ಬೆಳಗಾವಿ : ನಗರದ ಶಹಾಪುರ-ವಡಗಾವಿ ಮುಖ್ಯ ರಸ್ತೆಗೆ ದೇವರ ದಾಸಿಮಯ್ಯನವರ ಹೆಸರಿಡುವಂತೆ ಆಗ್ರಹಿಸಿ ಜಿಲ್ಲಾ ನೇಕಾರರ ಬಳಗದ ಸದಸ್ಯರು ಗುರುವಾರ ಗುರುವಾರ ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತ ಹಾಗೂ ಮೇಯರ್ಗೆ ಮನವಿ ಸಲ್ಲಿಸಿದ್ದಾರೆ.
ವಡಗಾವಿ, ಭಾರತ ನಗರ, ಖಾಸಬಾಗ ಹಾಗೂ ಹಳೇಬೆಳಗಾವಿ ಭಾಗದಲ್ಲಿ ಸುಮಾರು 40 ಸಾವಿರಕ್ಕೂ ಹೆಚ್ಚು ಜನ ನೇಕಾರರು ವಾಸವಾಗಿದ್ದೇವೆ. ನಾವು ನೇಕಾರರ ಸಂತ ಆದ್ಯ ವಚನಕರ ದೇವರ ದಾಸಿಮಯ್ಯನವರನ್ನು ಪೂಜಿಸುವ ಸಮುದಾಯದವರಾಗಿದ್ದೇವೆ. ಈ ಭಾಗದ ರಸ್ತೆಗೆ ನಮ್ಮ ಸಮುದಾಯದ ಸಂತರ ಹೆಸರಿಡಬೇಕು. ಶಹಾಪುರ-ವಡಗಾವಿಯ ಮುಖ್ಯ ರಸ್ತೆ 1ಕಿಮೀ ಅಂತರದಲ್ಲಿ ಯಾರ ಹೆಸರು ಇರುವುದಿಲ್ಲ. ಈ ರಸ್ತೆಗೆ ದಾಸಿಮಯ್ಯನವರ ಹೆಸರು ಸೂಕ್ತವೆಂದು ಆಗ್ರಹಿಸಿ ಕಳೆದ ಆರು ವರ್ಷಗಳಿಂದ ಹೋರಾಟ ಮಾಡುತ್ತ ಬಂದಿದ್ದೇವೆ. ಹೀಗಾಗಿ ನಮ್ಮ ಮನವಿಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.
ಬಳಗದ ಅಧ್ಯಕ್ಷ ಶ್ರೀನಿವಾಸ ತಾಳೂಕರ, ಆನಂದ ಲೋಕರಿ, ಎಸ್.ಸಿ.ಬಣಕಾರ, ಕೆ.ಬಿ.ತಾಳೂಕರ, ಈರಣ್ಣ ಗರಗ ಇತರರಿದ್ದರು.
Laxmi News 24×7