ಚಾಮರಾಜನಗರ: ರಾಜ್ಯದಲ್ಲಿ ದಿನೇ ದಿನೇ ಕೊರೊನಾ ಸೋಂಕು ಹೆಚ್ಚಾಗುತ್ತಿದೆ. ಇದೀಗ ಹಸಿರು ವಲಯದಲ್ಲಿರುವ ಗಡಿ ಜಿಲ್ಲೆಗೂ ಮಹಾಮಾರಿ ಕೊರೊನಾ ಬರುವ ಆತಂಕ ಈಗ ಹೆಚ್ಚಾಗಿದೆ.
ಮಹಾರಾಷ್ಟ್ರದ ಪುಣೆಯಿಂದ ಬಂದ ಕುಟುಂಬದಲ್ಲಿನ ಯುವಕನಿಗೆ ಸೋಂಕಿನ ಲಕ್ಷಣ ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ. ಶನಿವಾರ ಮಹಾರಾಷ್ಟ್ರದಿಂದ ಬಂದಿದ್ದ 22 ವರ್ಷದ ಮೆಡಿಕಲ್ ವಿದ್ಯಾರ್ಥಿ ಒಬ್ಬನಿಗೆ ಬೇಧಿ, ಹೊಟ್ಟೆನೋವು, ವಿಪರೀತ ಕೆಮ್ಮು ಕಾಣಿಸಿಕೊಂಡಿದೆ. ಈ ಮೂಲಕ ಚಾಮರಾಜನಗರಕ್ಕೂ ಕೊರೊನಾ ಬರುತ್ತಾ ಎಂಬ ಆತಂಕ ಜಿಲ್ಲೆಯ ಜನರಲ್ಲಿ ಮೂಡಿದೆ.
ಮೆಡಿಕಲ್ ವಿದ್ಯಾರ್ಥಿಯ ತಾಯಿ ಮನೆ ಹನೂರು ತಾಲೂಕಿನ ಪಾಲಿಮೇಡು ಗ್ರಾಮದಲ್ಲಿದೆ. ಹೀಗಾಗಿ ಚಾಮರಾಜನಗರ ಸೇಫ್ ಝೋನ್ ಅಂತ ಬಂದಿದ್ದಾನೆ. ಪುಣೆಯಿಂದ ಬೆಂಗಳೂರಿಗೆ ಶ್ರಮಿಕ್ ರೈಲಿನಲ್ಲಿ ಬಂದಿದ್ದು, ಬೆಂಗಳೂರಿನಿಂದ ಮಾವನ ಜೊತೆ ಕಾರಿನಲ್ಲಿ ಬಂದಿದ್ದಾನೆ.
ಮೆಡಿಕಲ್ ವಿದ್ಯಾರ್ಥಿಯನ್ನು ಹನೂರು ಪಟ್ಟಣದ ಹಾಸ್ಟೆಲ್‍ನಲ್ಲಿ ಕ್ವಾರಂಟೈನ್‍ನಲ್ಲಿರಿಸಲಾಗಿತ್ತು. ಸೋಂಕಿನ ಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೋವಿಡ್ ಆಸ್ಪತ್ರೆಗೆ ಶಿಪ್ಟ್ ಮಾಡಿದೆ. ಹಸಿರು ವಲಯದಲ್ಲಿ ತಳಮಳ ಆರಂಭಗೊಂಡಿದ್ದು, ಸಂಜೆ ಬಿಡುಗಡೆಯಾಗುವ ಹೆಲ್ತ್ ಬುಲೆಟಿನ್‍ನಲ್ಲಿ ಎಲ್ಲಾ ಅನುಮಾನಗಳಿಗೆ ತೆರೆ ಬೀಳಲಿದೆ.