ಚಿಕ್ಕೋಡಿ: ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಊಟೋಪಚಾರ ನೀಡಿ ಆರೈಕೆ ಮಾಡಿದ್ದ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದ ಜಗಣಭೀ ಬಾಪುಲಾಲ್ ಪಟೇಲ್ ಅಜ್ಜಿ (108) ಇಂದು ನಿಧನರಾಗಿದ್ದಾರೆ.
1972ರಲ್ಲಿ ಮಹಾರಾಷ್ಟ್ರದ ಔರವಾಡ ಗ್ರಾಮದ ದೇವಸ್ಥಾನದ ಜಮೀನು ವಾದವನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು ಕೈಗೆತ್ತಿಕೊಂಡಿದ್ದರು. ಈ ಹಿನ್ನೆಲೆ ಚಿಕ್ಕೋಡಿಯ ಕರೋಶಿ ಗ್ರಾಮದಲ್ಲಿ ಅಂಬೇಡ್ಕರ್ ಅವರು 9 ದಿನ ತಂಗಿದ್ದರು. ಈ ವೇಳೆ ಅವರಿಗೆ ಜಗಣಭೀ ಅವರೇ ಊಟೋಪಚಾರದ ವ್ಯವಸ್ಥೆಯನ್ನು ಮಾಡಿದ್ದರು. ಅಂದು ಅಂಬೇಡ್ಕರ್ ಮುನ್ನಿ ಎಂದು ಜಗಣಭಿಯವರನ್ನು ಕರೆಯುತ್ತಿದ್ದರು.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಜಗಣಭೀ ಅಜ್ಜಿ ಇಂದು ಸ್ವ ಗ್ರಾಮ ಕರೋಶಿಯಲ್ಲಿ ಕೊನೆಯುಸಿರೆಳೆದಿದ್ದಾರೆ. ಜಗಣಭೀ ಅವರಿಗೆ 108 ವಯಸ್ಸಾಗಿತ್ತು.