಂಬೈ ಪ್ರಯಾಣ ಹಿನ್ನಲೆ
42. ರೋಗಿ-1437: ದಕ್ಷಿಣ ಕನ್ನಡ 40 ವಷದ ಮಹಿಳೆ. ತೀವ್ರ ಉಸಿರಾಟದ ತೊಂದರೆ
42. ರೋಗಿ-1438: ಹಾಸನ 13 ವರ್ಷದ ಬಾಲಕ. ಮುಂಬೈ ಪ್ರಯಾಣ ಹಿನ್ನಲೆ
44. ರೋಗಿ-1439: ಹಾಸನ 37 ವರ್ಷದ ಪುರುಷ- ಮುಂಬೈ ಪ್ರಯಾಣ ಹಿನ್ನಲೆ
45. ರೋಗಿ-1440: ಹಾಸನ 38 ವರ್ಷದ ಯುವಕ- ಮುಂಬೈಪ್ರಯಾಣ ಹಿನ್ನಲೆ
46. ರೋಗಿ-1441: ಹಾಸನ 16 ವರ್ಷದ ಬಾಲಕ- ಮುಂಬೈ ಪ್ರಯಾಣ ಹಿನ್ನಲೆ
47. ರೋಗಿ-1442: ಹಾಸನ 13 ವರ್ಷದ ಬಾಲಕ- ಮುಂಬೈ ಪ್ರಯಾಣ ಹಿನ್ನಲೆ
48. ರೋಗಿ-1443; ಹಾಸನ 35 ವರ್ಷದ ಮಹಿಳೆ- ಮುಂಬೈ ಪ್ರಯಾಣ ಹಿನ್ನಲೆ
49. ರೋಗಿ-1444; ಹಾಸನ 61 ವರ್ಷದ ಮಹಿಳೆ- ಮುಂಬೈ ಪ್ರಯಾಣ ಹಿನ್ನಲೆ
50. ರೋಗಿ-1445: ಹಾಸನ 28 ವರ್ಷದ ಮಹಿಳೆ- ಮುಂಬೈ ಪ್ರಯಾಣ ಹಿನ್ನಲೆ
51. ರೋಗಿ-1446 ಹಾಸನ 43 ವರ್ಷದ ಪುರುಷ- ಮುಂಬೈ ಪ್ರಯಾಣ ಹಿನ್ನಲೆ
52. ರೋಗಿ-1447: ಹಾಸನ 07 ವರ್ಷದ ಬಾಲಕಿ- ಮುಂಬೈ ಪ್ರಯಾಣ ಹಿನ್ನಲೆ
53. ರೋಗಿ-1448: ಯಾದಗಿರಿ 55 ವರ್ಷದ ಮಹಿಳೆ – ಮುಂಬೈ ಪ್ರಯಾಣ ಹಿನ್ನಲೆ
54. ರೋಗಿ-1449: ಉಡುಪಿ 47 ವರ್ಷದ ಮಹಿಳೆ – ಮುಂಬೈ ಪ್ರಯಾಣ ಹಿನ್ನಲೆ
55. ರೋಗಿ-1450: ಮಂಡ್ಯ 06 ವರ್ಷದ ಬಾಲಕಿ – ಮುಂಬೈ ಪ್ರಯಾಣ ಹಿನ್ನಲೆ
56. ರೋಗಿ-1451: ಬೀದರ್‌ನ 12 ವರ್ಷದ ಬಾಲಕಿ – ರೋಗಿ-981ರ ಸಂಪರ್ಕ
57. ರೋಗಿ-1452: ಬೀದರ್‌ನ 18 ವರ್ಷದ ಬಾಲಕ – ರೋಗಿ-943ರ ಸಂಪರ್ಕ
58. ರೋಗಿ-1453: ಬೀದರ್‌ನ 56 ವರ್ಷದ ಪುರುಷ – ರೋಗಿ-772ರ ಸಂಪರ್ಕ
59. ರೋಗಿ-1454: ಬೀದರ್‌ನ 15 ವರ್ಷದ ಬಾಲಕ – ರೋಗಿ-943ರ ಸಂಪರ್ಕ
60. ರೋಗಿ-1455: ಬೀದರ್‌ನ 45 ವರ್ಷದ ಪುರುಷ – ರೋಗಿ-943 ರ ಸಂಪರ್ಕ
61. ರೋಗಿ-1456: ಬೀದರ್‌ನ 72 ವರ್ಷದ ಪುರುಷ. ರೋಗಿ-981ರ ಸಂಪರ್ಕ
62. ರೋಗಿ-1457: ಬೀದರ್‌ನ 09 ವರ್ಷದ ಬಾಲಕಿ – ರೋಗಿ.648ರ ಸಂಪರ್ಕ
63. ರೋಗಿ-1458: ಬೀದರ್‌ನ 40 ವರ್ಷದ ಮಹಿಳೆ – ರೋಗಿ.590ರ ಸಂಪರ್ಕ
64. ರೋಗಿ-1459: ರಾಯಚೂರಿನ 26 ವರ್ಷದ ಮಹಿಳೆ- ಮುಂಬೈ ಪ್ರಯಾಣ ಹಿನ್ನಲೆ
65. ರೋಗಿ-1460: ರಾಯಚೂರಿನ 40 ವರ್ಷದ ಮಹಿಳೆ- ಮುಂಬೈ ಪ್ರಯಾಣ ಹಿನ್ನಲೆ
66. ರೋಗಿ-1461 ರಾಯಚೂರಿನ 12 ವರ್ಷದ ಬಾಲಕಿ- ಮುಂಬೈ ಪ್ರಯಾಣ ಹಿನ್ನಲೆ
67. ರೋಗಿ- 1462 ರಾಯಚೂರಿನ 30 ವರ್ಷದ ಮಹಿಳೆ- ಮುಂಬೈ ಪ್ರಯಾಣ ಹಿನ್ನಲೆ